Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಜೊತೆಗೆ ಫ್ರೆಮ್ ಹಾಕಿಸುವುದು ಕಡ್ಡಾಯವಾ? ಸ್ಪಷ್ಟನೆ ಕೊಟ್ಟ RTO!

advertisement

HSRP Number plates compulsory : ಪ್ರತಿ ವಾಹನಗಳಿಗೂ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಇರಲೆಬೇಕೆಂಬ ಸೂಚನೆಯನ್ನು ಕರ್ನಾಟಕ ಸಾರಿಗೆ ಇಲಾಖೆ ( Karnataka Road Transport) ಪ್ರಕಟಿಸಿದೆ. ಹೀಗಾಗಿ ಹಲವರು ತಮ್ಮ ವಾಹನಗಳಿಗೆ ಅದಾಗಲೇ ಹೈ ಸೆಕ್ಯೂರಿಟಿ ನೊಂದಣಿ ಸಂಖ್ಯೆಯನ್ನು ಸರ್ಕಾರದ ಆದೇಶದಂತೆ ಹಾಕಿಸುತ್ತಿದ್ದಾರೆ.

ಇನ್ನು ಹಲವರು ಅದೆಷ್ಟೇ ಭಾರಿ ಗಡುವಿನ ದಿನಾಂಕವನ್ನು ಮುಂದೂಡಿದರು ಕೂಡ ತಮ್ಮ ನಿರ್ಲಕ್ಷತನದಿಂದಾಗಿ ಅದರ ಕುರಿತು ಗಮನ ಹರಿಸುತ್ತಿಲ್ಲ. ನೀವೇನಾದರೂ ಮೇ 31, 2024ರ ಒಳಗೆ ಈ ನಿಯಮವನ್ನು ಅನುಸರಿಸಲು ವಿಫಲವಾದರೆ ವಾಹನ ಮಾಲೀಕರಿಗೆ 500 ರಿಂದ 1000 ರುಪಾಯಿಯವರೆಗೂ ದಂಡ ವಿಧಿಸಲಾಗುವ ಅಧಿಸೂಚನೆಯನ್ನು ತಿಳಿಸಿದ್ದಾರೆ.

ಆನ್‌ಲೈನ್ ನಲ್ಲಿ HSRP ನಂಬರ್ ಪ್ಲೇಟ್ಗೆ ಅಪ್ಲೈ ಮಾಡುವುದು ಹೇಗೆ?

ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಬುಕಿಂಗ್ ಮಾಡುವ ಅಧಿಕೃತ ಆನ್ಲೈನ್ ವೆಬ್ಸೈಟ್ www.siam.in ಗೆ ಭೇಟಿ ನೀಡಿ, ವಿವಿಧ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ. ಮುಖ್ಯವಾಗಿ HSRP ನಂಬರ್ ಪ್ಲೇಟ್ನ ಮುಂಗಡ ಬುಕ್ಕಿಂಗ್ಗಾಗಿ (pre booking) ನಿಮ್ಮ ವಾಹನದ ಬ್ರಾಂಡ್ ಯಾವುದು? ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು.

ಹೀಗೆ HSRP ನಂಬರ್ ಪ್ಲೇಟ್ಗೆ ಅಪ್ಲೈ ಮಾಡಿದ ನಂತರ ಡೀಲರ್ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಹತ್ತಿರದ HSRP ಫಿಟ್ ಮೆಂಟ್ ಸೆಂಟರ್ ಅಥವಾ ಶೋರೂಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ನೀವೇನಾದರೂ ನಿಮ್ಮ ವಾಹನಕ್ಕೆ HSRP ಫಿಟ್ ಮೆಂಟ್ ಸೆಂಟರ್ನಲ್ಲಿ ನೋಂದಣಿ ಪ್ಲೇಟನ್ನು ಫಿಟ್ ಮಾಡಿಸಿಕೊಂಡರೆ ಯಾವುದೇ ಹೆಚ್ಚುವರಿ ಶುಲ್ಕವನ್ನು ನೀಡುವ ಅಗತ್ಯವಿಲ್ಲ.

ಪ್ರೇಮ್ ಹಾಕಿಸುವುದು ಯಾಕೆ?

advertisement

HSRP ಪ್ಲೇಟ್ನ ಮೇಲೆ ಪ್ರೇಮ್ ಹಾಕಿಸಿಕೊಂಡರೆ ಅದಕ್ಕೆ 150 ರೂಪಾಯಿಗಳ ಶುಲ್ಕವನ್ನು ನೀಡಬೇಕಾಗುತ್ತದೆ. ಒಂದೊಂದು ಶೋ ರೂಮ್ ನಲ್ಲಿ ವಿವಿಧ ರೀತಿಯ ದರವಿದೆ. ಹೀಗೆ ನಿಮಗೇನಾದ್ರೂ HSRP ಪ್ಲೇಟಿನ ಮೇಲೆ ಹಾಕಲಾಗುವ ಕವರ್ ಬೇಡವೆಂದಾದರೆ ಯಾವುದೇ ಹೆಚ್ಚುವರಿ ಹಣವನ್ನು ನೀಡುವ ಅವಶ್ಯಕತೆ ಇಲ್ಲ.

Image Credit: India Today

ನಿಮ್ಮ ವಾಹನದ HSRP ಪ್ಲೇಟ್ಗೆ ಫ್ರೇಮ್ ಹಾಕಿಸಿದರೆ ಹೊಸ ಲುಕ್ ಬರುತ್ತದೆ, ಜೊತೆಗೆ ಅಪ್ಪಿ ತಪ್ಪಿ ನಿಮ್ಮ ವಾಹನದ HSRP ಏನಾದರೂ ಡ್ಯಾಮೇಜ್ ಆದಾಗ ಸ್ವಲ್ಪ ಮಟ್ಟಿನ ರಕ್ಷಣೆ ನೀಡುತ್ತೆ ಹಾಗೆಯೇ ಒಂದು ವೇಳೆ ಕಾರಿನಲ್ಲಿ ಒಳ್ಳೆಯ ಸೌಂಡ್ ಸಿಸ್ಟಮ್ iddare ನಿಮ್ಮ ನಂಬರ್ ಪ್ಲೇಟ್ vibrate ಆಗದಂತೆ ತಡೆಯಲು ಪ್ರೇಮ್ ಗಳು ಸಹಕಾರಿ. ಇನ್ನು HSRP. ನಂಬರ್ ಪ್ಲೇಟ್ ಜೊತೆ ಪ್ರೇಮ್ ಕಡ್ಡಾಯವಾಗಿ ಹಾಕಲೇಬೇಕಂತಿಲ್ಲ, ಇದು ನಿಮ್ಮ ಆಯ್ಕೆಗೆ ಬಿಟ್ಟಿದ್ದು

ದ್ವಿಚಕ್ರ ವಾಹನಕ್ಕೆ HSRP ಹಾಕಿಸಲು ₹580 ಖರ್ಚು

ದ್ವಿಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಪಡೆಯಲು ಆನ್ಲೈನಲ್ಲಿ ರೆಜಿಸ್ಟರ್ ಮಾಡುವಾಗ 430ರೂ ಹಣವನ್ನು ಕಟ್ಟಬೇಕಾಗುತ್ತದೆ. ಅದರ ಜೊತೆಗೆ ನಿಮ್ಮ ನಂಬರ್ ಪ್ಲೇಟ್ ಅನ್ನು ಸುರಕ್ಷಿತವಾಗಿರಿಸಲು ಅದರ ಸುತ್ತಲೂ ಫ್ರೇಮ್(covering frame) ಹಾಕಿಸಿಕೊಂಡರೆ ಅದಕ್ಕೆ 150 ರೂಪಾಯಿ. ಒಟ್ಟಾರೆಯಾಗಿ ನಿಮ್ಮ ದ್ವಿಚಕ್ರ ವಾಹನಕ್ಕೆ HSRP ನಂಬರ್ ಪ್ಲೇಟ್ ಹಾಕಿಸಲು 580 ಖರ್ಚಾಗುತ್ತದೆ. ವಾಹನದಿಂದ ವಾಹನಕ್ಕೆ ಈ ಶುಲ್ಕ ವ್ಯತ್ಯಯಗೊಳ್ಳುವುದು.

Image Credit: India Today

ಹೊಂ ಡೆಲಿವರಿಯಲ್ಲೂ ಲಭ್ಯವಿದೆ HSRP

Https://bookmyhsrp.com ನಲ್ಲಿ ನೋಂದಣಿ ಮಾಡುವಾಗ HSRP ನಂಬರ್ ಪ್ಲೇಟ್ ಅನ್ನು ನೀವೇನಾದರೂ ಹೋಂ ಡೆಲಿವರಿ ಮಾಡಿಕೊಂಡರೆ, ಅದರ ಪ್ರೇಮ್ ಅನ್ನು ಆನ್ಲೈನ್ ನಲ್ಲೆ ಆರ್ಡರ್ ಮಾಡಬಹುದು. ಆಗ ನಿಮಗೆ 25 ರೂಪಾಯಿ ಶುಲ್ಕ ಕಡಿಮೆಯಾಗುತ್ತದೆ. ಆದರೆ HSRP ನಂಬರ್ ಪ್ಲೇಟ್ನ ಡೆಲಿವರಿ ಚಾರ್ಜ್ ಕಡ್ಡಾಯವಾಗಿ ನೀಡಲೇಬೇಕಾಗುತ್ತದೆ. ಹೀಗೆ ಮನೆಗೆ ಬಂದಂತಹ HSRP ನಂಬರ್ ಪ್ಲೇಟ್ ಅನ್ನು ನಿಮ್ಮ ಹತ್ತಿರದ ಫಿಟ್ ಮೆಂಟ್ ಸೆಂಟರ್(fitment centre) ಅಥವಾ ಶೋರೂಮ್ (showroom)ನಲ್ಲಿ ವಾಹನಕ್ಕೆ ಅಳವಡಿಸಿಕೊಳ್ಳಬಹುದು.

advertisement

Leave A Reply

Your email address will not be published.