Karnataka Times
Trending Stories, Viral News, Gossips & Everything in Kannada

Apple Products: ದೇಶಾದ್ಯಂತ ಯಾವುದೇ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಬಳಸುವವರಿಗೆ ಹೊಸ ಸೂಚನೆ

advertisement

ಇನ್ನು ಪ್ರಚಲಿತ ವಿದ್ಯಮಾನದಲ್ಲೀ ಅಪಲ್ ಕಂಪನಿಯ ವಸ್ತುಗಳನ್ನು ಸಾಮಾನ್ಯವಾಗಿ ಬಳಸುತ್ತಾ ಇದ್ದಾರೆ ಇನ್ನು ಹಲವರಿಗೆ ಆಪಲ್ ಕಂಪನಿಯ ವಸ್ತುಗಳನ್ನು (Apple Products)ಕೊಂಡುಕೊಳ್ಳುವುದು ಒಂದು ಮುಖ್ಯವಾದ ಅಂತಹ ವಿಷಯ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಪ್ರಸ್ತುತದಲ್ಲಿ ಐಫೋನ್ ಮತ್ತು ಐಪಾಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಇನ್ನು ಅದಕ್ಕೆ ಇರುವಂತಹ ಬೆಲೆಯು ಕೂಡ ದಿನೇ ದಿನ ಬಹಳಷ್ಟು ಹೆಚ್ಚುತ್ತಾ ಇದೆ. ಇನ್ನು ಇತ್ತೀಚಿಗೆ ಕೇಂದ್ರದಿಂದ ಈ ಆಪಲ್ ಕಂಪನಿ (Apple Company)  ವಸ್ತುಗಳನ್ನು ಬಳಸುತ್ತಿರುವವರಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಈ ಆಪಲ್ ಕಂಪನಿ ಪ್ರಾಡಕ್ಟ್ಗಳು (Apple Products) ಹೆಚ್ಚಾದಂತೆ ಅದರಿಂದ ಕೆಲವು ದುರ್ಬಲತೆಯು ಸಹ ಹೆಚ್ಚಾಗುತ್ತಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೀಗ ಎಚ್ಚರಿಕೆ ನೀಡಿದೆ. ಇನ್ನು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT) ತಂಡವು ಈ ಕುರಿತಾಗಿ ಎಚ್ಚರಿಕೆ ನೀಡಿದ್ದು, ರಿಮೋಟ್ ಕೋಡ್ ಎಕ್ಸಿಕ್ಯೂಶನ್ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಕಡೆ ನಿರ್ಣಾಯಕ ದುರ್ಬಲತೆ ಕಂಡು ಬಂದಿದೆ ಎಂದು ತಿಳಿಸಲಾಗಿದೆ.

ಇನ್ನು ಈ ರೀತಿಯಾದಂತಹ ದುರ್ಬಲತೆಯು ಆಪಲ್ ಕಂಪನಿಯ ಹಾರ್ಡ್ವೇರ್(Hardware) ಮತ್ತು ಸಾಫ್ಟ್ವೇರ್(Software) ಗಳಿಗೆ ಸಂಬಂಧಿಸಿದಂತೆ ವಿವಿಧ ಆಪಲ್ ಪ್ರಾಡಕ್ಟ್ಗ(Apple Products)ಳಲ್ಲಿಯೂ ಕೂಡ ಕಂಡು ಬಂದಿದೆ ಎಂದು ತಿಳಿಸಿದೆ. ಇನ್ನು ಇದರ ಕುರಿತಾಗಿ ಕೇಂದ್ರ ಎಲ್ಲ ಸಾರ್ವಜನಿಕರಿಗೂ ಎಚ್ಚರಿಕೆಯನ್ನು ನೀಡಿದೆ. ಇನ್ನು ಈ ದುರ್ಬಲತೆಯ ಮೂಲಕವಾಗಿ ಮಾಹಿತಿ ಸೋರಿಕೆಯೂ ಕೂಡ ಉಂಟಾಗಬಹುದು ಎಂಬುದು ತಿಳಿದು ಬಂದಿದೆ. ಆದ್ದರಿಂದ ಇದನ್ನು ಸರಿಪಡಿಸಿಕೊಳ್ಳುವ ಸಲುವಾಗಿ ತಜ್ಞರು ನೀಡಿರುವ ಸಲಹೆಯಂತೆ ಆಪಲ್ ಕಂಪನಿಯ ವಸ್ತುಗಳ ಬಳಕೆದಾರರು ಈ ವಿಚಾರಗಳನ್ನು ಪಾಲಿಸಬೇಕಿದೆ.

advertisement

Image Source: FoneArena

ಅವು ಯಾವುವು ಎಂದರೆ ಮೊದಲನೆಯದಾಗಿ ನೆಟ್ವರ್ಕ್ ಸೆಕ್ಯೂರಿಟಿ (Network Security) ಇದನ್ನು ಎಲ್ಲರೂ ಕೂಡ ಸರಿಯಾದ ರೀತಿಯಲ್ಲಿ ಬಳಸಬೇಕು. ಅಂದರೆ ಯಾವುದೇ ರೀತಿಯಾದಂತಹ ಪಬ್ಲಿಕ್ ವೈಫೈ ಬಳಸುವ ಮುಂಚೆ ಅದು ಸುರಕ್ಷತೆಯನ್ನು ಹೊಂದಿದೆ ಎಂದು ತಿಳಿದುಕೊಳ್ಳಬೇಕಿದೆ. ನಂತರ ಅನ್ ಆಥೋರೈಸ್ಡ್ ಆಗಿರುವಂತಹ ಯಾವುದೇ ಮಾಧ್ಯಮವನ್ನು ಬಳಸುವುದನ್ನು ನಿಲ್ಲಿಸಬೇಕೆಂದು ತಿಳಿಸಲಾಗಿದೆ. ಇನ್ನು ಇದು ಮಾತ್ರವಲ್ಲದೆ ಯಾವುದಾದರೂ ಮುಖ್ಯವಾದ ಅಂತಹ ವಿಚಾರಗಳನ್ನು ಡೌನ್ ಲೋಡ್ ಮಾಡಬೇಕಾದರೆ ಸುರಕ್ಷಿತವಾಗಿರುವಂತಹ ಮಾಧ್ಯಮಗಳಿಂದಲೇ ಡೌನ್ಲೋಡ್ ಮಾಡುವಂತೆ ಸೂಚಿಸಲಾಗಿದೆ.

ಇದರೊಂದಿಗೆ Two factor authentication ಎಂಬ ಸೆಕ್ಯೂರಿಟಿಯನ್ನು ಬಳಸುವಂತೆ ತಿಳಿಸಲಾಗಿದೆ. ಅಂದರೆ ಇದರ ಮೂಲಕ ಸುರಕ್ಷತೆಯ ಮೇಲೆ ಇನ್ನೊಂದು ಪದರವಾಗಿ ಸುರಕ್ಷತೆಯನ್ನು ಒದಗಿಸುವಂತಹ ಕಾರ್ಯವನ್ನು ಇದು ಮಾಡುತ್ತದೆ. ಇನ್ನು ಈ ಎಲ್ಲಾ ವಿಚಾರಗಳನ್ನು ಹೊರತುಪಡಿಸಿ ರೆಗ್ಯುಲರ್ ಆಗಿ ಯಾವುದೇ ಒಂದು ಪ್ರಮುಖವಾಗಿರುವಂತಹ ಮಾಹಿತಿಯನ್ನು ಬ್ಯಾಕಪ್ ಆಗಿ ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ.

advertisement

Leave A Reply

Your email address will not be published.