Karnataka Times
Trending Stories, Viral News, Gossips & Everything in Kannada

LIC Policy: LIC ಪಾಲಿಸಿ ಇರುವ ದೇಶದ ಎಲ್ಲರಿಗೂ ಹೊಸ ಸೂಚನೆ! ಬೆಳ್ಳಂಬೆಳಿಗ್ಗೆ ಆದೇಶ

advertisement

ಸ್ನೇಹಿತರೆ ಎಲ್ಐಸಿ ಕಂಪನಿ ವತಿಯಿಂದ ಗ್ರಾಹಕರಿಗೆ ಮಹತ್ತರವಾದ ಎಚ್ಚರಿಕೆಯೊಂದು ರವಾನಿಸಲಾಗಿದ್ದು ನೀವೇನಾದರೂ ಎಲ್ಐಸಿಯಲ್ಲಿ ಪಾಲಿಸಿ (LIC policy)ಯನ್ನು ಹೊಂದಿದ್ದರೆ ಅಥವಾ ಪಾಲಿಸಿ ಪಡೆಯಲು ಯೋಜನೆ ಹೂಡಿದ್ದರೆ ಎಲ್ಐಸಿ ಪ್ರಕಟಿಸಿರುವಂತಹ ಎಚ್ಚರಿಕೆ ಏನು ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ವಂಚಕರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈ ತೆಗೆದುಕೊಳ್ಳಲು ಮುಂದಾದ LIC

ಕಳೆದ ಬುಧವಾರ, ಲೈಫ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಬ್ರಾಂಡ್ ಹೆಸರು(Brand Name), ಲೋಗೋ(Logo) ಹಾಗೂ ಹಿರಿಯ ಅಧಿಕಾರಿಗಳ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡಲು ಉಪಯೋಗಿಸುವುದಲ್ಲದೆ, ಕಂಪನಿ ಕುರಿತಾದ ನಕಲಿ ಸುದ್ದಿ(fake news) ಯನ್ನು ಹಾಗೂ ಮೋಸದ ಜಾಹೀರಾತನ್ನು ಹಬ್ಬಿಸುತ್ತಿರುವ ಕೆಲ ವ್ಯಕ್ತಿಗಳು ಹಾಗೂ ಸಂಸ್ಥೆಗೆ ಎಲ್ಐಸಿ ಕಂಪನಿ ಎಚ್ಚರಿಕೆ ನೀಡಿದೆ. ಜೊತೆಗೆ ಎಲ್ಐಸಿ ಎಲ್ಲಿ ಪಾಲಿಸಿಯನ್ನು ಹೊಂದಿರುವವರನ್ನು ಇಂಥ ವಂಚಕರು ಸಾಮಾಜಿಕ ಮಾಧ್ಯಮಗಳಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಇಂಥವರಿಂದ ಜಾಗರೂಕರಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.

advertisement

ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ನೀಡಿದ LIC

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಜನರಿಗೆ ವಂಚಿಸುತ್ತಿರುವ ಜನರ URL ಲಿಂಕ್(URL Link) ಗಳನ್ನು ಕಲೆ ಹಾಕುವ ಪ್ರಯತ್ನದಲ್ಲಿ ಎಲ್ಐಸಿ ಅಧಿಕಾರಿಗಳಿದ್ದು ತಮ್ಮ ಕಂಪನಿಯ ಅನುಮತಿ ಇಲ್ಲದೆ ಅದರ ಬ್ರಾಂಡ್ ಹೆಸರು ಹಾಗೂ ಲೋಗೋವನ್ನು ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈ ತೆಗೆದುಕೊಳ್ಳುತ್ತೇವೆ ಹಾಗೂ ಮೋಸದ ಚಟುವಟಿಕೆಯಲ್ಲಿ ತೊಡಗಿಕೊಂಡು ತಮ್ಮ ಪಾಲಿಸಿದಾರರನ್ನು ವಂಚಿಸುವ ಯೋಜನೆ ಹೂಡಿರುವವರಿಗೆ ಕಾನೂನಿನ ಮುಖಾಂತರ ಪಾಠ ಕಲಿಸುವ ನಿಟ್ಟಿನಲ್ಲಿ ಎಲ್ಐಸಿ ಅಧಿಕಾರಿಗಳು(LIC officer) ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಮೋಸದ ಜಾಹೀರಾತುಗಳಿಂದ ಜನರು ತಮ್ಮ ಹಣವನ್ನು ಕಳೆದುಕೊಳ್ಳಬೇಡಿ ಇವರಿಂದ ಜಾಗರೂಕರಾಗಿರಿ ಎಂಬ ಎಚ್ಚರಿಕೆಯ ಸಂದೇಶವನ್ನು ಎಲ್ಐಸಿ ನೀಡಿದೆ.

advertisement

Leave A Reply

Your email address will not be published.