Karnataka Times
Trending Stories, Viral News, Gossips & Everything in Kannada

Ram Mandir: ಭವ್ಯ ರಾಮ ಮಂದಿರವನ್ನು ಉದ್ಘಾಟಿಸಿ, ಭಾವುಕ ಮಾತಾಡಿದ ಪ್ರಧಾನಿ ಮೋದಿ, ಹೇಳಿದ್ದೇನು?

advertisement

ಇಂದು ಎಲ್ಲೆಡೆ ಸಂಭ್ರಮ ದ ವಾತಾವರಣ. ‌ಅಯೋಧ್ಯೆಯ ರಾಮಮಂದಿರ (Ram Mandir) ದಲ್ಲಿ ಈಗ ಬಾಲರಾಮನ ಪ್ರತಿಷ್ಟಾಪನೆ ಆಗಿದೆ.‌ ಈ‌ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ‌ ಪ್ರಧಾನಿ ಮೋದಿ ಅವರು ಶ್ರೀ ರಾಮ (Shree Ram) ಜನ್ಮಭೂಮಿಯಲ್ಲಿನ ರಾಮ ಲಲ್ಲಾ ವಿಗ್ರಹವನ್ನು ಅನಾವರಣ ಮಾಡಿದ್ದರು. ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ರಾಮ ಭಕ್ತರ ಸಂಭ್ರಮಾಚರಣೆ ಜೋರಾಗಿತ್ತು.‌ ಅನೇಕ ಭಾಗಗಳಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿಗಳನ್ನು ಹಂಚಿ ಸಂಭ್ರಮ ಮಾಡಿದ್ದರು.

ಪ್ರಧಾನಿ ಭಾವುಕ ಮಾತು:

 

 

ಈ ಬಗ್ಗೆ ಮಾತನಾಡಿದ ಪ್ರಧಾನಿ ನಾನು ಭಗವಾನ್ ಶ್ರೀರಾಮನಲ್ಲಿ ಕ್ಷಮೆಯಾಚಿಸುತ್ತೇನೆ. ಇಷ್ಟು ಸಮಯ ಪ್ರತಿಷ್ಟಪನೆಗೆ ಸಮಯ ಕೂಡಿ ಬಂದಿಲ್ಲ. ಯಾಕಂದ್ರೆ ನಮ್ಮ ಪ್ರಯತ್ನ, ತ್ಯಾಗ ಮತ್ತು ತಪಸ್ಸಿನಲ್ಲಿ ಏನಾದರೂ ಸಮಸ್ಯೆ ಇರಬೇಕು. ಹೀಗಾಗಿ ಇಷ್ಟು ಶತಮಾನಗಳಿಂದ ರಾಮ ಮಂದಿರ ನಿರ್ಮಾಣ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದರು.

ಇಷ್ಟು ವರ್ಷ ಹೋರಾಡಿದ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿತು.‌ ನ್ಯಾಯ ಸಲ್ಲಿಸಿದ ಭಾರತದ ನ್ಯಾಯಾಂಗಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.ಈ ರಾಮಲಲ್ಲಾ ಮಂದಿರದ ನಿರ್ಮಾಣ ಭಾರತೀಯ ಸಮಾಜದಲ್ಲಿ ಮತ್ತಷ್ಟು ಒಗ್ಗೂಡುವಿಕೆಯನ್ನು ಸೃಷ್ಟಿ ಮಾಡಿದೆ. ಈ ನಿರ್ಮಾಣವು ಯಾವುದೇ ದ್ವೇಷದ ಬೆಂಕಿಗೆ ಜನ್ಮ ನೀಡಿಲ್ಲ. ‌ಧಾರ್ಮಿಕ ಶಕ್ತಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ ಎಂದರು

advertisement

ವಿವಿಧೆಡೆ ಪೂಜೆ‌ಪುನಸ್ಕಾರ:

ಇಂದು ರಾಮನ ಧ್ಯಾನ, ಭಾಗವತ ಕಥೆಗಳು, ಭಜನೆ ಸಂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಸ್ಥಳಗಳಲ್ಲಿ ನಡೆಯುತ್ತಿವೆ. ಪ್ರಾಣ ಪ್ರತಿಷ್ಠಾ ಮಹೋತ್ಸವದ ಮುಹೂರ್ತ ಕಾಲದಲ್ಲೇ ಅಯೋಧ್ಯೆ ರಾಮ ಮಂದಿರದ ಮೇಲೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ ಹೂಮಳೆ ಎರೆದಿದೆ. ಶ್ರೀರಾಮನಿಗೆ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಗಿದೆ.

ಬಾಲ ರಾಮನ ಪೀಠ:

 

 

ಈಗಾಗಲೇ ಗರ್ಭಗುಡಿಯಲ್ಲಿ ಶ್ರೀರಾಮ ಮೂರ್ತಿ ತಲುಪಿದ್ದು ಫೋಟೊಗಳನ್ನು ಎಲ್ಲ ಜನತೆ ಮೆಚ್ಚಿಕೊಂಡಿದೆ. ಗರ್ಭಗುಡಿಯ ಪೀಠದಲ್ಲಿ ಈಗಾಗಲೇ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು ಮಂದಹಾಸ ಬೀರುವ ರಾಮನ ಕೆತ್ತನೆಗೆ ಜನತೆ ಮೆಚ್ಚಿಕೊಂಡಿದೆ.

 

advertisement

Leave A Reply

Your email address will not be published.