Karnataka Times
Trending Stories, Viral News, Gossips & Everything in Kannada

PF Money: ನೀವು ವರ್ಷಕ್ಕೆ ಎಷ್ಟು ಬಾರಿ ಪಿಎಫ್ ಹಣ ಹಿಂಪಡೆಯಬಹುದು? ರೂಲ್ಸ್ ನಲ್ಲಿ ಏನಿದೆ!

advertisement

ಇಂದು ಉದ್ಯೋಗ ಎನ್ನುವುದು ಪ್ರತಿಯೊಬ್ಬ ‌ವ್ಯಕ್ತಿಗೂ ಬಹಳ ಮುಖ್ಯವಾಗುತ್ತದೆ. ಒಂದು ಉತ್ತಮ‌ ಕಂಪನಿಯಲ್ಲಿ ಉದ್ಯೋಗ ಸಿಕ್ಕರೆ ‌ಸ್ಯಾಲರಿ ಯೊಂದಿಗೆ ಪಿಎಫ್ ಹಣ (PF Money) ಕೂಡ‌ದೊರೆಯುತ್ತದೆ. ಎಲ್ಲಾ ಖಾಸಗಿ ಸಂಸ್ಥೆ ಉದ್ಯೋಗಿಗಳಿಗೂ ಕೆಲಸಕ್ಕೆ ಸೇರುವಾಗ ಅವರ ಹೆಸರಿನಲ್ಲಿ ಇಪಿಎಫ್ ಖಾತೆ (EPF Account) ತೆರೆಯಲಾಗುತ್ತದೆ. ಉದ್ಯೋಗಿಗೆ ಈ ಹಣ ತುರ್ತು ಸಂದರ್ಭದಲ್ಲಿ ಬಹಳಷ್ಟು ಸಹಾಯಕವಾಗುತ್ತದೆ. ಈ ಪಿಎಫ್ ಹಣ ಪ್ರತಿ ತಿಂಗಳು ಉದ್ಯೋಗಿಯ ವೇತನದ 12% ಭವಿಷ್ಯ ನಿಧಿ ಖಾತೆಯಲ್ಲಿ ಠೇವಣಿ ಯಾಗಿ ಇಟ್ಟಿರಲಾಗುತ್ತದೆ. ಹೆಚ್ಚುವರಿಯಾಗಿ, ಅದೇ ಪ್ರಮಾಣದ ಹಣವನ್ನು ಕಂಪನಿಯು ಉದ್ಯೋಗಿಯ ಖಾತೆಗೆ ಠೇವಣಿ ಮಾಡುತ್ತದೆ.  ಆದರೆ ಒಂದು ವರ್ಷದಲ್ಲಿ PF Money, ಠೇವಣಿ ಮಾಡಿದ ಹಣವನ್ನು ನೀವು ಎಷ್ಟು ಬಾರಿ ಹಿಂಪಡೆಯಬಹುದು? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು ಇದಕ್ಕಾಗಿ ಈ‌ ಮಾಹಿತಿ ಇಲ್ಲಿದೆ.

ಈ ನಿಯಮ ಇದೆ:

 

 

advertisement

ನೀವು 5 ವರ್ಷಗಳ ಮೊದಲು ಹಣ (PF Money) ವನ್ನು ಹಿಂಪಡೆದರೆ, 20% TDS ಅನ್ನು ಕಡಿತ ಗೊಳಿಸಲಾಗುತ್ತದೆ. ಇದಲ್ಲದೆ, ಈಗ PF ಖಾತೆಗೆ PAN ಅನ್ನು ಲಿಂಕ್ ಮಾಡಲಾಗಿದ್ದರೂ, 5 ವರ್ಷಗಳ ಮೊದಲು ಹಣವನ್ನು ಹಿಂಪಡೆದರೆ, TDS ಅನ್ನು ಶೇಕಡಾ 20 ರ ದರದಲ್ಲಿ ಕಡಿತ ಗೊಳಿಸಲಾಗುತ್ತದೆ.

ಯಾವಾಗ ಪಡೆಯಬಹುದು?

  • ಉದ್ಯೋಗಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಎರಡು ತಿಂಗಳ ಬಳಿಕ ಇಪಿಎಫ್‌ನಲ್ಲಿರೋ ಸಂಪೂರ್ಣ ಹಣವನ್ನು ಹಿಂಪಡೆಯಲು ಉದ್ಯೋಗಿ ಈ ಹಣಕ್ಕೆ ಅರ್ಹನಾಗಿರುತ್ತಾನೆ.
  • ತುರ್ತು ಸಂದರ್ಭಕ್ಕೆ ಹಣದ ಅವಶ್ಯಕತೆ ಎದುರಾದಾಗ ಮಾತ್ರ ಇಪಿಎಫ್ ಖಾತೆಯಲ್ಲಿರುವ ಒಂದಷ್ಟು ಭಾಗದ ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ.
  • ಪಿಎಫ್ ಖಾತೆ ಯನ್ನು ಹೊಂದಿರುವ ವ್ಯಕ್ತಿಯು ನಿರುದ್ಯೋಗಿಯಾಗಿದ್ದಲ್ಲಿ ಅವರು ತಮ್ಮ ಒಟ್ಟು ಪಿಎಫ್‌ ನಿಧಿಯ ಶೇ. 75 ರಷ್ಟು ಹಣವನ್ನು ಹಿಂತೆಗೆದುಕೊಳ್ಳಬಹುದು.
  • ಅದೇ ರೀತಿ ವಿವಾಹ ವೆಚ್ಚಗಳನ್ನು ಭರಿಸಲು ಉದ್ಯೋಗಿಗಳು ತಮ್ಮ ಪಿಎಫ್‌ ಖಾತೆ (PF Account) ಯಲ್ಲಿನ ಶೇ. 50 ರಷ್ಟು ಹಣವನ್ನು ಹಿಂಪಡೆಯಲು ಸಹ ಅವಕಾಶ ಇದೆ.‌
  • ಪಿಎಫ್ ಅಥವಾ ಇಪಿಎಫ್ ಖಾತೆದಾರರು ತುರ್ತು ವೈದ್ಯಕೀಯ ಆರೈಕೆಯ ವೆಚ್ಚವನ್ನು ಭರಿಸಲು ತಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು

advertisement

Leave A Reply

Your email address will not be published.