Karnataka Times
Trending Stories, Viral News, Gossips & Everything in Kannada

Ayodhya Ram Mandir: ಅಯೋಧ್ಯೆಗೆ ಅಮಂತ್ರಣವಿದ್ದರು ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ, ಎಂಎಸ್‌ ಧೋನಿ ಐತಿಹಾಸಿಕ ಕಾರ್ಯಕ್ರಮದಲ್ಲಿ ಏಕೆ ಭಾಗಿಯಾಗಿಲ್ಲ?

advertisement

ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದೇ ದೇಶ ವಾಸಿಗಳ ಕನಸು. ಆದರೆ ಕಾರ್ಯಕ್ರಮಕ್ಕೆ ಯಾರು ಬಾರದಂತೆ ಈಗಾಗಲೇ ಕಟ್ಟಪಟ್ಟಣೆ ಹೊರಡಿಸಲಾಗಿತ್ತು. ಅಲ್ಲದೆ ಹಲವು ಕ್ಷೇತ್ರದ ಗಣ್ಯರಿಗೆ ರಾಮ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿತ್ತು.

ಯಾವೆಲ್ಲ ಕ್ರೀಡಾಪಟುಗಳು ಭಾಗವಹಿಸಿದ್ದರು?

ಆಹ್ವಾನ ನೀಡಲಾಗಿದ್ದ ಬಹುತೇಕ ಎಲ್ಲ ಗಣ್ಯರು ಅಯೋಧ್ಯೆಯಲ್ಲಿ ಕಾಣಿಸಿಕೊಂಡರು. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (Sachin Tendulkar), ಲೇಡಿ ತೆಂಡೂಲ್ಕರ್ ಖ್ಯಾತಿಯ ಮಿಥಾಲಿ ರಾಜ್ (Mithali Raj), ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ (Saina Nehwal), ಟೀಮ್ ಇಂಡಿಯಾದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್ (Venkatesh Prasad), ಅನಿಲ್‌ ಕುಂಬ್ಳೆ (Anil Kumble) ಹಾಗೂ ಟೀಮ್ ಇಂಡಿಯಾದ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

advertisement

 

ಆಹ್ವಾನ ಪಡೆದಿದ್ದರೂ ಭಾಗವಹಿಸಿದ ಕೊಹ್ಲಿ, ಧೋನಿ:

ಈ ಕಾರ್ಯಕ್ರಮದ ಆಹ್ವಾವನ್ನು ಪಡೆದ ಇನ್ನು ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಎದ್ದು ಕಾಣುವ ಹೆಸರುಗಳು ಅಂದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma), ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳು ಈ ಆಟಗಾರರು ಏಕೆ ಹೋಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ವಿರಾಟ್‌ ಕೊಹ್ಲಿ (Virat Kohli), ಧೋನಿ ಏಕೆ ಭಾಗವಿಸಿಲ್ಲ ಎಂಬ ಬಗ್ಗೆ ಇನ್ನು ಅಧಿಕೃತ ಹೇಳಿಕೆಗಳು ಬಂದಿಲ್ಲ. ರೋಹಿತ್ ಶರ್ಮಾ ಭಾಗವಹಿಸಿದಿರುವ ಬಗ್ಗೆ ಮಾಹಿತಿಯೊಂದು ಸಿಕ್ಕಿದೆ. ಕ್ರಿಕ್‌ಬಜ್‌ ವರದಿಯಂತೆ ಮುಂಬರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗಾಗಿ ರೋಹಿತ್ ಶರ್ಮಾ ಮುಂಬೈದಲ್ಲಿ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ತಂಡ ಈಗಾಗಲೇ ಹೈದರಾಬಾದ್ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿದೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ರಾಮ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಬಿಸಿಸಿಐ ಬಳಿ ಒಂದು ದಿನದ ರಜೆಯನ್ನು ಸಹ ಪಡೆದಿದ್ದರು. ಆದರೆ ವಿರಾಟ್ ಕೊಹ್ಲಿ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

advertisement

Leave A Reply

Your email address will not be published.