Karnataka Times
Trending Stories, Viral News, Gossips & Everything in Kannada

PM Suryodaya Yojana: ವಿದ್ಯುತ್ ಬಿಲ್ ಹೊರೆ ಇಳಿಸಲು ಕೇಂದ್ರದ ಹೊಸ ಯೋಜನೆ, ಎಷ್ಟು ಹಣ ಉಳಿಸಬಹುದು ಗೊತ್ತೇ?

advertisement

ಬಡ ಮತ್ತು ಮಧ್ಯಮ ಆದಾಯದ ಜನರಿಗೆ ದುಬಾರಿ ವಿದ್ಯುತ್ ಬಿಲ್‌ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ (PM Suryodaya Yojana)ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಕೇಂದ್ರವು ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಫಲಕ ಅಳವಡಿಸುವ ಆಶಯ ಹೊಂದಿದೆ. ಸೌರಶಕ್ತಿಯ ಮೂಲಕ ಜನರ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಮತ್ತು ವಿದ್ಯುತ್ ಬಿಲ್‌ಗಳ ಹೊರೆ ಇಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

ಜನವರಿ 22ರಂದು ಪ್ರಧಾನಮಂತ್ರಿಯವರು ಈ ಯೋಜನೆಗೆ ಚಾಲನೆ ನೀಡಿದರು. ಸೂರ್ಯ ವಂಶಕ್ಕೆ ಸೇರಿದ ಶ್ರೀರಾಮನ ಬೆಳಕಿನಿಂದ ಭಕ್ತರೆಲ್ಲರೂ ಶಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನದಂದು ಈ ಯೋಜನೆ ಆರಂಭಿಸಲು ಸಂತಸವಾಗುತ್ತಿದೆ ಎಂದರು. ದೇಶದ ಜನರು ತಮ್ಮ ಮನೆಗಳಲ್ಲಿ ಸೋಲಾರ್ ರೂಫ್ ಟಾಪ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ.ಮನೆಗೆ ಸೋಲಾರ್‌ ಅಳವಡಿಸಲು ಶೇ.40 ರಿಯಾಯಿತಿ ಕೂಡ ನೀಡಲಾಗುತ್ತಿದೆ.

ಯೋಜನೆಯ ಪ್ರಮುಖಾಂಶಗಳು

• ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಸಿಗುವಂತೆ ಮನೆ ಛಾವಣಿಯ ಮೇಲೆ ಸರ್ಕಾರವು ಸೌರ ಫಲಕಗಳನ್ನು (Solar Panels) ಅಳವಡಿಸಲಿದೆ. ಇದಕ್ಕಾಗಿ ಅಗತ್ಯ ಉಪಕರಣಗಳನ್ನು ಒದಗಿಸುತ್ತದೆ.
• ಈ ಯೋಜನೆಯ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲಾಗುವುದು ಮತ್ತು ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಇದು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.
• ಈ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಂತೆ ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸಲು ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.
• ಮನೆಗಳ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಿ ಅವುಗಳನ್ನು ವಿದ್ಯುತ್‌ ಕಂಪನಿಗಳು ಮುಖ್ಯ ವಿದ್ಯುತ್ ಸರಬರಾಜು ಲೈನ್‌ಗಳಿಗೆ ಸಂಪರ್ಕ ನೀಡಲಾಗುತ್ತದೆ. ಇದು ಗ್ರಿಡ್-ಸಂಪರ್ಕಿತ ವಿದ್ಯುತ್ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರಿಗೆ ವಿದ್ಯುತ್ ಬಿಲ್ ಹೊರೆ ಬೀಳುವುದಿಲ್ಲ. ಹೆಚ್ಚುವರಿ ವಿದ್ಯುತ್‌ ಅನ್ನು ವಿದ್ಯುತ್‌ ಕಂಪನಿಗಳಿಗೆ ಮಾರಾಟ ಮಾಡಬಹುದು.

advertisement

ಈ ಯೋಜನೆಗೆ ಯಾರು ಅರ್ಹರು?

• ಅರ್ಜಿದಾರರು ದೇಶದ ಖಾಯಂ ನಿವಾಸಿಗಳಾಗಿರಬೇಕು.
• ಅರ್ಜಿದಾರರ ವಾರ್ಷಿಕ ಆದಾಯ ರೂ. 1.5 ಲಕ್ಷ ಮೀರಬಾರದು.
• ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಈ ಯೋಜನೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅಥವಾ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು. ತಪ್ಪು ವಿವರಗಳನ್ನು ನೀಡುವಂತಿಲ್ಲ.

ಈ ಯೋಜನೆ ಹಿನ್ನೆಲೆ ಎನು?

ಡಿಸೆಂಬರ್ 2023 ರ ಹೊತ್ತಿಗೆ, ಭಾರತದ ಸೌರ ಶಕ್ತಿ ಸಾಮರ್ಥ್ಯವು 73.31 GW ತಲುಪಿದೆ. ಮೇಲ್ಛಾವಣಿಯ ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯವು ಸುಮಾರು 11.08 GW ಆಗಿದೆ. ಈ ಯೋಜನೆಯ ಮೂಲಕ, ಸೌರ ಮೇಲ್ಛಾವಣಿ ಯೋಜನೆಗಳ ಬಂಡವಾಳ ವೆಚ್ಚದ 40 ಪ್ರತಿಶತದಷ್ಟು ಆರ್ಥಿಕ ಬೆಂಬಲವನ್ನು ಸರ್ಕಾರ ನೀಡುತ್ತದೆ. ಅಂದರೆ ನೀವು ಸೌರ ಫಲಕಗಳ ವೆಚ್ಚದ ಶೇ.60 ರಷ್ಟನ್ನು ಮಾತ್ರ ಪಾವತಿಸಬೇಕು. 2022ರ ವೇಳೆಗೆ 40,000 MW (40 GW)ಸಾಮರ್ಥ್ಯವನ್ನು ಸಾಧಿಸುವ ಗುರಿಯೊಂದಿಗೆ ಸರ್ಕಾರವು 2014 ರಲ್ಲಿ ರೂಫ್‌ಟಾಪ್‌ ಸೋಲಾರ್‌ ಕಾರ್ಯಕ್ರಮವನ್ನು ಪ್ರಾರಂಭಿಸಿತು.

advertisement

Leave A Reply

Your email address will not be published.