Joint Account: ಬ್ಯಾಂಕಿನಲ್ಲಿ ಜಂಟಿ ಖಾತೆ ತೆಗೆಯುವವರಿಗೆ ಹೊಸ ರೂಲ್ಸ್
ನಮ್ಮ ಉಳಿತಾಯ ಬೆಂಬಲಿಸುವ ಅನೇಕ ಕಾರ್ಯ ಚಟುವಟಿಕೆಗಳು ಬ್ಯಾಂಕ್ ನಲ್ಲಿ ಖಾತೆ ತೆರೆದಿರಲೇ ಬೇಕಾಗುತ್ತದೆ. ಅನೇಕ ಜನರು ಬೇರೆ ಬೇರೆ ಕಾರಣಕ್ಕಾಗಿ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದಿರುತ್ತಾರೆ. ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮುನ್ನ ಯಾವ ಬ್ಯಾಂಕ್ ನಲ್ಲಿ ನೀವು ಖಾತೆ ತೆರೆಯುತ್ತಿದ್ದೀರಿ ಎಂಬುದು ಸಹ ಮುಖ್ಯವಾಗಲಿದೆ. ನೀವು ಒಬ್ಬರೇ ಖಾತೆ ತೆರೆಯಬಹುದು ಹಾಗೆ ಜಂಟಿಯಾಗಿ ಕೂಡ ತೆರೆಯುವ ಅನೇಕ ಆಯ್ಕೆ ಇರುವುದನ್ನು ನೀವು ಕಾಣಬಹುದು.
ಬ್ಯಾಂಕ್ ನಲ್ಲಿ ಹೊಸದಾಗಿ ಖಾತೆ ತೆರೆಯುವುದಕ್ಕೆ ಸರಕಾರ ಕೂಡ ಬೆಂಬಲವನ್ನು ನೀಡುತ್ತಲಿದ್ದು ಯಾವ ಖಾತೆ ತೆರೆಯುತ್ತೀರಿ ಎಂಬುದರ ಕುರಿತಾಗಿ ಮೊದಲೇ ಮಾಹಿತಿ ಹೊಂದುವುದು ಬಹಳ ಆವಶ್ಯಕವಾಗಿದೆ. ಇತ್ತೀಚೆಗೆ ಸರಕಾರ ಕೂಡ ಅನೇಕ ಯೋಜನೆಯ ಫಲಾನುಭವಿಗಳಾಗಲು ಬ್ಯಾಂಕ್ ಖಾತೆ ಹೊಂದಿರುವಿಕೆ ಕಡ್ಡಾಯ ಮಾಡುತ್ತಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PM Jan Dhan Yojana) ಮೂಲಕ ಅನೇಕರು ಈಗಾಗಲೆ ಖಾತೆ ಕೂಡ ತೆರೆದಿದ್ದು ಇದೀಗ ಬ್ಯಾಂಕ್ ಖಾತೆಯಲ್ಲಿ ಜಂಟಿ ಖಾತೆ (Joint Account) ತೆರೆಯುವ ಕುರಿತು ಹೊಸ ನಿಯಮ ಜಾರಿಯಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಬಹಳ ಅಗತ್ಯ:
ಇಂದು ಅನೇಕ ಯೋಜನೆಯ ಹಣ ಪಡೆಯಲು ಮತ್ತು ನಾವು ಕೆಲಸ ಮಾಡಿದ್ದ ಸಂಸ್ಥೆಯಿಂದ ಬೋನಸ್ ಅಥವಾ ಇತರ ರೂಪದ ಹಣ ಬ್ಯಾಂಕ್ ನಲ್ಲಿ ಸಂಗ್ರಹ ಮಾಡಿ ಇಡುವಾಗ ಜಾಯ್ಟ್ ಅಕೌಂಟ್ (Joint Account) ಬಹಳ ಉಪಯುಕ್ತ ಆಗಲಿದೆ. ಹೆಚ್ಚಾಗಿ ಗಂಡ ಹೆಂಡತಿ ಹಾಗೂ ಮಕ್ಕಳ ಜೊತೆ ಈ ಜಾಯ್ಟ್ ಖಾತೆ ತೆರೆಯಬಹುದು.
ಜಂಟಿ ಅಕೌಂಟ್ (Joint Account) ನಲ್ಲಿ ಜಂಟಿ ಖಾತೆದಾರರು ಯಾವಾಗ ಬೇಕಾದರೂ ಹಣ ಹಾಕುವ ಮತ್ತು ಹಿಂಪಡೆಯುವ ಅಧಿಕಾರವನ್ನು ಪಡೆಯಲಿದ್ದಾರೆ. ಅನೇಕ ಸರಕಾರಿ ಯೋಜನೆಯ ಫಲಾನುಭವಿಗಳಾಗಲು ಕೂಡ ಈ ಜಂಟಿ ಖಾತೆ ಹೆಚ್ಚಾಗಿ ತೆರೆಯಲಾಗುತ್ತಿದ್ದು ಇದು ಬಹಳ ಅಗತ್ಯ.
ಹೊಸ ನಿಯಮ:
ಬ್ಯಾಂಕಿನ ಆಡಳಿತ ವ್ಯವಸ್ಥೆಯಲ್ಲಿ ಆಗಾಗ ಅನೇಕ ಸಂಗತಿ ಬದಲಾಗುತ್ತಿದ್ದು ಇದೀಗ ಜಂಟಿ ಖಾತೆ ತೆರೆಯುವ ವಿಚಾರವಾಗಿ ಕೂಡ ಕೆಲವು ಹೊಸ ರೂಲ್ಸ್ ಜಾರಿಯಾಗುತ್ತಲಿದೆ. ಜಂಟಿ ಖಾತೆ (Joint Account) ಯನ್ನು ತೆರೆಯುವಾಗ ಹಿಂದೆಲ್ಲ ಹಣ ಹಿಂಪಡೆಯುವುದು ಮತ್ತು ಸಂಗ್ರಹ ಮಾಡಿಡಲು ಇಬ್ಬರ ಸಹಿ ಪರಿಶೀಲನೆ ಮಾಡಲಾಗುತ್ತಿತ್ತು ಆದರೆ ಈಗ ಖಾತೆ ಜಂಟಿ ಆಗಿದ್ದರೂ ಹಣ ಹಿಂಪಡೆಯಲು ಮತ್ತು ಕೂಡಿಡಲು ಏಕ ವ್ಯಕ್ತಿ ಇದ್ದರೂ ಸಾಕಾಗಲಿದೆ. ಇದು ಒಂದು ರೀತಿ ಅನುಕೂಲ ಹಾಗೂ ಅನಾನುಕೂಲವಾಗಿ ಪರಿಣಮಿಸಲಿದೆ.
ಜಂಟಿ ಖಾತೆ ಇದ್ದಾಗ ತುರ್ತು ಅಗತ್ಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಇಲ್ಲದಿದ್ದರೂ ಇನ್ನೊಬ್ಬರು ಹಣ ಹಿಂಪಡೆಯಲು ಸಾಧ್ಯವಿದೆ. ಆದರೆ ಜಂಟಿ ಖಾತೆಯಲ್ಲಿ ಒಬ್ಬೊಬ್ಬರಿಗೂ ಪ್ರತ್ಯೇಕ ಹಣ ಹಿಂಪಡೆಯುವ ಅವಕಾಶ ನೀಡಿದ್ದ ಕಾರಣ ಹಣ ಎಲ್ಲ ಒಟ್ಟಿಗೆ ವಿತ್ ಡ್ರಾ ಮಾಡಿ ಮೋಸ ಮಾಡುವ ಸಾಧ್ಯತೆ ಸಹ ಇದೆ. ಅಷ್ಟು ಮಾತ್ರವಲ್ಲದೆ ಜಂಟಿ ಖಾತೆ ಹೊಂದಿದ್ದವರಲ್ಲಿ ಒಬ್ಬರು ಬ್ಯಾಂಕ್ ಸಾಲ ಪಡೆದರೆ ಆ ಮೊತ್ತ ಕೂಡ ಇಲ್ಲಿಂದ ಡಿಡಕ್ಟ್ ಆಗುವ ಸಾಧ್ಯತೆ ಬಹಳ ಇದೆ ಎಂದು ಹೇಳಬಹುದು.