Karnataka Times
Trending Stories, Viral News, Gossips & Everything in Kannada

Gold Price: ಮತ್ತೆ ಗಗನಕ್ಕೆರಿದ ಬಂಗಾರದ ಬೆಲೆ… ಎಷ್ಟಕ್ಕೆ ಏರಿದೆ ಗೊತ್ತಾ?

advertisement

ಇಂದು ಪ್ರತಿಯೊಬ್ಬರೂ ಹೂಡಿಕೆ ಅಂತ ಬಂದಾಗ ಹೆಚ್ಚಿನ ಆದ್ಯತೆ ಯನ್ನು ನೀಡುವುದು ಚಿನ್ನಕ್ಕಾಗಿ, ಚಿನ್ನ ಕ್ಕೆ ಬೇಡಿಕೆ ಅನ್ನೋದು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಬಂದಿದೆ.ಹಾಗಾಗಿ ಕಷ್ಟ ಕಾಲದಲ್ಲಿಯಾದರೂ ಸಹಾಯಕವಾಗಲಿ ಎಂದು ಚಿನ್ನ ಖರೀದಿಗೆ (Gold Purchase) ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ‌. ಇನ್ನೂ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಕೂಡ ಪ್ರತಿಯೊಬ್ಬರಿಗೂ ತಿಳಿದೆ ಇದೆ. ಹಿಂದಿನಿಂದಲೂ ಚಿನ್ನಕ್ಕೆ ಅತೀ ಬೇಡಿಕೆ ಇದ್ದು ಇದೇ ಕಾರಣಕ್ಕೆ ಜನರು ಆಭರಣ ಖರೀದಿ ಇಷ್ಟ ಪಡುತ್ತಾರೆ.ಇಂದು ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ರೀತಿಯ ಮಾರ್ಗಗಳು ಕೂಡ ಇವೆ.

ಬೆಲೆ ಹೆಚ್ಚಳ:

ಇಂದು ಚಿನ್ನವನ್ನು ಡಿಜಿಟಲ್ ಗೋಲ್ಡ್, ಗೋಲ್ಡ್ ಫಂಡ್ಸ್ ಹಾಗೂ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಕೂಡ ಹೂಡಿಕೆ ಮಾಡಬಹುದಾಗಿದೆ. ಇಂದು ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಬೆಲೆಯು ಕೂಡ ಹೆಚ್ಚಾಗಿದೆ. ಜಗತ್ತಿನ ಬಹುತೇಕ ಆರ್ಥಿಕತೆಗಳು ಚೇತರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದು ಹಣದುಬ್ಬರ ಕೂಡ ಏರಿಕೆ ಯಾಗಿದೆ.ಇಂದು ಕೂಡ ಚಿನ್ನದ ಬೆಲೆ (Gold Price) ಯಲ್ಲಿ ಏರಿಕೆ ಯಾಗಿದೆ.

ಎಷ್ಟಾಗಿದೆ ಬೆಲೆ?

 

advertisement

 

ಇಂದು ಒಂದು ಗ್ರಾಂ 22 ಕ್ಯಾರೆಟ್  (22 Carat) ಆಭರಣ ಚಿನ್ನದ ಬೆಲೆ -6,010 ರೂ ಆಗಿದ್ದು 24 ಕ್ಯಾರೆಟ್ (24 Carat) ಬಂಗಾರದ ಬೆಲೆ 6,556 ರೂ ಆಗಿದೆ. ಇನ್ನೂ ಎಂಟು ಗ್ರಾಂ ಚಿನ್ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ರೂ. 48,080 ಆಗಿದೆ. ಹಾಗೇ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ (Gold Price) ಯು ರೂ. 60,100 ಆಗಿದ್ದು ಚೆನ್ನೈ ನಲ್ಲಿ 60,900, ಮುಂಬೈ 60,100 ಮತ್ತು ಕೋಲ್ಕತ್ತಾದಲ್ಲಿ 60,100 ಹಾಗೇ ರದೆಹಲಿಯಲ್ಲಿ 60,250 ರೂ. ಆಗಿದೆ.

ಬೆಳ್ಳಿ ಬೆಲೆ:

ಇಂದು‌ ಚಿನ್ನದಂತೆ ಬೆಳ್ಳಿ ಕೂಡ ಶುಭ ಸಮಾರಂಭಗಳಿಗೆ ಅಗತ್ಯ ವಾಗಿ ಬೇಕಿದ್ದು ಇಂದು ಬೆಳ್ಳಿಯ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬಂದಿದೆ. ಬೆಳ್ಳಿಯ ಬೆಲೆಯೂ ಪ್ರತಿ ಕೆಜಿಗೆ 100 ರೂಪಾಯಿ ಏರಿಕೆಯಾಗಿದ್ದು, 75,100 ರೂ. ಆಗಿದೆ.ಹಾಗೆಯೇ ಬೆಂಗಳೂರಲ್ಲಿ 10 gm, 100 gm, 1000 gm ಬೆಳ್ಳಿ ದರ ರೂ. 741 ರೂ. 7410 ಹಾಗೂ ರೂ. 74,100 ಆಗಿದೆ.

advertisement

Leave A Reply

Your email address will not be published.