Karnataka Times
Trending Stories, Viral News, Gossips & Everything in Kannada

NPCI Mapping: ಮಹಿಳೆಯರಿಗೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಜಮಾ ಆಗಲು NPCI ಮ್ಯಾಪಿಂಗ್ ಕಡ್ಡಾಯ.

advertisement

ಈಗಾಗಲೇ ನೀವು NPCI Mapping ಅಂತ ನೀವು ಇದನ್ನು ಕೇಳಿರಬಹುದು ಮತ್ತು ನೀವು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವುದಕ್ಕೆ ಹೋದಾಗ ನೀವು NPCI ಮ್ಯಾಪಿಂಗ್ ಮಾಡಿಸಿದ್ದೀರಾ ಎಂದು ಕೇಳಿರುತ್ತಾರೆ? ಮತ್ತು ನೀವು ಇದನ್ನು ಮಾಡಿಸಿಲ್ಲ ಎಂದರೆ ನಿಮಗೆ ಪ್ರತಿ ತಿಂಗಳು ಬರಬೇಕಾಗಿರುವ 2000 ಹಣ ನಿಮಗೆ ಬಂದಿರುವುದಿಲ್ಲ, ಈಗಾಗಲೇ ಎರಡನೇ ಕಂತಿನ ಹಣ ಕೂಡ ಬಿಡುಗಡೆಯಾಗುತ್ತಿದೆ ಮತ್ತು ನಿಮಗೆ ಗೃಹಲಕ್ಷ್ಮಿ (Gruha Lakshmi), ಅನ್ನಬಾಗ್ಯ (Anna Bhagya) ಯೋಜನೆಯ ಹಣ ಬರುವುದಿಲ್ಲ ಹಣ ಬರಬೇಕೆಂದಿದ್ದರೆ ನೀವು NPCI Mapping  ಮಾಡಿಸಲೇಬೇಕು.

What is NPCI Mapping?

ಆನ್ಲೈನ್ ನಲ್ಲಿ ನೀವು ಯಾವುದೇ ರೀತಿಯ ಟ್ರಾನ್ಸಾಕ್ಷನ್ ಅನ್ನು ಮಾಡಬೇಕು ಅಂದಿದ್ದರೆ NPCI ಇರಲೇಬೇಕು ಈಗ ನೀವು ಫೋನ್ ಪೇ (Phone Pe), ಗೂಗಲ್ ಪೇ (Google Pay) ಗಳಲ್ಲಿ ಟ್ರಾನ್ಸಾಕ್ಷನ್ ಮಾಡುತ್ತೀರಲ್ಲ ಆ ಟ್ರಾನ್ಸಾಕ್ಷನ್ ಆಗಬೇಕಂತಿದ್ದರೆ ನೀವು NPCI Mapping ಮಾಡಿಸಲೇಬೇಕು.ಇದನ್ನು ಮಾಡುವುದಕ್ಕೆ ನೀವು NPCI ಯನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬೇಕು.

ಗೃಹ ಲಕ್ಷ್ಮೀ ಯೋಜನೆಯ 2,000/- & ಅನ್ನ ಭಾಗ್ಯದ ₹170 ಪಡೆಯಲು ಈ ಕೆಲಸ ಕಡ್ಡಾಯ

ಆಧಾರ್ ಕಾರ್ಡ್ ನೊಂದಿಗೆ  ಡಿಬಿಟಿ ಲಿಂಕ್ ಮಾಡಬೇಕು:

advertisement

ಡಿಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಇದರಿಂದಾಗಿ ಮಹಿಳೆಯರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಯೋಜನೆಯ ₹2,000 ಮತ್ತು ಅನ್ನಭಾಗ್ಯದ ₹170 ರೂಪಾಯಿ ಜಮಾ ಆಗುತ್ತದೆ. ಹಾಗಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ (Aadhaar Card) ಡಿಬಿಟಿ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಿ.

ನಿಮ್ಮ ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಆಗಿದೆ ಎಂಬುದನ್ನು ಹೇಗೆ ನೋಡುವುದು?

ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. https://resident.uidai.gov.in/bank-mapper
ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಹಾಗೆ ಕ್ಯಾಪ್ಚರ್ ಅನ್ನು ಎಂಟರ್ ಮಾಡಿ.
ಹಂತ 3: ನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್OTP ಬರುತ್ತೆ ಅದನ್ನು ನಮೂದಿಸಿ, ನಂತರ Submit ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ಅದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತದೆ.
ಹಂತ 5: ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಶಾಖೆಗೆ ತೆರಲಿ ಲಿಂಕ್ ಮಾಡಿಸಬೇಕು.
ಹೀಗೆ ನೀವು ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಮ್ಯಾಪಿಂಗ್ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2,000/- ಹಣದ ಪ್ರಯೋಜನವನ್ನು ಪಡೆಯಬಹುದಾಗಿದೆ

NPCI ಮ್ಯಾಪಿಂಗ್ ಆಗುವುದಕ್ಕೆ ಎಷ್ಟು ದಿನ ಬೇಕು?

ಒಂದು ವಾರದಿಂದ ಅಂದರೆ 7 ದಿನದಿಂದ 15 ದಿನದ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಲಿಂಕ್ ಆಗುತ್ತದೆ ಮತ್ತು ನೀವು ಪ್ರತಿ ತಿಂಗಳು ಗೃಹಲಕ್ಷ್ಮಿ  ಯೋಜನೆಯ ಹಣವನ್ನು ಪಡೆಯುವುದಕ್ಕೆ ಫಲಾನುಭವಿ ಆಗಬಹುದು ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತಿಲ್ಲ ಅಂದರೆ ನೀವು NPCI ಮಾಡಿಸಿದ ನಂತರ ನಿಮಗೆ ಮುಂದಿನ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ.

ಅಂತಿಮವಾಗಿ, ನಾವು ನೀಡಿರುವ ಫಾರ್ಮನ್ನು ಡೌನ್ಲೋಡ್ ಮಾಡಿ ಮೊದಲು ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿ ನಂತರ ಫಾರ್ಮ್ ಅನ್ನು ಭರ್ತಿ ಮಾಡಿ ಇದು ಬಹಳ ಸುಲಭವಾದ ವಿಧಾನ ಮತ್ತು ಎಲ್ಲರೂ ಕೂಡ ಇದನ್ನು ಮಾಡಿಸಲೇಬೇಕು ಇಲ್ಲವಾದರೆ ನಿಮಗೆ ಮುಂದೆ ಬಹಳ ತೊಂದರೆಗಳು ಆಗುತ್ತದೆ ಯೋಜನೆಗಳ ಹಣಗಳು ಸರಿಯಾಗಿ ಬರುವುದಿಲ್ಲ ಅದಕ್ಕಾಗಿ ಇದನ್ನು ಮೊದಲು ಮಾಡಿಸಿ.

advertisement

Leave A Reply

Your email address will not be published.