Karnataka Times
Trending Stories, Viral News, Gossips & Everything in Kannada

RBI: ಪೆಟಿಎಂ ಬಳಿಕ ಈ ಅಪ್ಲಿಕೇಶನ್. ಮೇಲೆ ರಿಸರ್ವ್ ಬ್ಯಾಂಕ್ ಕ್ರಮ! ಹಣ ಇಟ್ಟಿದ್ದರೆ ಹಿಂತಗೆದುಕೊಳ್ಳಲು ಸೂಚನೆ!

advertisement

ಬ್ಯಾಂಕಿಗೆ ಸಂಬಂಧ ಪಟ್ಟ ನೀತಿ ನಿಯಮಗಳನ್ನು ಕಾಲ ಕಾಲಕ್ಕೆ ತಕ್ಕಂತೆ RBI ಬದಲಾಯಿಸುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಕೆಲವು ಪೇಮೆಂಟಿಂಗ್ ಆ್ಯಪ್ ಗಳು ನಿಯಮ ಮೀರಿವೆ ಎಂಬ ನೆಲೆಯಲ್ಲಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅನುಮತಿ ಇಲ್ಲದೆ ಪ್ರಿಪೇಯ್ಡ್ ಮಾಡಿಕೊಂಡಿದ್ದ ಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮಾಹಿತಿ ಯಾವುದು RBI ಈ ಕುರಿತಾದಂತೆ ಹೊರಡಿಸಿದ್ದ ಆದೇಶದಲ್ಲಿ ಏನಿದೆ ಎಂಬ ಬಗ್ಗೆ ಪೂರ್ತಿ ವಿವರಣೆ ಇಲ್ಲಿದೆ.

RBI ನಿಯಮ ಉಲ್ಲಂಘನೆ

ಟಾರ್ಕ್ ಚಾರ್ಜ್ ಎಂಬ ಕಂಪೆನಿಯೂ RBI ನಿಯಮ ಉಲ್ಲಂಘನೆ ಮಾಡಿದ್ದು ಆರ್ ಬಿಐ ನ ಕೆಂಗಣ್ಣಿಗೆ ಈ ಕಂಪೆನಿ ಗುರಿಯಾಗಿದೆ. ಟಾರ್ಕ್ ಚಾರ್ಜ್ ಎಂಬ ಕಂಪೆನಿಯೂ ಗ್ರಾಹಕರಿಗೆ ಪ್ರೀಪೇಯ್ಡ್ ಸೇವೆ ನೀಡುತ್ತಿದ್ದು ಇದಕ್ಕಾಗಿ ಜನರಿಂದ ಪೂರ್ವ ನಿಯೋಜಿತ ಹಣ ಪಡೆದಿರುವುದು ತಿಳಿದು ಬಂದಿದೆ. ಹಾಗಾಗಿ ಟಾಕ್ ಚಾರ್ಜ್ ನಿಂದ ಜನರಿಗೆ ಅನಧಿಕೃತವಾಗಿ ಹಣ ವರ್ಗಾವಣೆ ಆಗಿರುವುದು ಸಹ ತಿಳಿದು ಬಂದಿದ್ದು ಈ ಕಂಪೆನಿಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು RBI ಮುಂದಾಗಿದೆ.

ಟಾಕ್ ಚಾರ್ಜ್ ಅಪ್ಲೀಕೇಶನ್ ಎಂಬ ಸಂಸ್ಥೆಯು ತನ್ನ ವೆಬ್ಸೈಟ್ ಹಾಗೂ ಅಪ್ಲೀಕೇಶನ್ ಮೂಲಕ ಗ್ರಾಹಕರ ಜೊತೆವ್ಯವಹಾರ ನಡೆಸುವುದು ತಿಳಿದು ಬಂದಿದೆ. ಆದರೆ ಪಾವತಿ ಮತ್ತು ಸೆಟೆಲ್ ಮೆಂಟ್ ಸಿಸ್ಟಂ 2007ರ ನಿಯಮ ಉಲ್ಲಂಘನೆ ಮಾಡಿ ಅನಧಿಕೃತ ವ್ಯವಹಾರ ತೊಡಗಿಕೊಂಡಿದ್ದು ಸಹ ಬೆಳಕಿಗೆ ಬಂದಿದೆ. ನಿಬಂಧನೆಯ ಅಡಿಯಲ್ಲಿ ಅಗತ್ಯ ಅನುಮೋದನೆ ಪಡೆಯದೇ ಪ್ರಿಪೇಯ್ಡ್ ಸೇವೆ ನೀಡುವುದು ಖಾತರಿ ಆಗಿದೆ.

advertisement

Image Source: Linktree

RBI ತಿಳಿಸಿದ್ದೇನು?

ಟಾಕ್ ಚಾರ್ಜ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಗೆ ಗ್ರಾಹಕರ ವ್ಯಾಲೇಟ್ ನಲ್ಲಿ ಈಗಾಗಲೇ ಬಿದ್ದಿರುವ ಹಣವನ್ನು ಹಿಂಪಡೆಯುವಂತೆ RBI ಸೂಚನೆ ನೀಡಿದೆ. ಅದರ ಜೊತೆಗೆ ಜನರು ಅನಧಿಕೃತ ವೆಬ್ಸೈಟ್ ಹಾಗೂ ಲಿಂಕ್ ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಜನರಿಗೆ ಎಚ್ಚರಿಕೆ ನೀಡಿದೆ. ಅದೇ ರೀತಿ ಗ್ರಾಹಕರು ತಮ್ಮ ಹಣವನ್ನು ನೀಡುವ ಹಾಗೂ ಅಲ್ಲಿಂದ ಹಣ ಪಡೆಯುವ ಮೊದಲು ಸಂಬಂಧ ಪಟ್ಟ ಕಂಪೆನಿಗಳ ವ್ಯವಹಾರ ಎಂಥದ್ದು ಎಂಬ ಅರಿವು ಇರಬೇಕು ಈ ಬಗ್ಗೆ ಖಚಿತವಾಗಿ ಇರಬೇಕು ಎಂದು RBI ತಿಳಿಸಿದೆ.

15ದಿನ ಗಡುವು

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಶನ್ ಗೆ 1.6rating ಇದೆ. ಅದು ಕೂಡ ಸಮಸ್ಯೆ ಯಿಂದಲೇ ಕೂಡಿದೆ. ಪ್ರಿಪೇಯ್ಡ್ ಪೇಮೆಂಟ್ ವ್ಯಾಲೇಟ್ ಮತ್ತು ಸೇವೆ ನೀಡುವುದನ್ನು ನಿಲ್ಲಿಸುವಂತೆ RBI ಸೂಚಿಸಿದೆ. ವ್ಯಾಲೇಟ್ ನಲ್ಲಿ ಇರಿಸಲಾದ ಮೊತ್ತವನ್ನು 15ದಿನದ ಒಳಗೆ ಹಿಂದಿರುಗಿಸುವಂತೆ ತಿಳಿಸಲಾಗಿದ್ದು ಮೇ 17 ಕೊನೆಯ ದಿನವಾಗಿದೆ. ಪ್ರಿಪೇಯ್ಡ್ ಮೊತ್ತ ಗ್ರಾಹಕರಿಗೆ ಹಿಂತಿರುಗಿಸುವುದು ಕಡ್ಡಾಯ ಎಂದು ಸಹ ಉಲ್ಲೇಖಿಸಲಾಗಿದೆ.

advertisement

Leave A Reply

Your email address will not be published.