Karnataka Times
Trending Stories, Viral News, Gossips & Everything in Kannada

Post Office: 3 ತಿಂಗಳಿಗೊಮ್ಮೆ 12300 ರೂ ಬಡ್ಡಿ ನೇರ ಅಕೌಂಟ್ ಗೆ ! ಪೋಸ್ಟ್ ಆಫೀಸಿನ ಈ ಯೋಜನೆಗೆ ಹೆಚ್ಚಾದ ಡಿಮ್ಯಾಂಡ್

advertisement

ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್

Post Office Saving Scheme: ಸರ್ಕಾರದಿಂದ ಪರಿಚಯಿಸಲಾಗಿರುವಂತಹ ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಹಣವನ್ನು ನೀಡುವಂತಹ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆ ಅಡಿಯಲ್ಲಿ 8.2 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳಬಹುದು. ವರ್ಷದ ಕಾಲು ಭಾಗಕ್ಕೆ ಅಂದರೆ ಮೂರು ತಿಂಗಳಿಗೆ ರೂ.205ಗಳನ್ನು ನೀವು ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದು. ಆ ಲೆಕ್ಕಾಚಾರದಲ್ಲಿ 10 ಸಾವಿರ ರೂಪಾಯಿಗಳ ಹೂಡಿಕೆ ಮೇಲೆ ನೀವು 820 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಈಗಾಗಲೇ ಕೆಲಸದಿಂದ ನಿವೃತ್ತರಾಗಿರುವಂತಹ ಹಿರಿಯ ನಾಗರಿಕರು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವಂತಹ 50 ರಿಂದ 60 ವರ್ಷದ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಹ ಅರ್ಹತೆಯನ್ನು ಹೊಂದಿದ್ದಾರೆ. ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ ಮ್ಯಾಕ್ಸಿಮಮ್ 30 ಲಕ್ಷ ರೂಪಾಯಿಗಳವರೆಗು ಕೂಡ ಒಂದೇ ಠೇವಣಿಯಲ್ಲಿ ಯೋಜನೆಯಲಿ ಹಣವನ್ನು ಹೂಡಿಕೆ ಮಾಡುವಂತಹ ಅವಕಾಶವನ್ನು ಹೊಂದಿದ್ದಾರೆ. ಯೋಜನೆಯಲ್ಲಿ ಹೂಡಿಕೆ ಮಾಡಿದರೆ 6 ಲಕ್ಷ ರೂಪಾಯಿಗಳ ಹೂಡಿಕೆಗೆ 12300 ರೂಪಾಯಿಗಳ ರಿಟರ್ನ್ ಸಿಗಲಿದೆ.

Image Source: Business League

ಹಣ ಯಾವ ರೀತಿಯಲ್ಲಿ ಬೆಳವಣಿಗೆ ಕಾಣಲಿದೆ ಎನ್ನುವುದರ ಉದಾಹರಣೆ

* ಹತ್ತು ಸಾವಿರ ರೂಪಾಯಿಗಳ ಹೂಡಿಕೆ ಮೇಲೆ ತ್ರೈಮಾಸಿಕ ಬಡ್ಡಿ, 205 ಆಗಿರುತ್ತದೆ. ವಾರ್ಷಿಕ ಬಡ್ಡಿ 820 ರೂಪಾಯಿ ಆಗಿರುತ್ತದೆ.

– 50,000ಗಳ ಹೂಡಿಕೆ ಮೇಲೆ ತ್ರೈಮಾಸಿಕ ಬಡ್ಡಿ ರೂ.1025 ಆಗಿರುತ್ತದೆ. ಸಿಗುವಂತಹ ವಾರ್ಷಿಕ ಬಡ್ಡಿ 4100 ರೂಪಾಯಿ.

* 1 ಲಕ್ಷ ರೂಪಾಯಿಗಳ ಠೇವಣಿಯ ಮೇಲೆ ಸಿಗುವಂತಹ ತ್ರೈಮಾಸಿಕ ಬಡ್ಡಿದರ 2050 ರೂಪಾಯಿ ಆಗಿದ್ದು ವಾರ್ಷಿಕ ಬಡ್ಡಿ ದರ 8200 ಆಗಿದೆ.

* 6 ಲಕ್ಷ ರೂಪಾಯಿಗಳ ಠೇವಣಿ ಮೇಲೆ ಸಿಗುವಂತಹ ತ್ರೈಮಾಸಿಕ ಬಡ್ಡಿ ದರ 12300 ಹಾಗೂ ವಾರ್ಷಿಕ ಬಡ್ಡಿದರ 49200 ರೂಪಾಯಿ ಆಗಿರುತ್ತದೆ.

* 10 ಲಕ್ಷ ರೂಪಾಯಿಗಳ ಠೇವಣಿ ಮೇಲೆ ಸಿಗುವಂತಹ ತ್ರೈಮಾಸಿಕ ಬಡ್ಡಿದರ 20,500 ಆಗಿರುತ್ತದೆ ಹಾಗೂ ವಾರ್ಷಿಕ ಬಡ್ಡಿದರ 82,000 ರೂಪಾಯಿ.

* 30 ಲಕ್ಷ ರೂಪಾಯಿಗಳ ಠೇವಣಿಯ ಮೇಲೆ 61,500 ತ್ರೈಮಾಸಿಕ ಬಡ್ಡಿ ಸಿಗುತ್ತದೆ ಹಾಗೂ ವಾರ್ಷಿಕ ಬಡ್ಡಿದರ 2.46 ಲಕ್ಷ ರೂಪಾಯಿ ಆಗಿರುತ್ತದೆ.

advertisement

ಈ ಮೂಲಕ ನೀವು ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಎರಡು ಕೂಡ ಅತ್ಯಂತ ಹೆಚ್ಚು ರಿಟರ್ನ್ ನೀಡುವಂತಹ ಯೋಜನೆಗಳು ಎನ್ನುವುದನ್ನು ತಿಳಿದುಕೊಳ್ಳಬೇಕಾಗಿರುತ್ತದೆ.

 

ಪೋಸ್ಟ್ ಆಫೀಸ್ನ ಸ್ಮಾಲ್ ಸೇವಿಂಗ್ ಸ್ಕೀಮ್ ಗಳ ಬಡ್ಡಿದರಗಳ ಪಟ್ಟಿ

* ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್ ನಾಲ್ಕು ಪ್ರತಿಶತ ಬಡ್ಡಿ ದರವನ್ನು ಒದಗಿಸುತ್ತದೆ.

* ಒಂದು ವರ್ಷದ ಟೈಮ್ ಡೆಪಾಸಿಟ್ ನಲ್ಲಿ 6.9 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ.

* ಎರಡು ವರ್ಷದ ಟೈಮ್ ಡೆಪಾಸಿಟ್ ನಲ್ಲಿ 7%, ಮೂರು ವರ್ಷದ ಟೈಮ್ ಡೆಪಾಸಿಟ್ ನಲ್ಲಿ 7.1%, 5 ವರ್ಷದ ಟೈಮ್ ಡೆಪಾಸಿಟ್ ನಲ್ಲಿ 7.5% ಬಡ್ಡಿ ದರವನ್ನು ನೀವು ಪಡೆದುಕೊಳ್ಳುತ್ತೀರಿ.

* 5 ವರ್ಷಗಳ ರಿಕರಿಂಗ್ ಡೆಪಾಸಿಟ್ ಯೋಜನೆಯಲ್ಲಿ 6.7% ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ.

* ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ 8.2 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ.

* ತಿಂಗಳ ಆದಾಯ ಖಾತೆಯಲ್ಲಿ 7.4% ಬಡ್ಡಿಯನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳುತ್ತೀರಿ.

* ರಾಷ್ಟ್ರೀಯ ಸೇವಿಂಗ್ ಸರ್ಟಿಫಿಕೇಟ್ ಯೋಜನೆಯಲ್ಲಿ 7.7% ಬಡ್ಡಿದರವನ್ನು ಪಡೆದುಕೊಳ್ಳುತ್ತೀರಿ.

* ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಕೂಡ 7.1% ಬಡ್ಡಿ ದರವನ್ನು ನೀವು ಪಡೆದುಕೊಳ್ಳುತ್ತೀರಿ.

* ಕಿಸಾನ್ ವಿಕಾಸ್ ಪತ್ರದಲ್ಲಿ ಹಾಗೂ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆಯಲ್ಲಿ ತಲಾ 7.5% ಬಡ್ಡಿದರವನ್ನು ಪಡೆದುಕೊಳ್ಳುತ್ತೀರಿ. ಇವುಗಳು ಎರಡು ಕೂಡ ಬೇರೆ ಬೇರೆ ಯೋಜನೆಗಳಾಗಿವೆ.

* ಕೊನೆಯದಾಗಿ ಪೋಸ್ಟ್ ಆಫೀಸ್ನ ಅತ್ಯಂತ ಹೆಚ್ಚು ಬಡ್ಡಿಯನ್ನು ನೀಡುವಂತಹ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಯಾಗಿದ್ದು ಇದು ನಿಮಗೆ ವಾರ್ಷಿಕವಾಗಿ 8.2 ಪ್ರತಿಶತ ಬಡ್ಡಿದರವನ್ನು ನೀಡುತ್ತದೆ.

advertisement

Leave A Reply

Your email address will not be published.