Karnataka Times
Trending Stories, Viral News, Gossips & Everything in Kannada

EPFO: ಆನ್‌ಲೈನ್‌ನಲ್ಲಿ EPFO ಹಣ ಪಡೆಯುವ ಸುಲಭ ವಿಧಾನ‌ ಇಲ್ಲಿದೆ!

advertisement

ಇತ್ತೀಚಿನ ದಿನದಲ್ಲಿ ಕೆಲಸ ನಿರ್ವಹಣೆ ಮಾಡುವ ಉದ್ಯೋಗಿಗಳ ಪರವಾಗಿ ಅನೇಕ ಯೋಜನೆ ರೂಪಿಸುವುದು ಉದ್ಯೋಗಿ ಸ್ನೇಹಿ ನೀತಿ ನಿರ್ಬಂಧಗಳನ್ನು ಪರಿಚಯಿಸುವುದು ಸಾಮಾನ್ಯ ಸಂಗತಿಯಾಗಿದೆ. ಉದ್ಯೋಗ ನೀಡುವ ಸಾಮಾನ್ಯ ಕಂಪೆನಿಯಿಂದ ಸರಕಾರಿ ಕಚೇರಿಗಳ ವರೆಗೆ ಉದ್ಯೋಗಿಗಳಿಗೆ ಸೌಲಭ್ಯ ನೀಡಿ ಆಡಳಿತ ಉನ್ನತೀಕರಣಕ್ಕೆ ಪ್ರಯತ್ನ ಪಡಲಾಗುತ್ತದೆ. ಅದೇ ರೀತಿ ಉದ್ಯೋಗಿಗಳಿಗೆ ಕಾನೂನಾತ್ಮಕವಾಗಿ ಹಕ್ಕು ಮಾನ್ಯತೆ ದೊರಕಿಸಿ ಕೊಡುವ ಭಾರತೀಯ ಕಾರ್ಮಿಕ ಸಚಿವಾಲಯವು ಉದ್ಯೋಗಿಗಳ ಭವಿಷ್ಯ ನಿಧಿ ಮೂಲಕ ಸಾಮಾನ್ಯ ಭಾರತೀಯ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ನೀಡಲು ಮುಂದಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ತುರ್ತು ಸಂದರ್ಭದಲ್ಲಿ ಪಡೆಯಬಹುದು:

 

 

advertisement

ನಿವೆಷ್ಟು ದುಡಿದರೂ ಉಳಿತಾಯ ಯೋಜನೆಯಲ್ಲಿ ನಾವಿಲ್ಲದಿದ್ದರೆ ದುಡಿದು ವ್ಯರ್ಥ ಎಂಬ ಭಾವನೆ ಇದೆ. ಅದೇ ರೀತಿ ತೀರ ಅಗತ್ಯ ಬಿದ್ದರೆ ಸಾಲ ಸೂಲ ಮಾಡುವ ಬದಲು ಹಣ ಇದ್ದಾಗಲೇ ಸ್ವಲ್ಪ ಸ್ವಲ್ಪವಾದರೂ ಸರಿ ಉಳಿಸಿ ಯಾವುದಾದರೂ ಯೋಜನೆಯಲ್ಲಿ ತೆಗೆದುಕೊಂಡರೆ ನೀವು ಭವಿಷ್ಯದಲ್ಲಿ ಭದ್ರತೆಯಲ್ಲಿ ಬದುಕಬಹುದು. ಹಾಗಾಗಿ ಉದ್ಯೋಗಿಗಳಿಗೆ ಮತ್ತು ಕಾರ್ಮಿಕರಿಗೆ ಉಳಿತಾಯ ಯೋಜನೆ ಬೆಂಬಲಿಸುವ ಸಲುವಾಗಿ ಭಾರತದ ಸರಕಾರವೂ ಇಪಿಎಫ್ ಒ (EPFO) ಅಂದರೆ ನೌಕರರ ಭವಿಷ್ಯ ನಿಧಿ ಪರಿಚಯಿಸಿದೆ.

ಈ ಮೂಲಕ ಪಿಂಚಣಿ (Pension) ರೂಪದಲ್ಲಿ ಈ ಹಣ ನಿಮಗೆ ದೊರೆಯಲಿದೆ. ಕೆಲ ಅಗತ್ಯ ಸಂದರ್ಭದಲ್ಲಿ ಅಂದರೆ ಮಕ್ಕಳ ಮದುವೆ, ಮನೆ ಕಟ್ಟಲು, ವಿದ್ಯಾಭ್ಯಾಸ ಅಥವಾ ಆರೋಗ್ಯ ಸಂಬಂಧಿತ ಕಾರಣಕ್ಕೆ ಹಣ ಬೇಕಾದಾಗ ನೌಕರರ ಭವಿಷ್ಯ ನಿಧಿ ಮೂಲಕ ನಿಗಧಿತ ಮೊತ್ತ ವಾಪಾಸ್ಸು ಪಡೆಯಲು ಅವಕಾಶ ಇದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಅನ್ ಲೈನ್ ಮೂಲಕ ಪಡೆಯಿರಿ:

  • ಉದ್ಯೋಗಿಗಳ ಭವಿಷ್ಯ ನಿಧಿ ಹಣ ಸಾಮಾನ್ಯ ಭಾರತೀಯ ನಾಗರಿಕರಿಗೆ ಉಳಿತಾಯ ಮತ್ತು ಆರ್ಥಿಕ ಭದ್ರತೆಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಈ EPFO ಹಣವನ್ನು ಆನ್‌ಲೈನ್‌ನಲ್ಲಿ ನೀವು ಪಡೆಯಬಹುದು.
  • ಮೊದಲಿಗೆ ನೀವು EPFO ​​ಪೋರ್ಟಲ್‌ಗೆ ಲಾಗಿನ್ ಮಾಡಿ, ನಂತರದಲ್ಲಿ ನಿಮ್ಮ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
  • ನಂತರದಲ್ಲಿ ಆನ್‌ಲೈನ್ ಕ್ಲೈಮ್ ಆಯ್ಕೆಮಾಡಿ, ಹಣವನ್ನು ಹಿಂತೆಗೆದುಕೊಳ್ಳಿ ಈ ಆಪ್ಚನ್ ಆಯ್ಕೆಮಾಡಿ, ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.ನಂತರದಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳು, ಆಧಾರ್ ಸಂಖ್ಯೆ, ಹಿಂಪಡೆಯುವ ಯೋಜನೆ ಇತ್ಯಾದಿಗಳಂತಹ ಅಗತ್ಯ ಮಾಹಿತಿಯನ್ನು ನೀವು ನಮೂದಿಸಬೇಕು.
  • ನಂತರ ನಿಮ್ಮ ‌ಮೊಬೈಲ್ ಗೆ ಓಟಿಪಿ ಬರಲಿದೆ, ಈ ಓಟಿಪಿ‌ ಅನುಮೋದಿಸಿಬೇಕು.ಬಳಿಕ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಣವನ್ನು ಹಿಂಪಡೆದ ನಂತರ, ಪಾವತಿಯು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆಯೇ ಎಂದು ಪರಿಶೀಲನೆ ಮಾಡಿ‌.

advertisement

Leave A Reply

Your email address will not be published.