Karnataka Times
Trending Stories, Viral News, Gossips & Everything in Kannada

Arecanut: 8 ವರ್ಷದ ಒಂದು ಮರದಿಂದ 12Kg ಅಡಿಕೆ? ಹೇಗೆ. ಗೊತ್ತಾ ಇಲ್ಲಿದೆ ರೈತನ ಉಪಾಯ

advertisement

ಇಂದು ಸ್ವಂತ ಉದ್ಯಮ ಮಾಡಲು ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ.ಕಾರಣ ಇಂದು ಉದ್ಯೋಗ ಸುಲಭವಾಗಿ ಗಿಟ್ಟಿಸಿಕೊಳ್ಳುವುದು ಕಷ್ಟವೇ ಹಾಗಾಗಿ ಕೃಷಿಯತ್ತ ‌ಹೆಚ್ಚಿನ ಜನರು ಒಲವು ತೋರಿಸಿದ್ದಾರೆ. ಕೃಷಿ ಅಂದಾಗ ಮೊದಲು ನೆನಪಿಗೆ ಬರುವುದೇ ಈ ಅಡಿಕೆ ಕೃಷಿ. ಇಂದು ಮಾರುಕಟ್ಟೆ ಯಲ್ಲಿಯು ಉತ್ತಮ ಧಾರಣೆ ಇದೆ.ಈಗ ಹೊಸದಾಗಿ ಅಡಿಕೆ ಗಿಡ ಹಾಕಿದ ತೋಟ ಗಳು ಮುಂದಿನ ದಿನದಲ್ಲೂ ಉತ್ತಮ ಬೆಲೆ ಸಿಗಬಹುದು. ಮುಂದಿನ ದಿನದಲ್ಲಿ ಅಡಿಕೆಗೆ (Arecanut)  ಒಳ್ಳೆಯ ಬೆಲೆ ಸಿಗ ಬೇಕಾದರೆ ಹೊಸ ಹೊಸ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು, ಇತ್ಯಾದಿ ಹೆಚ್ಚುವರಿ ಬಳಕೆ ಮಾಡಿಕೊಂಡರೆ ಮಾರುಕಟ್ಟೆಯಲ್ಲಿ ಬೇಡಿಕೆ ಬರಬಹುದು. ಇಂದು ‌ಕೂಡ ಅಡಿಕೆ ಕೃಷಿಯಿಂದ ಉತ್ತಮ ಇಳುವರಿ ಪಡೆದ ರೈತರು ಇದ್ದು ತೋಟದ ನಿರ್ವಹಣೆ ಹೇಗೆ ಮಾಡಲಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಉತ್ತಮ ಆದಾಯ ನೀಡಿದೆ

ಬಹುತೇಕ ರೈತರು ಇಂದು ತೆಂಗಿನ ಬೇಸಾಯದೊಟ್ಟಿಗೆ ಮಿಶ್ರ ಬೆಳೆಯಾಗಿ ಅಡಿಕೆಗೆ ಒತ್ತು ನೀಡಿ ಹೆಚ್ಚಿನ ಸಂಖ್ಯೆಯಲಿ ಈ ಅಡಿಕೆ ಬೆಳೆಯನ್ನು ಬೆಳೆಯುತ್ತಾರೆ. ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ಅಡಿಕೆ ಬೆಳೆಯುವ ಪ್ರಮಾಣ ನಾಲ್ಕು ಪಟ್ಟು ಹೆಚ್ಚಿದೆ.ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಒಮ್ಮೆ ಕಮ್ಮಿಯಾದರು ಮತ್ತೆ ಹೆಚ್ಚಲಿದೆ.‌ ಹೆಚ್ಚಾಗಿ ಕೆಜಿಗೆ 400 ರಿಂದ 700 ರೂಪಾಯಿ ಇರುತ್ತದೆ. ಇವುಗಳಲ್ಲಿ ಒಂದು ಅಡಿಕೆ ಗಿಡವು 50 ಕೆಜಿಯ ವರೆಗೂ ಇಳುವರಿ ನೀಡಿದ್ದು ಉಂಟು.ಹಾಗಾಗಿ ಇದರ ಸರಿಯಾದ ಪೋಷಣೆ ಮಾಡಿದರೆ ಹೆಚ್ಚು ಲಾಭ ಗಳಿಕೆ ಮಾಡಬಹುದಾಗಿದೆ.

Image Source: Mgnrega Success

advertisement

ಒಂದು ಮರದಿಂದ 12 ಕೆಜಿ ಅಡಿಕೆ ಗಳಿಕೆ

ಈ ರೈತನು ‌ತೋಟದಲ್ಲಿರುವ ಕಸ ಕಡ್ಡಿಗಳನ್ನು ‌ಬಳಸಿಕೊಂಡು ತೋಟಕ್ಕೆ ಹಾಕುವ ಮೂಲಕ ತ್ಯಾಜ್ಯ ‌ನಿರ್ವಹಣೆ ಮಾಡ್ತಾ ಇದ್ದಾರೆ. ವರ್ಷಕ್ಕೆ ಮೂರು ಭಾರಿ ಇವರು ಡಾ ಸಾಯಿಲ್ ಅನ್ನು ಬಳಕೆ ಮಾಡುತ್ತಾರೆ. ಹದಿನೈದು‌ ದಿನಕೊಮ್ಮೆ ನೀರುಬೀಡುತ್ತಾರೆ.ಆರರಿಂದ ಎಂಟು ವರ್ಷದ ಅಡಿಕೆ ಮರ ಇದು ಆಗಿದ್ದು 12-15 ಕೆಜಿ ಯಷ್ಟು ಹಸಿ ಅಡಿಕೆ ಸಿಗಲಿದೆ.ಅಡಿಕೆ ತೋಟದಲ್ಲಿ ಇತರ ಉಪ ಬೆಳೆ ಬೆಳೆಗಳನ್ನು ಬೆಳೆಸಬೇಕೆಂಬುದು ರೈತನು‌ ಮಾಹಿತಿ ನೀಡಿದ್ದಾರೆ. ಅವರ ತೋಟದಲ್ಲಿ ಅಡಿಕೆ ಮರಗಳ ಜೊತೆ ಬೆಳೆಯುತ್ತಿರುವ ಬಾಳೆ ಗಿಡಗಳು ಕೂಡ ಹೆಚ್ಚಿನ ಇಳುವರಿ ಫಸಲನ್ನು ನೀಡುತ್ತಿದೆ.

ರೋಗ ನಿವಾರಣೆ ಹೇಗೆ?

ಅಡಿಕೆ ಬೆಳೆ ಬೆಳೆಯುವಾಗ ರಾಸಾಯನಿಕ ಗಳಿಗಿಂತಲೂ ಸಾವಯವ ಕೃಷಿ ಮಾಡಿದರೆ ಹೆಚ್ಚು ಲಾಭ ಬರುತ್ತದೆ. ಇನ್ನು ಅಡಿಕೆಗೆ‌ ಎಲೆ ಚುಕ್ಕಿ ರೋಗ ಬೇಸಿಗೆ ಮತ್ತು ಮಳೆಗಾಲದಲ್ಲಿ‌ ಹೆಚ್ಚಾಗಿ ಕಾಡುತ್ತದೆ. ಇದರಿಂದ ಅಡಿಕೆ ಮರದ ಎಲೆಯಲ್ಲಿ ಹಳದಿ ಬಣ್ಣದಿಂದ ಇರುವ ಕಂದು ಬಣ್ಣದ ಸಣ್ಣ ಚುಕ್ಕೆಗಳು ಬೀಳಲಿದ್ದು ಅದು ಎಲೆ ಚುಕ್ಕೆ ಯಾಗಿರಲಿದೆ. ಇದರಿಂದ ಅಡಿಕೆ ಸಸಿಗಳು ಕುಂಠಿತ ವಾಗಲಿದೆ. ಹಾಗಾಗಿ ರೋಗಬಾಧಿತ ತೋಟಕ್ಕೆ‌ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವ ಮೂಲಕ ರಕ್ಷಣೆ ನೀಡಬಹುದು.

advertisement

Leave A Reply

Your email address will not be published.