Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಬುಕ್ ಮಾಡುವವರಿಗೆ ಪೊಲೀಸರಿಂದ ಧೀಡಿರ್ ಹೊಸ ಹೇಳಿಕೆ!

advertisement

ಸ್ನೇಹಿತರೆ, ರಾಜ್ಯದಾದ್ಯಂತ ದಿನೇ ದಿನೇ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ದ್ವಿಚಕ್ರ ವಾಹನಗಳ ಸಂಖ್ಯೆಯಂತೂ ಗಗನ ಮುಟ್ಟಿದೆ. ಹಿಂದೆಲ್ಲ ಮನೆಗೆ ಒಂದು ವಾಹನ ಇರುತ್ತಿದದ್ದೆ ಹೆಚ್ಚು, ಆದರೆ ಈಗ ಮನೆಯಲ್ಲಿರುವಂತಹ ಪ್ರತಿಯೊಬ್ಬರಿಗೂ ಒಂದೊಂದು ದ್ವಿಚಕ್ರ ವಾಹನ ಬೇಕೆಬೇಕು ಎಂಬ ಕಾಲ ಬಂದುಬಿಟ್ಟಿದೆ. ಹೀಗೆ ವಿಪರೀತ ಏರಿಕೆಯಾಗಿರುವ ವಾಹನಗಳ ಸಂಖ್ಯೆಯಿಂದ ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಎಲ್ಲಾ ವಾಹನಗಳಿಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಅನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಸರ್ಕಾರವೂ ಗಡುವಿನ ದಿನಾಂಕವನ್ನು ವಿಸ್ತರಿಸುವುದಾಗಿ ಸೂಚನೆ ಹೊರಡಿಸಿದೆ. ಇದು ವಾಹನ ಸವಾರರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದ್ದು, ಎಷ್ಟು ದಿನಗಳವರೆಗೂ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವಂತಹ ದಿನಾಂಕವನ್ನು ಮುಂದೂಡಿದ್ದಾರೆ? ತಮ್ಮ ವಾಹನಕ್ಕೆ ನೊಂದಣಿ ಸಂಖ್ಯೆಯನ್ನು ಪಡೆಯಲು ಅನುಸರಿಸಬೇಕಾದ ನಿಯಮಗಳೇನು? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಂತರ ತಿಳಿದುಕೊಳ್ಳಿ.

ಈ HSRP ನಂಬರ್ ಪ್ಲೇಟ್ (HSRP Number Plate) ಎಂದರೇನು?

 

Image Source: Paytm

 

HSRP (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಗಳು ವಾಹನದ ಶಾಶ್ವತ ರಿಜಿಸ್ಟ್ರೇಷನ್ ಸಂಖ್ಯೆಯಾಗಿದ್ದು, ಕ್ರೋಮಿಯಂ ಆಧಾರಿತ ಅಲ್ಯುಮಿನಿಯಂ ನಿರ್ಮಿತ ಹೊಲೊಗ್ರಾಮ್ನಂತಹ ವೈಶಿಷ್ಟ್ಯ ಲಕ್ಷಣಗಳನ್ನು ಈ ನಂಬರ್ ಪ್ಲೇಟ್ ಹೊಂದಿರುತ್ತದೆ. ಇನ್ನು ಮುಖ್ಯವಾಗಿ ಹಳೆಯ ನಂಬರ್ ಪ್ಲೇಟ್ಗಳಂತೆ ಇದನ್ನು ಎಂದಿಗೂ ಬದಲಿಸಲು ಅಥವಾ ನಕಲಿ ಮಾಡಲು ಸಾಧ್ಯವಾಗುವುದಿಲ್ಲ. ಅತಿ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳ ಮೇಲೆ ಗಮನ ಹರಿಸಿ ಈ ನಂಬರ್ ಪ್ಲೇಟ್ (Number Plate) ಗಳನ್ನು ತಯಾರಿಕೆ ಮಾಡಲಾಗಿದ್ದು, ವಾಹನ ಸವಾರರು ಇದನ್ನು ತೆಗೆದು ಮತ್ತೆ ಮರುಬಳಿಕೆ ಮಾಡಲಾಗದಂತಹ ರೀತಿ ಸ್ನಾಪ್ ಲಾಕ್ಗಳನ್ನು ಬಳಸಿ ವಾಹನದ ಮೇಲೆ ಹಾಕಲಾಗಿರುತ್ತದೆ.

ಹಳೆಯ ನಂಬರ್ ಪ್ಲೇಟ್ ಹಾಗೂ HSRPಗೂ ವ್ಯತ್ಯಾಸವೇನು?

 

Image Source: Spinny

 

advertisement

ಮುಖ್ಯವಾಗಿ ಅಪಘಾತ, ಸರಗಳ್ಳತನ ಹಾಗೂ ಕಳ್ಳತನದಂತ ಪ್ರಕರಣಗಳಲ್ಲಿ ಆರೋಪಿಯು ತನ್ನ ಕಾರ್ಯವನ್ನು ಸಿದ್ದಿಸಿಕೊಂಡ ಬಳಿಕ ಅಥವಾ ವ್ಯಕ್ತಿಯು ಅಚನಕ್ಕಾಗಿ ಅಪರಾಧವನ್ನು ವ್ಯಸಗಿದ ಬಳಿಕ ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಾನೂ ಬಳಸಿದ್ದಂತಹ ವಾಹನದ ನಂಬರ್ ಪ್ಲೇಟ್ ಅನ್ನು ಬದಲಾವಣೆ ಮಾಡುವುದು ಅಥವಾ ಅದರ ಮೇಲಿರುವಂತಹ ನಂಬರ್ ಸ್ಟಿಕರ್ರನ್ನು (Number Sticker) ತೆಗೆದು ಹಾಕಿ ಬೇರೆಯದನ್ನು ಅಂಟಿಸಿಕೊಳ್ಳುವಂತಹ ಕೆಲಸಗಳನ್ನು ಮಾಡಲಾಗುತ್ತಿತ್ತು. ಇದರ ಕುರಿತು ಹೆಚ್ಚಿನ ಗಮನ ವಹಿಸಿದಂತಹ ಪೊಲೀಸ್ ಇಲಾಖೆ ಮತ್ತು ಸರ್ಕಾರವು ಎಂದಿಗೂ ಬದಲಾವಣೆ ಮಾಡಲು ಸಾಧ್ಯವಾಗದ ಹೈ ಸೆಕ್ಯೂರಿಟಿ ನೊಂದಣಿ ಸಂಖ್ಯೆಯನ್ನು (High Security Registration Number) ವಾಹನಗಳಿಗೆ ಅಳವಡಿಕೆ ಮಾಡುವುದನ್ನು ಕಡ್ಡಾಯಗೊಳಿಸಿದೆ.

HSRP ಅಳವಡಿಸಲು ಸರ್ಕಾರ ನೀಡಿರುವ ಗಡುವು?

ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ತಮ್ಮ ಗಾಡಿಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸುವಂತೆ ಸೂಚನೆ ನೀಡಿ ನವೆಂಬರ್ 17, 2024ರವರೆಗೂ ಗಡುವು ನೀಡಿತ್ತು. ಆದರೆ, ವಾಹನ ಮಾಲಿಕರಲ್ಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳ (HSRP Number Plate) ಕುರಿತಾದ ಜಾಗೃತಿಯ ಕೊರತೆ ಹಾಗೂ ಬೇಜವಾಬ್ದಾರಿತನದಿಂದಾಗಿ ಪದೇ ಪದೇ ಗಡುವಿನ ದಿನಾಂಕವನ್ನು ವಿಸ್ತರಿಸುತ್ತಲೇ ಇದೆ. ಅದರಂತೆ ಏಪ್ರಿಲ್ 1, 2024 ರಂದು ನಿಗದಿಪಡಿಸಲಾಗಿದಂತಹ ಕೊನೆಯ ದಿನಾಂಕವನ್ನು ಮೇ 31, 2024ಕ್ಕೆ ವಿಸ್ತರಿಸಲಾಗಿದ್ದು, ಈ ಅವಧಿಯಲ್ಲಿ ವಾಹನ ಮಾಲೀಕರೆಲ್ಲರೂ ಕಡ್ಡಾಯವಾಗಿ ತಮ್ಮ ತಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡುವುದನ್ನು ಕಡ್ಡಾಯಗೊಳಿಸಿದ್ದಾರೆ.

Image Source: Drive Spark

ವಂಚಕರಿಂದ ಮೋಸ ಹೋಗದಿರಲು ಅನುಸರಿಸಬೇಕಾದ ನಿಯಮವೇನು?

ಇನ್ನು ಮುಖ್ಯವಾಗಿ ಕರ್ನಾಟಕ ಪೊಲೀಸ್ ಅಧಿಕಾರಿಗಳು, “ ನಿಮ್ಮ ವಾಹನದ #HSRPಯನ್ನು ಅಧಿಕೃತ ವೆಬ್ಸೈಟ್ ಆದಂತಹ https://transport.karnataka.government.in & https://siam.in ನಿಂದ ಪಡೆದುಕೊಳ್ಳಿ. ನಕಲಿ ಲಿಂಕ್ಗಳು ಅಥವಾ ಕ್ಯೂಆರ್ ಕೋಡ್ (Fake Link or QR Code) ಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಹಣವನ್ನು ಕಳೆದುಕೊಳ್ಳಬೇಡಿ, ಎಚ್ಚರ!” ಎಂದು ಆನ್ಲೈನಲ್ಲಿ ಮುಂಗಡ ಬುಕ್ಕಿಂಗ್ ಮಾಡಿ ತಮ್ಮ ಎಚ್ಎಸ್ಆರ್ಪಿ ನಂಬರ್ ಅನ್ನು ಪಡೆಯುವ ವಾಹನ ಮಾಲೀಕರಿಗೆ ಪೊಲೀಸರು ಟ್ವೀಟ್ ಮಾಡುವ ಮೂಲಕ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರು ನಂತಹ ನಗರಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಕ್ಯೂನಲ್ಲಿ ನಿಂತು ತಮ್ಮ ನಂಬರ್ ಪ್ಲೇಟ್ ಗಳನ್ನು ಪಡೆದುಕೊಳ್ಳಲು ಹರಸಾಹಸವನ್ನು ಮಾಡಬೇಕಾಗುತ್ತದೆ. ಹೀಗಾಗಿ ವಾಹನ ಮಾಲೀಕರು ಆನ್ಲೈನ್ ಗಳ ಮೂಲಕ ತಮ್ಮ ನೊಂದಣಿ ಮತ್ತು ನೇಮಕಾತಿ ಸಂಖ್ಯೆಯನ್ನು ಪಡೆಯಲು ಮುಂದಾಗುತ್ತಿದ್ದು, ಇದರ ಕುರಿತು ಮಾಹಿತಿ ತಿಳಿದಿರುವಂತಹ ಕೆಲ ವಂಚಕರು (Scammers) ನಕಲಿ ಲಿಂಕ್ ಹಾಗೂ ಕ್ಯೂಆರ್ ಕೋಡ್ಗಳನ್ನು ಹಾಕಿ ಜನರಿಂದ ಹಣ ವಸೂಲಿ ಮಾಡುವಂತಹ ಕೆಲಸವನ್ನು ಶುರು ಮಾಡಿದ್ದಾರೆ. ಹೀಗಾಗಿ ಆನ್ಲೈನ್ ಮೂಲಕ ತಮ್ಮ ಎಚ್ಎಸ್ಆರ್ಪಿ ನೊಂದಣಿ ಸಂಖ್ಯೆಯನ್ನು ಬುಕ್ಕಿಂಗ್ ಮಾಡುವಂತಹ ವಾಹನ ಸವಾರರಿಗೆ ನಕಲಿ ಲಿಂಕ್ ಗಳ ಕುರಿತು ಪೊಲೀಸರು ಸಾಮಾಜಿಕ ಮಾಧ್ಯಮದ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.

advertisement

Leave A Reply

Your email address will not be published.