Karnataka Times
Trending Stories, Viral News, Gossips & Everything in Kannada

Solar Panel: ಮನೆ ಮೇಲೆ ಸೋಲಾರ್ ಪ್ಯಾನೆಲ್ ಹಾಕಲು ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತೆ ಗೊತ್ತಾ?

advertisement

ಇತ್ತೀಚಿನ ದಿನಗಳಲ್ಲಿ ಸೋಲಾರ್ ವಿದ್ಯುತ್ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಸೋಲಾರ್ ವಿದ್ಯುತ್ ಅನ್ನ ಜನರು ಬಳಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ರೂಟ್ ಆಫ್ ಸೋಲಾರ್ ಪ್ಯಾನೆಲ್ (Root of Solar Panel) ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು, ಈಗಾಗಲೇ ಒಂದು ಕೋಟಿ ಮನೆಯ ಮೇಲೆ ಸೋಲಾರ್ ಅಳವಡಿಸಿರುವುದಾಗಿ ಮೋದಿಜಿ ಘೋಷಿಸಿದ್ದಾರೆ.

ಜನವರಿ 22, 2024ಕ್ಕೆ ಸೋಲಾರ್ ಪ್ಯಾನೆಲ್ (Solar Panel) ಬಗ್ಗೆ ಪ್ರಧಾನ ಮಂತ್ರಿ, ಮಾಹಿತಿ ನೀಡಿದ್ದು, ಸೋಲಾರ್ ಪ್ಯಾನೆಲ್ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು. ಸೌರ ಫಲಕ ಅಳವಡಿಸಲು ಸರ್ಕಾರ ಸಬ್ಸಿಡಿ ಅನ್ನು ಕೂಡ ನೀಡುತ್ತದೆ. ಹಾಗಾಗಿ ನೀವು ಕೂಡ ನಿಮ್ಮ ಮನೆಯ ಮೇಲೆ ಜಾಗ ಇದ್ದರೆ ಸುಲಭವಾಗಿ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಬಹುದು.

ಸರ್ಕಾರ ಸೌರ ಫಲಕ ಅಳವಡಿಸಲು ಎಷ್ಟು ಸಬ್ಸಿಡಿ ನೀಡುತ್ತದೆ?

 

 

advertisement

ಮೇಲ್ಚಾವಣಿಯಲ್ಲಿ ಸೌರಫಲಕ ಅಳವಡಿಸಲು ಕೇಂದ್ರ ಸರ್ಕಾರ ವಿವಿಧ ಸಬ್ಸಿಡಿಗಳನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದ ಜನರು ತಮ್ಮ ಮನೆಯ ಮೇಲ್ಚಾವಣಿ ಸೌರ ಫಲಕವನ್ನು ಅಳವಡಿಸಲು ಪ್ರತಿ ಕಿಲೋ ವ್ಯಾಟ್ ಗೆ 18 ಸಾವಿರ ರೂಪಾಯಿಗಳನ್ನು ಹಾಗೂ ವಿಶೇಷ ವರ್ಗದವರಿಗೆ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಅಥವಾ SC/ST ವರ್ಗಕ್ಕೆ, ಪ್ರತಿ kg 20,000ಗಳ ಸಬ್ಸಿಡಿ ಪಡೆಯಬಹುದು. ಈ ಸಬ್ಸಿಡಿಯಲ್ಲಿ ಮೂರು ಕಿಲೋ ವ್ಯಾಟ್ ವರೆಗೆ ಸೌರ ಫಲಕ ಅಳವಡಿಸಲು ಸಾಧ್ಯವಿದೆ.

3 ಕಿ.ಮೀ ಗಿಂತ ಹೆಚ್ಚಿನ ಸೋಲಾರ್ ಪ್ಯಾನೆಲ್ (Solar Panel) ಅಳವಡಿಸುವುದಿದ್ದರೆ ಪ್ರತಿ kg ಗೆ ರೂ.9,000ಗಳ ಸಬ್ಸಿಡಿ ದೊರೆಯುತ್ತದೆ. ವಿಶೇಷ ವರ್ಗದವರಿಗೆ ಪ್ರತಿ ಕಿಲೋ ವ್ಯಾಟ್ ಗೆ 10,000 ಸಬ್ಸಿಡಿ ನೀಡಲಾಗುತ್ತದೆ. President Welfare Association, ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಹಾಯಧನವನ್ನು ಕೂಡ ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರದ ಸಬ್ಸಿಡಿ ಮಾತ್ರವಲ್ಲದೆ ಪ್ರತಿ ರಾಜ್ಯದಲ್ಲಿ ಆಯಾ ರಾಜ್ಯದ ಸಬ್ಸಿಡಿ ಕೂಡ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಕೊಡಲಾಗುತ್ತಿದ್ದು, ಬಡವರು ಹಾಗೂ ಮಾಧ್ಯಮ ವರ್ಗದವರು ಕೂಡ ಸುಲಭವಾಗಿ ಸೋಲಾರ್ ಪ್ಯಾನೆಲ್ (Solar Panel) ಅಳವಡಿಕೆ ಮಾಡಬಹುದಾಗಿದೆ.

ಸೌರಫಲಕದ ಬೆಲೆ!

3 ಕಿ.ಮೀ ಸೌರ ಪ್ಯಾನಲ್ ಅಳವಡಿಸುವುದಿದ್ದರೆ ಅದಕ್ಕೆ ಒಂದು ಲಕ್ಷ ರೂಪಾಯಿ ತಗುಲುತ್ತದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 70,000 ರೂಪಾಯಿಗಳವರೆಗೆ ಸಬ್ಸಿಡಿ ಪಡೆಯಬಹುದು. ಎಷ್ಟು ಹಣವನ್ನು ಖರ್ಚು ಮಾಡಿದ್ದೀರೋ ಅದನ್ನು ಕೇವಲ ಐದು ವರ್ಷಗಳಲ್ಲಿ ಹಿಂಪಡೆಯಬಹುದು ಹಾಗೂ ಮುಂದಿನ 20 ವರ್ಷಗಳ ವರೆಗೆ ಉಚಿತ ವಿದ್ಯುತ್ ಬಳಸಿಕೊಳ್ಳಬಹುದು. ಸೋಲಾರ್ ಪ್ಯಾನೆಲ್ ಸುಮಾರು 25 ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದೆ ಉಪಯೋಗಿಸಬಹುದಾದ್ದರಿಂದ ಅಷ್ಟು ವರ್ಷಗಳ ಕಾಲ ನೀವು ವಿದ್ಯುತ್ ಬಿಲ್ ಆಗಿ ಒಂದೇ ಒಂದು ರೂಪಾಯಿಗಳನ್ನು ಕೂಡ ವ್ಯಯಿಸಬೇಕಿಲ್ಲ.

advertisement

Leave A Reply

Your email address will not be published.