Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹ ಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ ಬಗ್ಗೆ ಹೊಸ ಅಪ್ಡೇಟ್, ಈ ರೀತಿಯಾಗಿ ಪಿಂಕ್ ಕಾರ್ಡ್ ಪಡೆಯಬಹುದು!

advertisement

ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷೆಯ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ (Gruha Lakshmi) ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಿಂದ ಪ್ರತಿ ಕುಟುಂಬದ ಮಹಿಳೆಯರಿಗೆ 2000 ರೂ. ಹಣ ಜಮೆ ಮಾಡಲಾಗುತ್ತದೆ. ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವವರು ಪಿಂಕ್‌ ಕಾರ್ಡ್‌ ಪಡೆಯಬೇಕು ಎಂದು ಸರ್ಕಾರ ತಿಳಿಸಿದೆ.

ಪ್ರತಿಯೊಬ್ಬರಿಗೂ ಗೃಹಲಕ್ಷ್ಮಿ ಯೋಜನೆಯ ಪಿಂಕ್‌ ಕಾರ್ಡ್‌ (Pink Card) ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು. ಅದರಲ್ಲಿ ಐಡಿ ನಂಬರ್‌ ಇರುತ್ತದೆ. ಇವರಿಗೆ ಮಾತ್ರ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಈ ಪಿಂಕ್‌ ಕಾರ್ಡ್‌ ಅನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ, ಈಗ ಸದ್ಯಕ್ಕೆ ಗೃಹಲಕ್ಷ್ಮಿ ಹಣ ಜಮೆ ಮಾಡಲಾಗುತ್ತಿದೆ. ಪಿಂಕ್‌ ಕಾರ್ಡ್‌ ಇಲ್ಲದೇ ಇದ್ದರೂ ಕೂಡ ಗೃಹಲಕ್ಷ್ಮಿ ಹಣ ಬರುತ್ತದೆ. ರಾಜ್ಯ ಸರ್ಕಾರ ಯಾವಾಗ ಪಿಂಕ್‌ ಕಾರ್ಡ್ ವಿತರಣೆ ಮಾಡುತ್ತದೆ ಆಗ ನೀವು ಪಿಂಕ್ ಕಾರ್ಡ್‌ ಪಡೆಯಬಹುದು.‌

How to get Gruha Lakshmi Pink Smart Card?

 

 

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇಲ್ಲಿ ತನಕ 1.05 ಕೋಟಿ ಜನರು ಈಗಾಗಲೇ ಅರ್ಜಿ ನೋಂದಾಯಿಸಿದ್ದಾರೆ . ಇನ್ನು ಕೂಡ ಅರ್ಜಿ ಯಾರು ಸಲ್ಲಿಸಿಲ್ಲ ಅವರು ಅರ್ಜಿಯನ್ನ ನೋಂದಣಿ ಮಾಡಬಹುದಾಗಿದೆ.  ಅರ್ಜಿ ನೋಂದಣಿ ಮಾಡಿದವರಿಗೆ ಗೃಹ ಲಕ್ಷ್ಮಿ ಯೋಜನೆಯ ಪಿಂಕ್ ಸ್ಮಾರ್ಟ್ ಕಾರ್ಡ್ (Gruha Lakshmi Pink Card) ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Date of Credit of Gruha Lakshmi Yojana:

advertisement

ಗೃಹ ಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಅರ್ಜಿಯನ್ನ ಸಲ್ಲಿಸಿದವರಿಗೆ ಪ್ರತಿ ತಿಂಗಳು ರೂಪಾಯಿ 2000ಗಳನ್ನ ಇದೇ ತಿಂಗಳು ಅಂದರೆ 6 ನೆಯ ಕಂತಿನ ಹಣವನ್ನು ನೇರವಾಗಿ ಡಿಪಿಟಿ ಮೂಲಕ ಯೋಜನೆಯ ಫಲಾನುಭವಿಗಳಿಗೆ ಖಾತೆಗೆ ಜಮಾ ಆಗಲಿದೆ.

What is a Pink Card??

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪಡೆಯಲಾಗುವ ಪಿಂಕ್ ಕಾರ್ಡಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಮೂವರ ಭಾವಚಿತ್ರವನ್ನು ಕಾರ್ಡ್ನಲ್ಲಿ ಕಾಣಬಹುದು. ಕಾರ್ಡಿಗೆ ಗ್ರಹಲಕ್ಷ್ಮಿ ಯೋಜನೆ ಅಥವಾ 2000 ಎಂದು ಹೆಸರನ್ನು ಇಡಲಾಗಿದೆ ಇದು ಗುಲಾಬಿ (Pink Colour) ಬಣ್ಣದಲ್ಲಿರುತ್ತದೆ.

What are the benefits of Pink Card?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವ ಮಹಿಳೆಯರು ತಮ್ಮ ಬಳಿ ಪಿಂಕ್ ಕಾರ್ಡನ್ನು ಇಟ್ಟುಕೊಂಡಿದ್ದರೆ. ಪ್ರತಿ ತಿಂಗಳು ಖಾತೆಗೆ ಜಮಾ ಆಗುವ ಹಣದ ಬಗ್ಗೆ ಎಲ್ಲಿಯಾದರೂ ಸಹ ಮಾಹಿತಿಯನ್ನು ಪಡೆಯಬಹುದು.

ಈ ಕಾರ್ಡಿನಲ್ಲಿ ಒಂದು ಕ್ಯೂಆರ್ ಕೋಡನ್ನು (QR CODE) ನಿಡಲಾಗಿದೆ. ಇದನ್ನ ಸ್ಕ್ಯಾನ್ ಮಾಡುವುದರ ಮೂಲಕ ನಿಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹೊಸ ಅಪ್ಡೇಟ್ ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಪ್ರೆಸೆಂಟ್ ಸ್ಟೇಟಸ್ ಚೆಕ್ (Present Status Check) ಮಾಡಿಕೊಳ್ಳಲು ಅನುಕೂಲಕರವಾಗಿರಲಿದೆ. ಇನ್ನು ಪಿಂಕ್ ಕಾರ್ಡ್ ಅನ್ನು ಊರಿನ ಅಂಗನವಾಡಿ ಇಲ್ಲವೇ ಅಶಾ ಕಾರ್ಯಕರ್ತೆಯರು ವಿತರಿಸುತ್ತಾರೆ.

advertisement

Leave A Reply

Your email address will not be published.