Karnataka Times
Trending Stories, Viral News, Gossips & Everything in Kannada

Suryoday Yojana: ರಾಮಲಲ್ಲಾ ಪ್ರತಿಷ್ಠೆಯ ಜೊತೆಗೆ ಘೋಷಣೆ ಆಯ್ತು ಸೂರ್ಯೋದಯ ಯೋಜನೆ – ಯಾರಿಗೆಲ್ಲಾ ಸಹಾಯ ಆಗಲಿದೆ ನೋಡೋಣ

advertisement

ಭಾರತ 500 ವರ್ಷಗಳಿಂದ ಕಾಯುತ್ತಿದ್ದ ಗಳಿಗೆ ನಿನ್ನೆ ನಿಜವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣವಾಗಿ ಅದರ ಪ್ರಾಣ ಪ್ರತಿಷ್ಠೆ ನಡೆದಿದೆ. ಇದು ಹಲವಾರು ಭಾರತೀಯರ ವರ್ಷಗಳ ಅಥವಾ ಶತಕಗಳ ಕನಸಾಗಿದ್ದು ನಿನ್ನೆ ಈ ಕನಸು ನನಸಾಗಿರುವುದು ಭಾರತದಾದ್ಯಂತ ಸಂತಸ ತಂದಿದೆ. ಇಷ್ಟು ವರ್ಷಗಳು ಕಾದರೂ ಈಗಲಾದರೂ ಅಯೋಧ್ಯೆಯ ರಾಮನಜ್ಮ ಸ್ಥಳದಲ್ಲಿ ದೇವಾಲಯ ನಿರ್ಮಾಣ ಆಗಿದೆ ಎಂದು ಭಾರತರಾದ್ಯಂತ ಸಮಾಧಾನವನ್ನು ತಂದಿದೆ.

ಇದೇ ಅವಧಿಯಲ್ಲಿ ಮೋದಿ (Narendra Modi) ಹೊಸ ಯೋಜನೆಯೊಂದನ್ನು ಭಾರತದ ಜನತೆ ಕೊಡುಗೆಯಾಗಿ ನೀಡಿದ್ದಾರೆ. ನಿನ್ನೆ ಈ ಯೋಜನೆಯ ಬಗ್ಗೆ ಘೋಷಣೆ ಹೊರಬಿದ್ದಿದ್ದು ಇದರ ಫಲಾನುಭವಿಗಳು ಯಾರು? ಯೋಜನೆ ಹೇಗೆ ಕೆಲಸ ಮಾಡುತ್ತದೆ ಯಾರೆಲ್ಲಾ ಇದರಿಂದ ಪ್ರಯೋಜನ ಪಡೆಯಬಹುದು ಹಾಗೂ ದೇಶದ ಯಾವ ಭಾಗಕ್ಕೆ ಇದು ನೆರವಾಗುತ್ತದೆ ಎಂಬುದನ್ನು ಈಗ ನೋಡೋಣ.

ಪ್ರಧಾನಮಂತ್ರಿ ಸೋರ್ಯೋದಯ ಯೋಜನೆ:

 

 

advertisement

ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ (Suryoday Yojana) ಎನ್ನುವ ಹೆಸರಿನಲ್ಲಿ ಆರಂಭವಾಗಲಿರುವ ಈ ಯೋಜನೆ ಒಂದು ಕೋಟಿ ಮನೆಗಳಿಗೆ ರೂಫ್ ಟಾಪ್ ಸೋಲಾರ್ (Roof Top Solar) ಅಳವಡಿಸುವ ಗುರಿಯನ್ನು ಹೊಂದಿದೆ. ಈ ಅಳವಡಿಕೆಯಿಂದ ಸೋಲಾರ್ ಬಳಸಿ ಎಲ್ಲರ ಮನೆಗಳು ಬೆಳಗಲಿವೆ.

ಸೂರ್ಯವಂಶೀ ಭಗವಾನ್ (Suryavanshi Bhagwan) ರಾಮನಂತೆ ಎಲ್ಲರ ಮನೆಗಳು ಕೂಡ ಯಾವತ್ತು ಬೆಳಗುತ್ತಾ ಇರಲಿ. ಈ ಕಾರಣಕ್ಕೆ ನಾವು ಈ ಯೋಜನೆಯನ್ನು ಇಂದು ಘೋಷಿಸುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ನಲ್ಲಿ ಪಿಎಂಒ ಪ್ರಕಟ ಮಾಡಿದೆ.

ಈ ಯೋಜನೆಯು ಮುಖ್ಯವಾಗಿ ಮಧ್ಯಮ ವರ್ಗ ಮತ್ತು ಕೆಳವರ್ಗ ಮಧ್ಯಮ ವರ್ಗಕ್ಕೆ ಸಹಾಯ ಮಾಡಲಿದ್ದು ಅವರ ಮನೆಯ ಬಳಕೆಗೆ ವಿದ್ಯುತ್ ಒದಗಿಸುತ್ತದೆ. ಇದಲ್ಲದೆ ಹೆಚ್ಚುವರಿಗಾಗಿ ಪಡೆದ ವಿದ್ಯುತ್ತಿನಿಂದ ಹೆಚ್ಚುವರಿ ಆದಾಯವನ್ನು ಗಳಿಸುವ ಸಾಧ್ಯತೆಯನ್ನು ಕೂಡ ಅವರಿಗೆ ನೀಡುತ್ತದೆ.

2022 ರಲ್ಲಿ ಮೋದಿ ಸರ್ಕಾರ ಆರಂಭಿಸಿದ್ದ ರೂಲ್ಸ್ ಟಾಪ್ ಸೋಲಾರ್ ರಾಷ್ಟ್ರೀಯ ಪೋರ್ಟಲ್ ನೊಂದಿಗೆ ಈ ಯೋಜನೆ ಕೂಡ ಸಮಾನಾಂತರವಾಗಿದೆ ಎಂದುಕೊಳ್ಳಬಹುದು. ಆದರೆ ಈ ಗ್ರೀಡ್ ಕನೆಕ್ಟೆಡ್ ಸೋಲಾರ್ ಸಿಸ್ಟಮ್ ಅಂದರೇನು? ಹಾಗೂ ಇದು ಯಾವ ರೀತಿ ಕೆಲಸ ಮಾಡುತ್ತದೆ ನೋಡೋಣ.

ಮನೆಯ ಮೇಲ್ಚಾವಣಿಯ ಮೇಲೆ ಬಿದ್ದ ಬೆಳಕನ್ನು ಸೌರ ವಿದ್ಯುತ್ ಜನಕ ವ್ಯವಸ್ಥೆಯಲ್ಲಿ ಡಿಸಿ ವಿದ್ಯುತ್ ಆಗಿ ಪಡೆಯಲಾಗುತ್ತದೆ. ಹಾಗೂ ಅದನ್ನು ಪವರ್ ಕಂಡೀಶನಿಂಗ್ ಘಟಕದ ಸಹಾಯದಿಂದ ಎಸಿ ವಿದ್ಯುತ್ ಆಗಿ ಪರಿವರ್ತನೆ ಮಾಡಲಾಗುತ್ತದೆ. ಇದನ್ನು ಗೃಹ ಬಳಕೆಗೆ ಬಳಸಿ ನಂತರ ಹೆಚ್ಚುವರಿಯಾಗಿದೆ ಇರುವ ವಿದ್ಯುತ್ ಅನ್ನು ಗ್ರಿಡ್ ಗೆ ಕನೆಕ್ಟ್ ಮಾಡಿ ಅಲ್ಲಿಂದ ಸಾಮಾನ್ಯ ವಿದ್ಯುತ್ ನಂತೆ ವಿತರಿಸಲಾಗುತ್ತದೆ. 10 ಚದರ ಮೀಟರ್ ನೆರಳು ಮುಕ್ತ ಪ್ರದೇಶದ ಲಭ್ಯತೆ ಇದ್ದರೆ ಅಲ್ಲಿ ಒಂದು ಕಿಲೋ ವ್ಯಾಟ್ ಚಾವಣಿಯ ವ್ಯವಸ್ಥೆಗೆ ಸಮಾನಾಂತರವಾದ ವಿದ್ಯುತ್ ಅನ್ನು ಪಡೆಯಬಹುದು.

advertisement

Leave A Reply

Your email address will not be published.