Karnataka Times
Trending Stories, Viral News, Gossips & Everything in Kannada

Gold Price: ಏರಿಕೆ ಕಂಡ ಚಿನ್ನದ ಬೆಲೆ, ಇಂದಿನ ಬೆಲೆ ಎಷ್ಟು?

advertisement

ಚಿನ್ನ ಬಹು ಬೇಡಿಕೆಯ ವಸ್ತು. ಚಿನ್ನವನ್ನು ಖರೀದಿಸುವುದು ಕೇವಲ ಆರ್ಥಿಕ ಉದ್ದೇಶ ಅಲ್ಲ.‌ಭಾರತೀಯರಿಗೆ ಚಿನ್ನ ಖರೀದಿ (Gold Purchase) ಒಂದು ಭಾವನಾತ್ಮಕ ಸಂಬಂಧ. ಅದರಲ್ಲೂ ಮಹಿಳೆಯರಿಗೆ ಚಿನ್ನ ಆಭರಣಗಳ ಬಗ್ಗೆ ವಿಶೇಷ ಆಸಕ್ತಿ. ಇಂದು ಮದುವೆ ಸಮಾರಂಭ ಗಳು ಹೆಚ್ಚಾಗಿರುವುದರಿಂದ ಚಿನ್ನದ ಖರೀದಿಯು ಹೆಚ್ಚಾಗಿದೆ.

ಬೇಡಿಕೆ ಹೆಚ್ಚಳ

ಚಿನ್ನದ ಬೆಲೆ (Gold Price) ಯು ಎಷ್ಟೇ ಹೆಚ್ಚಾದರೂ ಕೂಡ ಅದನ್ನು ಖರೀದಿಸುವ ಗ್ರಾಹಕ ವರ್ಗ ಇದ್ದೇ ಇರುತ್ತಾರೆ. ಬೆಲೆ ಹೆಚ್ಚಿದ್ದರೂ ಚಿನ್ನಕ್ಕೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಚಿನ್ನ ಖರೀದಿಸುವ‌ ಮೊದಲು ನೀವು ಚಿನ್ನದ ದರಗಳ ಬಗ್ಗೆ ತಿಳಿಯುದು ಕೂಡ ಬಹಳ ಮುಖ್ಯ ವಾಗುತ್ತದೆ.‌ ಆದೇ ರೀತಿ ಇಂದು ಬಹುತೇಕ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಿದೆ.

ಎಷ್ಟಾಗಿದೆ ಇಂದಿನ ಬೆಲೆ?

 

 

advertisement

ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ (Gold Price) 58,150 ರುಪಾಯಿ ಆಗಿದ್ದು 24 ಕ್ಯಾರಟ್​ನ ಚಿನ್ನದ ಬೆಲೆ 63,440 ರುಪಾಯಿ ಆಗಿದೆ. ಇಂದು 1 ಗ್ರಾಂ ಚಿನ್ನಕ್ಕೆ 5,830 ರೂ. ಆಗಿದ್ದು ನಿನ್ನೆಯ ಬೆಲೆ 5,815 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 15 ರೂ. ಮತ್ತೆ ಹೆಚ್ಚಾಗಿದೆ. ಇನ್ನೂ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 58,150 ರೂ ಆಗಿದ್ದು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 63,440 ರೂ ಆಗಿದೆ.

ಬೇರೆ ರಾಜ್ಯದಲ್ಲಿ ಹೇಗಿದೆ?

ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 150 ಗೆ ರೂಪಾಯಿ ಏರಿಕೆಗೊಂಡು 58,450 ರೂಪಾಯಿ ತಲುಪಿದ್ದು, ಶುದ್ಧ ಚಿನ್ನದ ಬೆಲೆ 10 ಗ್ರಾಂ 160 ರೂಪಾಯಿ ಹೆಚ್ಚಾಗಿದ್ದು 63,750 ರೂಪಾಯಿ ಆಗಿದೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 58,300 ರೂ 24 ಕ್ಯಾರೆಟ್ ಚಿನ್ನಕ್ಕೆ 63,600 ರೂ ಆಗಿದೆ. ಇನ್ನೂ ಚೆನ್ನೈನಲ್ಲಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 58,900 ರೂ ಆಗಿದ್ದು, ಕೋಲ್ಕತ್ತಾದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ 63,380ರೂಪಾಯಿ ಆಗಿದ್ದು ಪಾಟ್ನಾದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 63,430 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ ಹೇಗಿದೆ?

ಒಂದು ಗ್ರಾಂ ಬೆಳ್ಳಿಗೆ 73.50 ರೂ. ಆಗಿದ್ದು 8 ಗ್ರಾಂಗೆ 588 ರೂ ಆಗಿದ್ದು 10 ಗ್ರಾಂಗೆ 735 ರೂ. ಇದೆ. ಆದೇ ರೀತಿ 100 ಗ್ರಾಂಗೆ 7,350 ರೂ ಆಗಿದೆ. ಇನ್ನೂ ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗಲಿದೆ ಎನ್ನಲಾಗಿದೆ.

advertisement

Leave A Reply

Your email address will not be published.