Karnataka Times
Trending Stories, Viral News, Gossips & Everything in Kannada

Bank Rule: ಬ್ಯಾಂಕ್ ಖಾತೆ ಕ್ಲೋಸ್ ಆದ್ರೆ ಅದರಲ್ಲಿ ಇರುವ ಹಣ ಹಿಂಪಡೆಯಬಹುದೇ? ಬ್ಯಾಂಕಿನ ಈ ರೂಲ್ಸ್ ತಿಳಿದುಕೊಳ್ಳಿ!

advertisement

ಬ್ಯಾಂಕಿನಲ್ಲಿ ನೀವು ಉಳಿತಾಯ ಖಾತೆ (Saving Account) ಅಥವಾ ಚಾಲ್ತಿ ಖಾತೆ (Current Account) ತೆರೆದರೆ ಅದರ ನಿರ್ವಹಣೆಗೆ RBI ತನ್ನದೇ ಆಗಿರುವ ನಿಯಮಗಳನ್ನು ಸೂಚಿಸಿದೆ. ಆರ್ ಬಿ ಐ ನಿಯಮದ ಅನುಸಾರ ನೀವು ಹಣ ವರ್ಗಾವಣೆ ಮತ್ತು ಹಣ ಠೇವಣಿ ಮಾಡಬಹುದು ಅದೇ ರೀತಿ ಬ್ಯಾಂಕ್ ಗಳು ಕೂಡ ನಿಮ್ಮ ಖಾತೆಯನ್ನು ನಿರ್ವಹಿಸುತ್ತವೆ.

ಒಂದು ವೇಳೆ ನೀವು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಅದರಲ್ಲಿ ಠೇವಣಿ ಹಣವನ್ನು ಇಟ್ಟು ಹತ್ತು ವರ್ಷಗಳವರೆಗೆ ಅದನ್ನ ಬಳಕೆ ಮಾಡದೆ ಅದರಲ್ಲಿ ಇರುವ ಹಣವನ್ನು ಏನು ಮಾಡಲಾಗುತ್ತದೆ ಗೊತ್ತಾ?

ಬ್ಯಾಂಕ ಖಾತೆ ನಿಷ್ಕ್ರಿಯಗೊಳಿಸಬಹುದೇ?

ಒಬ್ಬ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯನ್ನು ಎರಡು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ನಿರ್ವಹಣೆ ಮಾಡದೇ ಇದ್ದರೆ ಅಥವಾ ಹಣಕಾಸಿನ ವ್ಯವಹಾರ ಮಾಡದೆ ಇದ್ದರೆ ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದು. ಈ ನಿಯಮ ಯಾವುದೇ ಎಫ್ ಡಿ ಆರ್ ಡಿ ಉಳಿತಾಯ ಖಾತೆ ಕರೆಂಟ್ ಅಕೌಂಟ್ ಎಲ್ಲದಕ್ಕೂ ಅನ್ವಯಿಸುತ್ತದೆ. ಇನ್ನು ಹತ್ತು ವರ್ಷಗಳವರೆಗೆ ನೀವು ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಹಣಕ್ಕೆ ಸಂಬಂಧಪಟ್ಟಂತೆ ಯಾವುದೇ ವ್ಯವಹಾರ ಮಾಡದೆ ಇದ್ದರೆ ಆ ಹಣವನ್ನು ಕ್ಲೈಮ್ ಮಾಡದೆ ಇರುವ ಹಣ ಎಂದು ಘೋಷಿಸಲಾಗುತ್ತದೆ. ಹಾಗೂ ಆ ಹಣವನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಥವಾ, ಜಾಗೃತಿ ನಿಧಿ (DEAF) ಗೆ ವರ್ಗಾವಣೆ ಮಾಡಲಾಗುತ್ತದೆ.

ಕ್ಲೈಮ್ ಮಾಡ್ದೆ ಇರುವ ಹಣ ಹಿಂಪಡೆಯಬಹುದೇ?

 

advertisement

 

ಸಾಮಾನ್ಯವಾಗಿ ಮರಣ ಹೊಂದಿದವರ ಖಾತೆಯನ್ನು ಈ ರೀತಿ ಕ್ಲೈಮ್ ಮಾಡದೆ ಇರುವ ಹಣ ಎಂದು ಘೋಷಿಸಲ್ ಪಡುತ್ತದೆ ಆದರೆ ಒಂದು ವೇಳೆ ನಾಮಿನಿ ಇದ್ದಾಗ ಆ ನಾಮಿನಿ ಹೆಸರಿನ ವ್ಯಕ್ತಿ ಅಥವಾ ಕುಟುಂಬದವರು ಸುಲಭವಾಗಿ ಈ ಹಣವನ್ನು ಮಾಡಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ನಾಮಿನಿ ಇಲ್ಲದೆ ಇದ್ರೆ ಏನು ಮಾಡಬೇಕು?

ಇನ್ನು ಮರಣ ಹೊಂದಿದವರ ಖಾತೆಯಲ್ಲಿ ಇರುವ ಹಣವನ್ನು ಕ್ಲೈಮ್ ಮಾಡಲು ಒಂದುವೇಳೆ ನಾಮಿನಿ ಹೆಸರು ಸೂಚಿಸದೆ ಇದ್ದಾಗ ಉತ್ತರಾಧಿಕಾರಿ ಪ್ರಮಾಣ ಪತ್ರವನ್ನು ನೀಡಿ ಈ ಹಣವನ್ನು ಕ್ಲೈಮ್ ಮಾಡಬಹುದು. ಹೀಗೆ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ ನಂತರ ಬ್ಯಾಂಕ್ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸುತ್ತದೆ. ಇದಕ್ಕೆ ಅದರದ್ದೇ ಆಗಿರುವ ಪ್ರೋಸೆಸ್ ಕೂಡ ಇದ್ದು ಸ್ವಲ್ಪ ದಿನ ಸಮಯ ಹಿಡಿಯುತ್ತದೆ.

ಕೊಟ್ಟಿರುವ ದಾಖಲೆಗಳೆಲ್ಲವೂ ಸರಿಯಾಗಿ ಇದ್ದು ಉತ್ತರಾಧಿಕಾರಿ ಹೌದು ಎನ್ನುವುದು ಸಾಬೀತಾದರೆ ಮರಣ ಹೊಂದಿದವರ ಖಾತೆಯಲ್ಲಿ ಇರುವ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅಥವಾ ವಿತ್ ಡ್ರಾ ಮಾಡಿಕೊಳ್ಳಬಹುದು. ಹತ್ತು ವರ್ಷಗಳವರೆಗೂ ಈ ಕೆಲಸ ಮಾಡದೆ ಇದ್ದರೆ ಅಂತಹ ಖಾತೆಯ ಹಣವನ್ನು ಶಿಕ್ಷಣ ನಿಧಿಗಾಗಿ ವರ್ಗಾಯಿಸಲಾಗುವುದು.

advertisement

Leave A Reply

Your email address will not be published.