Karnataka Times
Trending Stories, Viral News, Gossips & Everything in Kannada

Arecanut Yield: 700 ಗಿಡದಲ್ಲಿ 100 ಕ್ವಿಂಟಲ್ ಅಡಿಕೆ ಇಳುವರಿ! ಈ ಚಿಕ್ಕ ಟ್ರಿಕ್ಸ್ ಉಪಯೋಗಿಸಿದ ರೈತ

advertisement

ಅಡಿಕೆ ಕೃಷಿಗೆ ಎಷ್ಟು ಬಾರಿ ಮುಂಜಾಗ್ರತೆ ವಹಿಸಿದರೂ ಅದು ಕಡಿಮೆ ಎಂದು ಹೇಳಬಹುದು. ಅನೇಕ ಸಲ ಕೃಷಿ ಮಾಡಿದ್ದ ಪರಿಣಿತರೂ ಕೂಡ ಅಡಿಕೆ ತೋಟದ ಕೃಷಿ ಮಾಡುವಾಗ ಎಡವುದು ಇದೆ. ಅದೇ ರೀತಿ ನೀವು ಅಡಿಕೆ ಕೃಷಿ ಮಾಡುವ ಮುನ್ನ ಪರಿಣಿತರ ಬಳಿ ಕೇಳಿದರೆ ಕೃಷಿ ಬಗ್ಗೆ ಸೂಕ್ತ ಸಲಹೆ ಸೂಚನೆ ಸಿಗಲಿದೆ. ಹಾಗಾಗಿ ಅಡಿಕೆ ಕೃಷಿ ಮಾಡುವಾಗ ಯಾವ ಪೋಷಕಾಂಶ ನೀಡಿದರೆ ನಿಮಗೆ ಅಧಿಕ ಇಳುವರಿ (Arecanut Yield) ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

ಈ ಪೋಷಕಾಂಶ ಬಳಸಿ:

ಅಡಿಕೆ ಕೃಷಿ (Arecanut Cultivation) ಮಾಡುವಾಗ ತೀರಾ ಹಳೆ ವಿಧಾನ ಅನುಸರಿಸದೆ ಡಾಕ್ಟರ್ ಸಾಯ್ಲ್ ಬಳಸಿದರೆ ನಿಮಗೆ ಅಧಿಕ ಇಳುವರಿಯನ್ನು ದೀರ್ಘ ಕಾಲದಲ್ಲಿ ಪಡೆಯಬಹುದಾಗಿದೆ. ಸುಮಾರು 700 ಗಿಡಕ್ಕೆ 1ಕ್ವಿಂಟಲ್ ನಷ್ಟು ನಿಮಗೆ ಇಳುವರಿ ಸಿಗಲಿದೆ. ಡಾಕ್ಟರ್ ಸಾಯ್ಲ್ ಬಳಸುವುದರಿಂದ ಮಳೆ ಅಧಿಕ ಇದ್ದರೂ ಕೂಡ ನಿಮ್ಮ ಅಡಿಕೆ ಸಸಿ ಕೊಳೆಯದಂತೆ ರಕ್ಷಣೆ ನೀಡಲಿದೆ. ಮಳೆ ಕಡಿಮೆ ಇದ್ದರೂ ಸ್ವಲ್ಪ ನೀರಿಗೂ ಫಸಲು ಬರುವಂತೆ ಮಾಡಲಿದೆ ಹಾಗಾಗಿ ಇಂತಹ ಪೋಷಕಾಂಶ ನೀಡಬಹುದಾಗಿದೆ.

ಈ ಅಗತ್ಯ ಕ್ರಮ ಅನುಸರಿಸಿ:

 

Image Source: Agri Farming

 

advertisement

ಈಗಂತೂ ಬಿಸಿಲು ಇರುವ ಕಾರಣದಿಂದ ಅಡಿಕೆ ಸಸಿಯ ಕಾಂಡಕ್ಕೆ ಅಧಿಕ ಹಾನಿಯಾಗುತ್ತಿದೆ. ಪರಿಣಾಮ ಗಿಡದ ಎಲೆಗಳು ಹಳದಿಯಾಗಿ ಅನೇಕ ಸಮಸ್ಯೆ ಕಾಡಿ ಫಸಲು ಕೂಡ ಬಂದಿಲ್ಲ ಎಂಬ ಸಮಸ್ಯೆ ಇರಲಿದೆ. ಹಾಗಾಗಿ ಗಿಡ ನೆಡುವ ಜೊತೆಗೆ ಈಗಾಗಲೆ ಸಸಿ ಒಂದು ವರ್ಷ ಆಗಿ ಬೆಳೆದಿದ್ದರೆ ಅವುಗಳ ಕಾಂಡದ ಆರೈಕೆ ಮಾಡಬೇಕು ಅದಕ್ಕಾಗಿ ನೀವು ಸುಣ್ಣವನ್ನು ಅಡಿಕೆ ಮರದ (Arecanut Tree) ಬುಡಕ್ಕೆ ಹಾಕಬೇಕು ಇಲ್ಲವೇ ಲೇಪನ ಮಾಡಬೇಕು ಇದು ಬಿಸಿಲಿನ ಶಾಖವನ್ನು ಕಾಂಡಕ್ಕೆ ತೊಂದರೆ ನೀಡದಂತೆ ಕಾರ್ಯ ನಿರ್ವಹಿಸುತ್ತದೆ.

ಸೊಪ್ಪಿನ ಗೊಬ್ಬರ ಬಳಕೆ:

 

Image Source: EcoFriendly Coffee

 

ಬಿಸಿಲಿನ ತಾಪಮಾನ ಕಡಿಮೆ ಮಾಡುವ ಹಾಗೂ ಸಸಿಗಳಿಗೆ ಗೊಬ್ಬರದಂತೆ ಬಳಕೆಯಾಗಲು ಅಡಿಕೆ ಗಿಡದ ಹಾಳೆ ಮತ್ತು ಎಲೆಯ ಕಸ ಹಾಗೂ ಸುತ್ತ ಮುತ್ತಲಿನ ಗಿಡಗಳ ಕಟಾವು ಮಾಡಿದರೆ ಅದು ನಿಮ್ಮ ಅಡಿಕೆ ಮರಕ್ಕೆ ಪೋಷಣೆ ನೀಡಲಿದೆ. ಹಸಿರು ಎಲೆಯ ಗೊಬ್ಬರ ಮರಕ್ಕೆ ಬಿಸಿಲಿನ ತಾಪ ತಡೆಯುವ ನೆಲೆಯಲ್ಲಿ ಉಪಕಾರ ಮಾಡಲಿದೆ ಎಂದು ಹೇಳಬಹುದು.

ಕಡಿಮೆ ನೀರು ಸಾಕು:

ಹಸಿರು ಎಲೆ ಗೊಬ್ಬರವನ್ನು ಕಟಾವು ಮಾಡಿ ಹಾಕುದರಿಂದ ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗಲಿದೆ. ಈ ಜೀವಿಗಳು ಅಡಿಕೆ ಗಿಡಕ್ಕೆ ಅಗತ್ಯವಾದ ಮಣ್ಣಿನ ಪೋಷಕಾಂಶ ನೀಡಲಿದ್ದು ಕಾಂಡ ತಂಪಾಗಿ ಇರುವಂತೆ ಮಾಡಲಿದೆ. ಹಾಗಾಗಿ ಅಡಿಕೆ ಗಿಡಕ್ಕೆ ಕಡಿಮೆ ನೀರು ಹಾಕಿದ್ದರೂ ಸಾಕಾಗಲಿದೆ. ಈ ಎಲ್ಲ ಉಪಯುಕ್ತ ಕ್ರಮ ಅಳವಡಿಸಿದರೆ ಎಕರೆ ಜಾಗದಲ್ಲಿ ಕ್ವಿಂಟಲ್ ಅಡಿಕೆ ಇಳುವರಿ (Arecanut Yield) ಮಾಡಿ ಅಧಿಕ ಲಾಭ ನಿಮ್ಮದಾಗಿಸಬಹುದು.

advertisement

Leave A Reply

Your email address will not be published.