Karnataka Times
Trending Stories, Viral News, Gossips & Everything in Kannada

Rahul Gandhi: ಜೈ ಶ್ರೀರಾಮ್ ಘೋಷಣೆ ಯಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ರಾಹುಲ್​ ಗಾಂಧಿ, ವಿಡಿಯೋ ವೈರಲ್

advertisement

ಭಾರತದ ಕೋಟ್ಯಂತರ ಜನರು ಕಾಯುತ್ತಿದ್ದ ರಾಮಮಂದಿರದ ಕನಸು ಈಗಾಗಲೇ ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆಯನ್ನು ಮಾಡಲಾಗಿದೆ.ವಿಶೇಷ ಹೆಲಿಕಾಪ್ಟರ್‌ ಮೂಲಕ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯು ಅತ್ಯಂತ ಮಹತ್ವಪೂರ್ಣ ಕ್ಷಣವಾಗಿತ್ತು. ಆದರೆ ವಿರೋಧ ಪಕ್ಷದ ಜನರು ಈ ಬಗ್ಗೆ ಕೆಲವೊಂದು ಟೀಕೆಗಳನ್ನು ಮಾಡಿದ್ದರು. ಅದೇ ರೀತಿ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ನಡೆ ಯಾವ ರೀತಿ ಇತ್ತು ಎಂಬುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಾಳ್ಮೆ ಕಳೆದುಕೊಂಡಿರುವ ವಿಡಿಯೋ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಮುನ್ನೆಲೆಯಲ್ಲಿ ಭಾರತ್​ ಜೋಡೋ ನ್ಯಾಯ್ ಯಾತ್ರೆ ನಡೆಸಲಾಗುತ್ತಿದ್ದು, ಅಸ್ಸಾಂನಲ್ಲಿ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಜೈ ಶ್ರೀರಾಮ್ ಹಾಗೂ ಪ್ರಧಾನಿ ಮೋದಿ ಪರ ಜಯ ಘೋಷಣೆ ಮಾಡುತ್ತಿದ್ದಂತೆ ರಾಹುಲ್​ ಗಾಂಧಿ ತಾಳ್ಮೆ ಕಳೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಜನರು ಆಕ್ರೋಶ ಕೂಡ ವ್ಯಕ್ತ ಪಡಿಸಿದ್ದಾರೆ.

ವಿರೋಧ ಪಕ್ಷದ ಟೀಕೆ

advertisement

ಅದೇ ರೀತಿ ರಾಮ ಮಂದಿರದ ಪ್ರತಿಷ್ಟಾಪನೆ ಕುರಿತಂತೆ ವಿರೋಧಪಕ್ಷ ನಾಯಕರು ಈ ಕಾರ್ಯಕ್ರಮವನ್ನು ಬಿಜೆಪಿ ಆರ್​ಎಸ್​ಎಸ್​ ಕಾರ್ಯಕ್ರಮ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತಗಳನ್ನು ಸೆಳೆಯುವ ನಡೆ ಅಷ್ಟೆ ಎಂದು ಹೇಳಿದ್ದಾರೆ.

 

ಅಂಜನೇಯ ಜನ್ಮಭೂಮಿ ಮುಂದಿನ ಗುರಿ

ರಾಮಜನ್ಮಭೂಮಿಗೆ ಹೋರಾಟ ಮಾಡಿ ಕೊನೆಗೂ ಪ್ರತಿಫಲ ಸಿಕ್ಕಂತೆ ಆಗಿದೆ. ಇದರಲ್ಲಿ ಕರ್ನಾಟಕದ ಬಹು ದೊಡ್ಡ ಪಾತ್ರವಿದ್ದು ಆಂಜನೇಯ ಜನ್ಮಸ್ಥಳ ಆಂಜನಾದ್ರಿ ಕರ್ನಾಟಕದಲ್ಲೇ ಇದೆ. ಮುಂದಿನ ನಮ್ಮ ಗುರಿ ಆಂಜನೇಯ ಜನ್ಮ ಭೂಮಿ ಅಭಿವೃದ್ಧಿ ಮಾಡುವುದು ಎಂದು ಬಸವರಾಜ್ ಬೊಮ್ಮಯಿ ತಿಳಿಸಿದ್ರು

advertisement

Leave A Reply

Your email address will not be published.