Karnataka Times
Trending Stories, Viral News, Gossips & Everything in Kannada

FASTag: ಫಾಸ್ಟ್ಯಾಗ್ ಬಳಸುವ ಗ್ರಾಹಕರಿಗೆ ಬಿಗ್ ಅಪ್ಡೇಟ್, ಫೆ.29 ರಿಂದ ಈ ರೀತಿಯ ಪೇಮೆಂಟ್ ವರ್ಕ್ ಆಗಲ್ಲ!

advertisement

ಇಂದು ಡಿಜಿಟಲ್ ಪಾವತಿಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಾರೆ.ಅತ್ಯಂತ ತ್ವರಿತ ಗತಿಯಲ್ಲಿ ಹಣ ಪಾವತಿ, ಹಣ ಹಿಂಪಡೆಯುವಿಕೆ ಇತ್ಯಾದಿ ಸುಲಭವಾಗಿ ಪಡೆಯಬಹುದು‌. ಇಂದು ಯುಪಿಐ ಸೇರಿದಂತೆ ಪೇಟಿಎಂ ಆ್ಯಪ್ ಬಳಕೆಯು ಹೆಚ್ಚು ಚಾಲ್ತಿಯಲ್ಲಿದೆ. ಹೆಚ್ಚಿನ ಜನರು ಮೊಬೈಲ್ ಪಾವತಿಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಪೇಟಿಎಂನ ಬಳಕೆದಾರರ ಸರಾಸರಿ ಮಾಸಿಕ ವಹಿವಾಟು ಶೇ. 19ರಷ್ಟು ಏರಿಕೆ ಕಂಡಿದೆ. ಆದರೆ ಇದೀಗ ಪೆಟಿಎಮ್ ಬಳಕೆದಾರರಿಗೆ ಅರ್ ಬಿ ಐ ನಿರ್ಬಂಧ ವಿಧಿಸಿದೆ.

ನಿರ್ಬಂಧ ಏನು?

RBI ಇದೀಗ Paytm ಬಳಕೆದಾರರಿಗೆ ಶಾಖ್ ನೀಡಿದ್ದು‌ Paytm Payments ಗೆ ಫೆ.29ರಿಂದ ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ ಹಾಗೂ FASTag ಸೇವೆ ನೀಡಬಾರದು ಎಂಬುದಾಗಿ‌ ಆರ್‌ಬಿಐ ನಿರ್ಬಂಧ ಮಾಡಿದೆ.

ಅಗತ್ಯ ಸೇವೆಗಳು ಚಾಲ್ತಿಯಲ್ಲಿತ್ತು:

ಪೇಟಿಎಂ ಆ್ಯಪ್​ನಲ್ಲಿ ಕೇವಲ ಯುಪಿಐ ವಹಿವಾಟು ಅಲ್ಲ. ಕೆಲವೊಂದು ಅಗತ್ಯ ಸೇವೆಗಳು ಕೂಡ ಇದ್ದು ಮ್ಯುಚುವಲ್ ಫಂಡ್ ವಹಿವಾಟು, ಟಿಕೆಟ್ ಬುಕಿಂಗ್, ಪ್ಲಾಟ್​ಫಾರ್ಮ್, Paytm FASTag ಇತ್ಯಾದಿ ಸೇವೆಗಳು ಕೂಡ ಲಭ್ಯವಿದೆ.

ಫಾಸ್ಟ್ಯಾಗ್ ಬಳಸುವ ಗ್ರಾಹಕರಿಗೆ ಸಂಕಷ್ಟ:

 

advertisement

 

ವಾಹನಗಳಲ್ಲಿ FASTag ಬಳಸುವ ಗ್ರಾಹಕರಿಗೆ ಕೂಡ ಇದು ಸಂಕಷ್ಟ ವಾಗಿದೆ. ಫೆಬ್ರವರಿ 29ರ ಬಳಿಕ ಯಾವುದೇ ಟೋಲ್ ಗೇಟ್‌ (Toll Date) ಗಳಲ್ಲಿ ಪೇಟಿಎಂ ಫಾಸ್ಟ್ಯಾಗ್‌ ಕಾರ್ಯನಿರ್ವಹಣೆ ಮಾಡೋದಿಲ್ಲ. ಇದೀಗ ಆರ್‌ಬಿಐ ಹಾಕಿರುವ ನಿರ್ಬಂಧದಿಂದ ಪೇಟಿಎಂ ಗ್ರಾಹಕರೇ ಶಾಖ್ ಆಗಿದ್ದಾರೆ.

ಯಾಕೆ ಈ ನಿರ್ಬಂಧ:

ಪೆಟಿಎಮ್ ನ ಆಡಿಟ್‌ನ ವೇಳೆ ನಿಯಮ ಉಲ್ಲಂಘನೆ ವಿಚಾರ ಕಂಡು ಬಂದ ಹಿನ್ನಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿರ್ಬಂಧ ವಿಧಿಸಿದೆ. ಫೇ 29ರ ಬಳಿಕ ಪೇಟಿಎಂ FASTag ಖಾತೆಯಲ್ಲಿ ಹಣವಿದ್ದರೂ ಕೂಡ ಕಾರ್ಯನಿರ್ವಹಿಸುವುದಿಲ್ಲ.ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆಯ ಸೆಕ್ಷನ್ 35ಎ ಅಡಿಯಲ್ಲಿ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್​ಬಿಐ ಕ್ರಮ ಕೈಗೊಂಡಿದೆ.

ಪೇಟಿಎಂ ಟ್ವೀಟ್:

ಇದೀಗ ಈ ವಿಚಾರವಾಗಿ ಪೇಟಿಎಮ್ ಟ್ವೀಟ್ ಮಾಡಿದ್ದು ನಿಮ್ಮ ಪೇಟಿಎಂ ಫಾಸ್​ಟ್ಯಾಗ್​ನಲ್ಲಿ ಹಣ ಇದ್ದರೆ ಅದರ ಬಳಕೆಯನ್ನು ಮುಂದುವರಿಸಬಹುದು. ಇರುವ ಹಣವನ್ನು ಬಳಕೆ ಮಾಡಿ, ಅಥವಾ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು ಎಂದಿದೆ.ಈಗಾಗಲೇ ನೀವು ಫಾಸ್​ಟ್ಯಾಗ್, ವ್ಯಾಲಟ್ ಇತ್ಯಾದಿಯಲ್ಲಿ ಹಣ ಇದ್ದರೆ ಚಿಂತೆ ಪಡಬೇಕಿಲ್ಲ. ನೀವದನ್ನು ನಿರ್ವಹಣೆ ಮಾಡಬಹುದು ಎಂದಿದೆ.

advertisement

Leave A Reply

Your email address will not be published.