Karnataka Times
Trending Stories, Viral News, Gossips & Everything in Kannada

Krishna Byre Gowda: ಜಮೀನು ಇರದ ರೈತರಿಗೆ ಬೆಳ್ಳಂಬೆಳಗ್ಗೆ ಸಿಹಿಸುದ್ದಿ

advertisement

ಅರಣ್ಯ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಭೂಮಿಯಲ್ಲಿ ಕೃಷಿ ಮಾಡುವುದು ಅಕ್ರಮ ವಿಚಾರವಾಗಿದೆ. ಹಾಗಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಭೂಮಿಯಲ್ಲಿ ಗಡಿವಿಚಾರವಾಗಿ ಆಗಾಗ ತೊಂದರೆ ಆಗುತ್ತಲೇ ಇರುತ್ತದೆ. ರೈತರಿಗೂ ಕೂಡ ಭೂ ನಕ್ಷೆ ಇರದ ಹಿನ್ನೆಲೆಯಲ್ಲಿ ಸರಕಾರದ ಯೋಜನೆ ಯೋಚನೆಗಳು ರೈತರಿಗೆ ಸಂಕಷ್ಟ ತಂದೊಡ್ಡಲಿದೆ. ಇಲಾಖೆಯ ಸೇವೆಗಳು ಸಾಮಾನ್ಯವಾಗಿ ರೈತರಿಗೆ ತಲುಪುವುದೆ ದುಸ್ತರವಾಗಿದೆ. ಹಾಗಾಗಿ ಸರಕಾರ ನೂತನ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ.

ರಾಜ್ಯಾದ್ಯಂತ ಅನೇಕ ರೈತರು ತಾವು ಮಾಡುತ್ತಿರುವ ಕೃಷಿ ಭೂಮಿಗೆ ನಕ್ಷೆ ಹೊಂದಿಲ್ಲ. ಹಾಗಿದ್ದರೂ ಕೃಷಿಯಲ್ಲಿ ನಿರತರಾಗಿದ್ದಾರೆ. ಹಾಗಾಗಿ ತಮ್ಮನ್ನು ಎಲ್ಲಿ ಒಕ್ಕಲೆಬ್ಬಿಸುತ್ತಾರೆ ಎಂಬ ಭಯದಲ್ಲೇ ರೈತರು ಬದುಕುವಂತಾಗಿದೆ. ಹಾಗಾಗಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಯುವಾಗ ಈ ಕಂದಾಯ ಇಲಾಖೆ ಜಾಗದಿಂದ ಜನರಿಗೆ ಉಂಟಾಗುವ ಸಮಸ್ಯೆ ಸೂಕ್ತ ರೀತಿಯಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಸಾರ್ವಜನಿಕರು ಹಾಗೂ ರೈತರು ನಕ್ಷೆ ಇಲ್ಲದ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಿದರೆ ಪರ್ಯಾಯ ವ್ಯವಸ್ಥೆ ನೀಡುವುದಾಗಿ ಕಂದಾಯ ಸಚಿವರು ತಿಳಿಸಿದ್ದಾರೆ.

ಏನಂದ್ರು ಸಚಿವರು?

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ಅರಣ್ಯ ಮತ್ತು ಕಂದಾಯ ಇಲಾಖೆ ಹಾಗೂ ಸಾರ್ವಜನಿಕರ ಗಡಿ ವಿವಾಧ ಸಮಸ್ಯೆ ಅನೇಕ ದಶಕಗಳಿಂದಲೂ ಬಂದದ್ದಾಗಿದೆ ಹಾಗಾಗಿ ಜಂಟಿ ಆಗಿ ಸರ್ವೇ ನಡೆಸಿ ಸಮಸ್ಯೆ ಪರಿಹಾರ ಮಾಡುವುದಾಗಿ ತಿಳಿಸಿತ್ತು. ಅರಣ್ಯ ಹಾಗೂ‌ ಮೀಸಲು ಅರಣ್ಯ ಪ್ರದೇಶವನ್ನು ಸಾರ್ವಜನಿಕಗೊಳಿಸಲು ಹಾಗೂ ನಕ್ಷೆ ಇಲ್ಲದೆ ಕೃಷಿ ಮಾಡಿಕೊಂಡ ರೈತರಿಗೆ ಸಾಗುವಳಿ ಚೀಟಿ ನೀಡಲು ಸರಕಾರ ತೀರ್ಮಾನಿಸಿದ್ದಾಗಿ ಅವರು ತಿಳಿಸಿದ್ದಾರೆ.

advertisement

ರಾಜ್ಯಾದ್ಯಂತ ಸರ್ವೇ?

ರಾಜ್ಯಾದ್ಯಂತ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಸರ್ವೇ ನಡೆಸಲಾಗುವುದು. ಈ ಬಗ್ಗೆ ಫೆಬ್ರವರಿಯಂದು ಅಧಿಸೂಚನೆ ನೀಡಲಾಗಿದ್ದು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯದಲ್ಲಿ ತೊಡಗಿದ್ದು ಉತ್ತಮ ನಡೆ. ಎರಡು ತಿಂಗಳಿನಿಂದಲೂ ಜಂಟಿ ಸರ್ವೇ ಕೆಲಸ ನಡೆಯುತ್ತಿದೆ. ಈಗ ಚಿಕ್ಕಮಗಳೂರು, ಚಿಕ್ಕ ಬಳ್ಳಾಪುರ, ದಕ್ಷಿಣ ಕನ್ನಡದಲ್ಲಿ ಹಾಗೂ ಚಾಮರಾಜನಗರದಲ್ಲಿ ಸರ್ವೆ ಕೆಲಸ ಪ್ರಗತಿಯಲ್ಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಡ್ರೋನ್ ಸರ್ವೆ

ಜಿಲ್ಲಾದ್ಯಂತ ಭೂ ಭಾಗ ವಿಸ್ತೀರ್ಣ ಅಳೆಯುವ ಸಲುವಾಗಿ ಡ್ರೋನ್ ಸರ್ವೆ ನಡೆಸಲಾಗುತ್ತದೆ. ಡ್ರೋನ್ ಸರ್ವೇ ಮೂಲಕ ಅರಣ್ಯ ಹಾಗೂ ಕಂದಾಯ ಇಲಾಖೆಯ ಗಡುವು ನಿಖರವಾಗಿ ತಿಳಿಯಲಿದೆ. ಕಂದಾಯ ಇಲಾಖೆ ಭೂಮಿ ಅರಣ್ಯ ಇಲಾಖೆ ಅಥವಾ ಅರಣ್ಯ ಇಲಾಖೆ ಭೂಮಿ ಕಂದಾಯ ಇಲಾಖೆ ಪಡೆದಿದ್ದರೆ ಡ್ರೋನ್ ಮೂಲಕ ತಿಳಿದು ಡಿ ನೋಟಿಫಿಕೇಶನ್ ಮಾಡಲು ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

advertisement

Leave A Reply

Your email address will not be published.