Karnataka Times
Trending Stories, Viral News, Gossips & Everything in Kannada

Loan: ಅಂಚೆ ಇಲಾಖೆಯಲ್ಲಿ ಆರ್ ಡಿ ಹಣದ ಮೇಲೆ 50% ಸಾಲ ಲಭ್ಯ, ಈ ಒಂದು ಕಂಡೀಶನ್ ಅಪ್ಲೈ!

advertisement

ಸಾಲ ಯಾರಿಗೆ ಯಾವಾಗ ಯಾವ ಸಂದರ್ಭದಲ್ಲಿ ಯಾಕಾಗಿ ಬೇಕಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸಾಲ ಪಡೆಯುವಾಗ ತೀರ ಅಗತ್ಯವಿದ್ದಾಗ ಸಾಲ ದೊರೆಯುವ ಮೂಲಗಳ ಬಗ್ಗೆ ಕೂಡಾ ಪರಿಶೀಲನೆ ಮಾಡಲಾಗುತ್ತದೆ. ಅದೇ ರೀತಿ ಸಾಲ (Loan) ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ವಿಚಾರವಾಗಿದ್ದು ಅಧಿಕ ಬಡ್ಡಿದರಕ್ಕೆ ಖಾಸಗಿ ವ್ಯಕ್ತಿಗಳು ನೀಡುವ ಸಾಲದಿಂದ ಹಿಡಿದು ಬ್ಯಾಂಕು ದಂಘ ಸಂಸ್ಥೆಗಳುವ ಕೂಡ ಸಾಲ ನೀಡಲು ಮುಂಚುಣಿಯಲ್ಲಿವೆ. ಅದೇ ರೀತಿ ಕೇಂದ್ರದ ಅಧೀನದಲ್ಲಿರುವ ಅಂಚೆ ಇಲಾಖೆ ಮೂಲಕ ಕೂಡ ಸಾಲ ಪಡೆಯುವ ಅವಕಾಶ ಇದೆ ಎಂಬ ವಿಚಾರ ಅನೇಕ ಜನರಿಗೆ ಇದುವರೆಗೆ ಗೊತ್ತಿಲ್ಲ ಎಂದು ಹೇಳಿದರೂ ತಪ್ಪಲ್ಲ.

ಪೋಸ್ಟ್ ಆಫೀಸ್ ನಲ್ಲಿ ಅನೇಕವಿಧವಾದ ಉಳಿತಾಯ ಯೋಜನೆಗಳು ಚಿರಪರಿಚಿತವಿರುವುದು ನಿಮಗೆ ತಿಳಿದಿರಬಹುದು. ಪೋಸ್ಟ್ ಆಫೀಸ್ (Post Office) ನಲ್ಲಿ ಆರ್ ಡಿ ಯೋಜನೆಗಳು (RD Scheme) ಬಹಳ ಮಾನ್ಯತೆ ಪಡೆದಿದ್ದು ದೀರ್ಘಾವಧಿಯ ಹೂಡಿಕೆ ಮಾಡಿ ಆರ್ ಡಿ ಯಿಂದ ಅಧಿಕ ಆದಾಯ ಗಳಿಸಬಹುದಾಗಿದೆ. ನಿಮ್ಮ ಮೊತ್ತಕ್ಕೆ ಇಂತಿಷ್ಟು ಮೊತ್ತ ಬಡ್ಡಿ ಸಹ ನೀಡಲಾಗುತ್ತದೆ. ಹಾಗೆಯೇ ಪೋಸ್ಟ್ ಆಫೀಸ್ ನಲ್ಲಿ ಮರುಕಳಿಸುವ ಠೇವಣಿ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು.

ಇಂತಿಷ್ಟು ಮಾತ್ರವೇ ಸಾಲ ಸಿಗಲಿದೆ:

 

 

advertisement

ಅಂಚೆ ಇಲಾಖೆಯಲ್ಲಿ ನಾವು ಪಡೆಯುವ ಸೇವೆಗಳು ಹೆಚ್ಚು ಸುರಕ್ಷಿತವಾಗಿರುವ ಕಾರಣ ನೀವು ಸಾಲವನ್ನು ಕೂಡ ಅಂಚೆ ಇಲಾಖೆಯ ಮೂಲಕವೇ ಪಡೆಯಬಹುದಾಗಿದೆ. ಅಂಚೆ ಕಚೇರಿಯಲ್ಲಿ ನೀವು ಆರ್ ಡಿ ಮಾಡಿದ್ದರೆ ಅದರಲ್ಲಿ ನೀವು 50% ನಷ್ಟನ್ನು ಮಾತ್ರವೇ ಸಾಲ (Loan) ಪಡೆಯಬಹುದು. ಅದೇ ರೀತಿ ಸಾಲ ವಾಪಾಸ್ಸು ನೀಡುವಾಗ ಒಟ್ಟು ಒಮ್ಮೆಗೆ ಅಥವಾ ಕಂತಿನ ಮೂಲಕ ಕೂಡ ರಿಟರ್ನ್ ಮಾಡುವ ಅವಕಾಶ ನೀಡಲಾಗಿದೆ. ನಿಮಗೆ ಸಿಗಲಿರುವ ಆರ್ ಡಿ ಬಡ್ಡಿ ದರಕ್ಕಿಂತ 2% ಅಧಿಕ ಬಡ್ಡಿದರ ಇಲ್ಲಿ ವಿಧಿಸಲಾಗುವುದು. ಉದಾಹರಣೆಗೆ ನೀವು ಆರ್ ಡಿ ಯನ್ನು ಒಂದು ವರ್ಷದ ಅವಧಿಗೆ ಮಾಡಿದ್ದರೆ ಅಲ್ಲಿ 7.3% ನಷ್ಟು ಇದ್ದರೆ ಅದೇ ಹಣದ ಮೇಲೆ ನೀವು ಸಾಲ ಪಡೆದರೆ 9.3% ನ ವರೆಗೆ ಬಡ್ಡಿ ಸಮೇತ ಮೊತ್ತ ನೀಡಬೇಕು.

ಕೆಲ ನಿರ್ದಿಷ್ಟ ನಿಯಮವೂ ಇದೆ:

ನೀವು ಅಂಚೆ ಇಲಾಖೆಯಲ್ಲಿ ಆರ್ ಡಿ ಮಾಡಿದ್ದ ಅವಧಿ ಕನಿಷ್ಠ ಒಂದು ವರ್ಷದ ಅವಧಿಯಾದರೂ ಆಗಿರಬೇಕು. ನೀವು ಪೋಸ್ಟ್ ಆಫೀಸಿಗೆ ಹೋಗಿ ಬಳಿಕ ಅಲ್ಲಿ ಇದಕ್ಕೆ ಪ್ರತ್ಯೇಕ ಸಾಲದ ಫಾರ್ಮ್ ಅನ್ನು ಪಡೆದು ಭರ್ತಿ ಮಾಡಿ ಬಳಿಕ ಅದನ್ನು ಪಾಸ್ ಬುಕ್ ಜೊತೆಗೆ ಅಂಚೆ ಕಚೇರಿಗೆ ನೀಡಬೇಕು. ಅದರ ಪರಿಶೀಲನೆ ನಡೆದ ಬಳಿಕ ಎಲ್ಲ ಸರಿ ಇದ್ದರೆ ನೀವು ಸಾಲ ಪಡೆಯುವಿರಿ. ಹಾಗಾಗಿ ಸಾಲ ಸಿಕ್ಕಿಲ್ಲ ಎಂದು ಎಲೆಯುವ ಬದಲು ನಿಮ್ಮ ಉಳಿತಾಯ ಯೋಜನೆ ಮೇಲೆ ಸಾಲ ಮಾಡಬಹುದಾಗಿದೆ.

ಅಂಚೆ ಇಲಾಖೆಯ ಉಳಿತಾಯ ಯೋಜನೆಯಲ್ಲಿ ಸುಕನ್ಯಾ ಸಮೃದ್ಧಿ, ವಾರ್ಷಿಕ ಆರ್ ಡಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ, ಮಾಸಿಕ ಉಳಿತಾಯ ಎಂಬ ಹಲವು ಪ್ರಕಾರ ಇದ್ದು ಉಳಿತಾಯ ಯೋಜನೆ ಬೆಂಬಲಿಸುವ ಮೂಲಕ ಅಂಚೆ ಇಲಾಖೆ ಜನರಿಗೆ ಅತ್ಯುನ್ನತ ಸೇವೆ ನೀಡುತ್ತಲೇ ಬಂದಿದೆ. ಆರ್ ಡಿ ಹಣದ ಮೇಲೆ 50% ಸಾಲ ಪಡೆಯಲು ಅವಕಾಶ ಇದ್ದು ನಿಮಗೂ ತೀರ ಅಗತ್ಯ ಕಂಡು ಬಂದಾಗ ಈ ರೀತಿ ಮಾಡಬಹುದು.

advertisement

Leave A Reply

Your email address will not be published.