Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಸೂಚನೆ! ಇದುವರೆಗೂ ಬುಕ್ ಮಾಡದವರು ತಪ್ಪದೇ ಗಮನಿಸಿ

advertisement

ಇಂದು ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದ್ದು ವಾಹನಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಯು ಕೆಲವೊಂದು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಈಗಾಗಲೇ ಟ್ರಾಫಿಕ್ ನಿಯಮಗಳನ್ನು ಮತ್ತಷ್ಟು ತೀವ್ರ ಗೊಳಿಸಿದ್ದು ವಾಹನ ಸಾವರರಿಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದೆ. ಅದೇ ರೀತಿ ಇಂದು ದೇಶಾದ್ಯಂತ ವಾಹನ ನೋಂದಣಿ ಸಂಖ್ಯೆ ಫಲಕ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಎನ್ನುವ ನಿಯಮವನ್ನು ಕೂಡ ಜಾರಿಗೆ ಮಾಡಲಾಗಿದೆ.

ಇನ್ನು ನೋಂದಣಿ ಮಾಡಿಲ್ಲ:

 

Image Source: GoMechanic

 

ಈ ಬಗ್ಗೆ ನೋಂದಣಿ ಮಾಡುವ ಕುರಿತಂತೆ ಹಲವು ಭಾರಿ ಎಚ್ಚರಿಕೆ ‌ನೀಡಿದ್ರು ಹೆಚ್ಚಿನ ವಾಹನ ಮಾಲೀಕರು ಈ ಬಗ್ಗೆ ಮನದಟ್ಟು ಮಾಡಿಕೊಂಡಿಲ್ಲ. ಈ ಹಿಂದೆ 2023ರ ನ.17ರೊಳಗೆ ಎಚ್‌ಎಸ್‌ಆರ್‌ಪಿ (HSRP) ಅಳವಡಿಕೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಬಳಿಕ‌ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು ಬಳಿಕ ಮತ್ತೆ ಸಮಯಾವಕಾಶ ನೀಡಲಾಗಿದೆ. ಅದೇ ರೀತಿ ಈಗ ಕೊನೆಯದಾಗಿ ಮೇ 31ರ ಒಳಗೆ ವಾಹನಕ್ಕೆ HSRP ನಂಬರ್ ಪ್ಲೇಟ್ (HSRP Number Plate) ಅಳವಡಿಕೆ ‌ಮಾಡಲು ಅವಕಾಶ ನೀಡಿದೆ.

ಕಡ್ಡಾಯ ನಿಯಮ:

 

advertisement

Image Source: Spinny

 

ಈಗಾಗಲೇ ಸುಮಾರು 52 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ (HSRP) ನೊಂದಣಿ ಅಳವಡಿಕೆ ಮಾಡಿಕೊಂಡಿದ್ದು ಇನ್ನು ಶೇ. 75ರಷ್ಟು ಅಂದರೆ 1.48 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿ ಕೊಳ್ಳಬೇಕಿದೆ. 2019ರ ಏ.1ರ ಮೊದಲು ವಾಹನ ಖರೀದಿ ಮಾಡಿದ್ದವರು ಈ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು.‌ ವಾಹನದ ಭದ್ರತೆ ಹಾಗೂ ಸುರಕ್ಷತೆ ಮೋಟಾರು ಕಾಯಿದೆ 1989 ಸೆಕ್ಷನ್ 90 ಹಾಗೂ 51 ರನ್ವಯ ಈ ನಿಯಮ ಕಡ್ಡಾಯ ಎಂಬುದನ್ನು ಜಾರಿ ಮಾಡಲಾಗಿದೆ.

ಎಚ್ಎಸ್‌ಆರ್‌ಪಿ ಬಳಕೆಯಿಂದ ವಾಹನವನ್ನು ಕಳವು ಮಾಡಿದರೆ ಅಥವಾ ವಾಹನಕ್ಕೆ ನಕಲಿ ಎಚ್ ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಹಾಕಿದರೆ ಪತ್ತೆ ಹಚ್ಚುವುದು ಸುಲಭ ಹಾಗಾಗಿ ಈ ನಿಯಮ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಹೊಸ ವಾಹನ ಖರೀದಿ ಮಾಡಿದ್ದರೆ ಶೋ ರೂಂ ನವರೆ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಕೂಡ ಜಾರಿಗೆ ಬಂದಿದೆ.

ದಂಡ ಪ್ರಯೋಗ:

ಈಗಾಗಲೇ ವಾಹನ‌ ನೋಂದಣಿ ಮಾಡಲು ರಾಜ್ಯ ಸಾರಿಗೆ ಇಲಾಖೆ ಹಲವು ಭಾರಿ ಅವಕಾಶ ನೀಡಿದ್ದು ಇದೀಗ ಮೇ 31ರವರೆಗೆ ಎಚ್‌ಎಸ್‌ಆರ್‌ಪಿ ಪಡೆಯಲು ಮತ್ತು‌ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಇಷ್ಟು ಭಾರಿ ಅವಕಾಶ ನೀಡಿದ್ರೂ ಇನ್ನು ಕೂಡ ವಾಹನ‌ ನೊಂದಣಿ ಮಾಡಲು ವಾಹನ‌ ಸವಾರರು ನಿರಾಸಕ್ತಿ ಹೂಡಿದ್ದು ಜೂ.1ರಿಂದ‌ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಈಗಾಗಲೇ ನಿರ್ಧರಿಸಲಾಗಿದೆ. ಹಾಗಾಗಿ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ನಿಯಮದಂತೆ 500 ರಿಂದ 1 ಸಾವಿರ ರು. ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ‌ಮಾಹಿತಿ ನೀಡಿದ್ದಾರೆ.

advertisement

Leave A Reply

Your email address will not be published.