Karnataka Times
Trending Stories, Viral News, Gossips & Everything in Kannada

PM Surya Ghar: ಸೋಲಾರ್ ಛಾವಣಿ ಅಳವಡಿಸಲು ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ!

advertisement

ಇತ್ತೀಚೆಗೆ ಬಜೆಟ್ ನಲ್ಲಿ ಸೌರ ಉತ್ಪನ್ನಗಳಿಗೆ ಸರಕಾರ ಅಧಿಕ ಮಾನ್ಯತೆ ನೀಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸೋಲಾರ್ ಬಳಕೆ ಒಳಿತಿನ ಬಗ್ಗೆ ಮನದಟ್ಟು ಮಾಡಲಾಗುತ್ತಿದೆ. ಸೋಲಾರ್ ಅಳವಡಿಕೆ ಜನರಿಗೆ ಉಪಯೋಗ ಕಾರಿಎಂದು ತಿಳಿಸಿದ್ದರೂ ಇದಕ್ಕೆ ಸಾಕಷ್ಟು ಹಣ ಮೊದಲು ವ್ಯಯಿಸಬೇಕಾದ ಕಾರಣ ಈ ನಡೆಯಿಂದ ಹಿಂದೆ ಸಾಗುತ್ತಾರೆ. ಆದರೆ ಅಂತವರಿಗೆ ನೆರವು ನೀಡುವ ಮೂಲಕ ಸೋಲಾರ್ ಬಳಸಲು ಉತ್ತೇಜನ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು ಇದಕ್ಕಾಗಿಯೇ ಸರಕಾರವು ಬಜೆಟ್ ನಲ್ಲಿ ಪ್ರತ್ಯೇಕ ಹಣ ಕೂಡ ಕಾಯ್ದಿರಿಸಿದೆ.

ನೂತನ ಯೋಜನೆ:

 

 

ಮನೆಯ ಮೇಲಿನ ಛಟವಣಿಗೆ ಸೋಲಾರ್ ಪ್ಯಾನಲ್ (Solar Panel) ಅಳವಡಿಸಲು ಉತ್ತೇಜನೆ ನೀಡಲಾಗುವುದು. ಈ ಯೋಜನೆ ಮೂಲಕ PM Surya Ghar Muft Bijli Yojana ಮೂಲಕ ದೇಶದ ಒಂದು ಕೋಟಿ ಕುಟುಂಬಕ್ಕೆ ಸೋಲಾರ್ ನೀಡಲು ಸರಕಾರ ಮುಂದಾಗಿದೆ. ಈ ಯೋಜನೆ ಕಟ್ಟು ನಿಟ್ಟಿನಲ್ಲಿ ಜಾರಿಯಾದರೆ ವಿದ್ಯುತ್ ಉಳಿತಾಯ ಆಗುವ ಜೊತೆಗೆ 300 ಯುನಿಟ್ ಉಚಿತವಾಗಿ ಸಹ ಸಿಗಲಿದೆ. ಈ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಹಿರಂಗ ಭಾಷಣ ಮಾಡಿದ್ದಾರೆ ಮಾತ್ರವಲ್ಲದೇ ನರೇಂದ್ರ ಮೋದಿ ಅವರು ಕೂಡ ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿಯವರು ಹೇಳಿದ್ದೇನು?

advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಈ ಬಗ್ಗೆ ಬರವಣಿಗೆಯನ್ನು ಟ್ವಿಟ್ಟರ್ ಎಕ್ಸ್ ನಲ್ಲಿ ಹಂಚಿಂಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸೋಲಾರ್ ಜನರಿಗೆ ಅಳವಡಿಕೆಗೆ ಬೆಂಬಲಿಸಲಾಗುವುದು. ಸೌರ ಫಲಕ ಯೋಜನೆ ಮೂಲಕ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗುವುದು. ನೇರವಾಗಿ ಬ್ಯಾಂಕ್ ಖಾತಗೆ ಸಬ್ಸಿಡಿ ಮೊತ್ತ ಬೀಳುತ್ತದೆ. ಅಷ್ಟು ಮಾತ್ರವಲ್ಲದೇ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಜನರಿಗೆ ಈ ವಿಧಾನ ಯಾವುದೇ ರೀತಿ ಹೊರೆ ನೀಡಲಾರದು. ಇದು ಜನರ ಹಣ ಉಳಿಸುವ ಜೊತೆಗೆ ಪ್ರಾಕೃತಿಕವಾಗಿ ದೊರೆತ ಸಂಪನ್ಮೂಲಗಳ ಸದ್ಬಳಕೆ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಕೆ ಮಾಡಲು ಮೊದಲು ಅಧಿಕೃತ ವೆಬ್ಸೈಟ್ ಭೇಟಿ ನೀಡಿ ನಿಮ್ಮ ರಾಜ್ಯ ಆಯ್ಕೆ ಮಾಡಿ ಬಳಿಕ ವಿದ್ಯುತ್ ವಿತರಣ ಸಂಸ್ಥೆ, ನಿಮ್ಮ ಬಿಲ್ ಸಂಖ್ಯೆ, ನಿಮ್ಮ ಮೊಬೈಲ್ ಸಂಖ್ಯೆ, ಇಮೆಲ್ ಸಂಖ್ಯೆ ಲಾಗಿನ್ ಮಾಡಬೇಕು. ಬಳಿಕ ಅರ್ಜಿಯಲ್ಲಿ ಛಾವಣಿಗೆ ಎಂದು ಅರ್ಜಿ ಸಲ್ಲಿಸಿ. ನಿಮ್ಮ ನೋಂದಾಯಿತ ಪ್ಯಾನಲ್ ಅನ್ನು ನೀವು ನಮೂದಿಸಿ. ಡಿಸ್ಕಾಂಮ್ ಅನ್ನು ನೋಂದಾಯಿಸಿದ ಬಳಿಕ ಸೌರ ಫಲಕ ಅಳವಡಿಕೆ ಆಗಲಿದೆ. ಅದಾದ ಬಳಿಕ ಸ್ಥಾವರ ವಿವರ ಸಲ್ಲಿಸುವ ಜೊತೆಗೆ ನೆಟ್ ಮೀಟರ್ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಆದ ಬಳಿಕ ನಿಮಗೆ ಪ್ರಮಾಣ ಪತ್ರ ನೀಡಲಾಗುವುದು.

ಎಷ್ಟು ದಿನ ಬೇಕು?

ಒಮ್ಮೆ ನೀವು ಅರ್ಜಿ ಸಲ್ಲಿಸಿದ್ದ ಬಳಿಕ ನಿಮಗೆ ಸಬ್ಸಿಡಿ ದೊರೆಯಲು ಎಲ್ಲ ಅರ್ಹ ಸ್ಥಾನಗಳಿದ್ದರೆ 30 ದಿನದ ಒಳಗೆ ಅರ್ಜಿ ಸ್ವೀಕಾರ ಆಗಿ ಸಬ್ಸಿಡಿ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳಲಿದೆ. ಹಾಗಾಗಿ ಇನ್ನು ತಡ ಮಾಡದೆ ಕೂಡಲೇ ಸೌರವಿದ್ಯುತ್ ಛಾವಣಿ ಅಳವಡಿಸಲು ಮಾನ್ಯತೆಯನ್ನು ಪಡೆಯಿರಿ ಈ ಮೂಲಕ ಪ್ರಾಕೃತಿಕವಾಗಿ ದೊರೆತ ಸಂಪನ್ಮೂಲಗಳ ಬಳಕೆ ಮಾಡಿರಿ.

advertisement

Leave A Reply

Your email address will not be published.