Karnataka Times
Trending Stories, Viral News, Gossips & Everything in Kannada

Dhruva Sarja: ರಾಮ ಮಂದಿರ ಉದ್ಘಾಟನೆ ದಿನವೇ ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ!

advertisement

ದೇಶದ ಎಲ್ಲ ಕಡೆ ಇಂದು ರಾಮನ ಜಪ ಜೋರಾಗಿದೆ. ವಿವಿಧ ಕಡೆ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜೋರಾಗಿಯೇ ನಡೆದಿದೆ. ಕೆಲವು ಜನರು ತಮ್ಮ ಮಕ್ಕಳಿಗೆ ರಾಮನ ವೇಷ ಹಾಕುವ ಮೂಲಕ ಮನೆಯಲ್ಲಿ ಸಂಭ್ರಮಿಸಿದ್ದಾರೆ. ಇನ್ನೊಂದು ಕಡೆ ಸಿನಿಮಾ ತಾರೆಯರಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಈ ಉದ್ಗಾಟನೆಯ ಆಹ್ವಾನವನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ನಟ ಧ್ರುವ ಸರ್ಜಾ (Dhruva Sarja) ಗುಡ್ ನ್ಯೂಸ್ ನೀಡಿದ್ದಾರೆ.

ಮಕ್ಕಳ ಹೆಸರು ರಿವೀಲ್:

ಅಯೋಧ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ‌ನಟ ಧ್ರುವ ಸರ್ಜಾ (Dhruva Sarja) ಕೂಡ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗೆ ಇಂದೇ ಹೆಸರು ನಾಮಕರಣ ಮಾಡುವ ಮೂಲಕ ಹೆಸರು ರಿವೀಲ್ ಮಾಡಿದ್ದಾರೆ. ಧ್ರುವ ಸರ್ಜಾ ಮಗಳಿಗೆ ರುದ್ರಾಕ್ಷಿ (Rudrakshi) ಎಂದು ಹೆಸರು ಇಟ್ಟಿದ್ದಾರೆ. ಅದೇ ರೀತಿ‌ ಮಗನಿಗೆ ಹಯಗ್ರೀವ (Hayagriva) ಎಂದು ನಾಮಕರಣ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

 

 

 

advertisement

ಚಿರು ಸಮಾಧಿ ಮುಂದೆ ನಾಮಕರಣ:

ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದು 2018ರಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, 2019ರ ನವೆಂಬರ್‌ 25ರಂದು ವಿವಾಹ ನಡೆದಿತ್ತು. ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಮುಂದೆಯೇ ನಾಮಕರಣ ಕಾರ್ಯಕ್ರಮ ನೆರವೇರಿಸ ಲಾಗಿದೆ.‌ಕುಟುಂಬದವರು, ಆಪ್ತರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ಹನುಮ ಭಕ್ತ ಧ್ರುವ ಸರ್ಜಾ:

ಧ್ರುವ ಸರ್ಜಾ ಅವರು ಹನುಮನ ಭಕ್ತರಾಗಿದ್ದು ಆಂಜನೇಯನ ಪೂಜೆ ಯನ್ನು ನೆರೆವೇರಿಸುತ್ತಾ ಇರುತ್ತಾರೆ. ಅದೇ ರೀತಿ ರಾಮನ ಬಂಟ ಎಂಬ ಪ್ರಸಿದ್ದಿಯು ಆಂಜನೇಯನಿಗೆ ಇದೆ.ಹಾಗಾಗಿ ಈ ದಿನವೇ ತನ್ನ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಧ್ರುವ ಸರ್ಜಾ ಜನವರಿ 22 ನಾಮಕರಣ ಡೇಟ್ ಬಂತು. ಇಬ್ಬರು ಮಕ್ಕಳಿಗೂ ಒಟ್ಟಿಗೆ ನಾಮಕರಣ ಮಾಡುವ ಪ್ಲಾನ್ ಮಾಡಿ ರಾಮ ಮಂದಿರದ ಉದ್ಘಾಟನೆ ದಿನವೇ ಮಾಡುವ ಯೋಜನೆ ಹಾಕಿಕೊಂಡೆವು ತುಂಬಾ ಖುಷಿ ಆಗುತ್ತಿದೆ ಎಂದರು.

ಇದೀಗ ಧ್ರುವ ಸರ್ಜಾ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ತಯಾರಿಯಲ್ಲಿದ್ದು ಮಾರ್ಟಿನ್ ಸಿನಿಮಾ ಶೂಟಿಂಗ್ ಮುಗಿದು ಬಿಡುಗಡೆ ರೆಡಿಯಾಗಿದೆ. ಇನ್ನೊಂದು ಕೆಡಿ ಚಿತ್ರದ ಶೂಟಿಂಗ್ ಕೂಡ ಕೊನೆಯ ಹಂತದಲ್ಲಿದೆ.

advertisement

Leave A Reply

Your email address will not be published.