Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಇಲ್ಲದಿದ್ದರೂ ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ

advertisement

ವಾಹನದಲ್ಲಿ ಎಷ್ಟು ಸುರಕ್ಷತಾ ಕ್ರಮ ಅನುಸರಿಸಿದರೂ ಅದು ಕಡಿಮೆ ಎಂದು ಹೇಳಬಹುದು. ವಾಹನಗಳಿಗೆ HSRP ನಂಬರ್ ಪ್ಲೇಟ್ (HSRP Number Plate)ಅಳವಡಿಕೆ ಮಾಡುವುದನ್ನು ಕಡ್ಡಾಯ ಗೊಳಿಸಲಾಗುತ್ತಿದ್ದು, ಯಾರೆಲ್ಲ ನಂಬರ್ ಪ್ಲೇಟ್ ಇನ್ನೂ ಕೂಡ ಅಳವಡಿಕೆ ಮಾಡಿಲ್ಲ ಅವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗುವ ಸಾಧ್ಯತೆ ಅಧಿಕವಾಗಿ ಇರಲಿದೆ‌. ಹಳೆ ವಾಹನಕ್ಕೆ ಈ ನಿಯಮ ಕಡ್ಡಾಯ ಮಾಡಲಾಗುತ್ತಿದ್ದು ಈಗಾಗಲೇ ಅಪ್ಲೀಕೇಶನ್ ಹಾಕಿದ್ದ ವಾಹನ ಸವಾರರು ನಂಬರ್ ಪ್ಲೇಟ್ ಇನ್ನೂ ಕೂಡ ಬಂದಿಲ್ಲ ಎಂದು ಕಾದವರಿಗೆ ಈ ಮಾಹಿತಿ ತುಂಬಾನೆ ಉಪಯುಕ್ತ ಆಗಲಿದೆ.

ಸರಳ ಮಾರ್ಗ

2019ಕ್ಕಿಂತ ಮೊದಲು ಕರ್ನಾಟಕದಲ್ಲಿ ನೋಂದಾಯಿಸಲ್ಪಟ್ಟ ದ್ವಿಚಕ್ರ, ನಾಲ್ಕು ಚಕ್ರದ ಕಾರು, ಇತರ ವಾಣಿಜ್ಯ ವಾಹನ ಎಲ್ಲ  ವಾಹನಗಳಿಗೆ HSRP ನಂಬರ್ ಪ್ಲೇಟ್ (HSRP Number Plate) ಅನ್ನು ಕಡ್ಡಾಯ ಗೊಳಿಸಲಾಗಿದ್ದು  ಫೆಬ್ರವರಿ17ರೊಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸೂಚಿಸಲಾಗಿತ್ತು ಆದರೆ ಈಗಾಗಲೇ ಸಮಯ ಮುಗಿದಿದ್ದರೂ HSRP ಅಳವಡಿಕೆ ಮಾಡದ ಅನೇಕರನ್ನು ನಾವು ಕಾಣಬಹುದು ಈ ನಿಟ್ಟಿನಲ್ಲಿ ನೀವು ಏನು ಮಾಡಿದರೆ ಉತ್ತಮ ಎಂಬುದಕ್ಕೆ ನಾವೊಂದು ಸರಳ ಮಾರ್ಗ ತಿಳಿಸಲಿದ್ದೇವೆ.

Image Source: YouTube

ಕಾರಣಾಂತರಗಳಿಂದ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲಿಲ್ಲ. HSRP ನಂಬರ್ ಪ್ಲೇಟ್ ಅಳವಡಿಸಲು ಇರುವ ಕಾಲಮಿತಿಯನ್ನು ವಿಸ್ತರಿಸಿದ್ದರೂ ನಮ್ಮ ನಂಬರ್ ಪ್ಲೇಟ್ ಇನ್ನು ಬಂದಿಲ್ಲ ಎನ್ನುವವರು ನೀವು HSRP ಗೆ ಅಪ್ಲಿಕೇಶನ್ ಹಾಕಿದ್ದ ಬಳಿಕ ಅದರ ಒಂದು ದಾಖಲಾತಿಯನ್ನು ಕೊಂಡೊಯ್ದರೆ ನಿಮಗೆ ಪೊಲೀಸ್ ಫೈನ್ ಬೀಳಲಾರದು. ಡೀಲರ್ಸ್ ಆಪ್ಶನ್ ಹಾಗೂ ಹೋಂ ಡೆಲಿವರಿ ಎಂಬ ಎರಡು ಆಯ್ಕೆ ಇರಲಿದೆ. ಡೀಲರ್ಸ್ ಎಂದು ಆಯ್ಕೆ ಮಾಡಿದರೆ ನಿಮ್ಮ ಮನೆ ಹತ್ತಿರಕ್ಕೆ ಪಿಕ್ಮೆಂಟ್ ಸೆಂಟರ್ ಮೂಲಕ ನೋಂದಾಯಿಸಿ ಆ ಮೂಲಕ ನಂಬರ್ ಪ್ಲೇಟ್ ಬರಲಿದೆ. ಹೋಂ ಡೆಲಿವರಿ ಆದರೆ ಸ್ವಲ್ಪ ಅಧಿಕ ಹಣ ಕಟ್ಟಬೇಕಾಗುತ್ತದೆ. ಅದರಲ್ಲಿ ಮನೆಗೆ ಬಂದು ನಂಬರ್ ಪ್ಲೇಟ್ ಅಳವಡಿಸಲಾಗುವುದು.

advertisement

HSRP Number Plate Fine:

ನೀವು ಇನ್ನೂ ಕೂಡ ನಂಬರ್ ಪ್ಲೇಟ್ ಹಾಕಿಲ್ಲ ಎಂದಾದರೆ, ನಿಮ್ಮದು ಹಳೆ ವಾಹನವಾದರೆ ಪೊಲೀಸರು ಫೈನ್ ಹಾಕುತ್ತಾರೆ. ಫೈನ್ ಕಟ್ಟದೆ ಇದ್ದರೆ ಕೇಸ್ ಕೂಡ ಹಾಕುತ್ತಾರೆ ಹಾಗಾಗಿ ನೀವು ನಂಬರ್ ಪ್ಲೇಟ್ ಪಡೆಯಲು ಹಾಕಿದ್ದ ಅಪ್ಲಿಕೇಶನ್ ಪ್ರತಿ ಇಟ್ಟುಕೊಂಡು ಪ್ರಯಾಣ ಮಾಡಿದರೆ ಫೈನ್ ಗೋಳು ಇರಲಾರದು. ಒಂದು ವೇಳೆ ಈ ದಾಖಲಾತಿ ನಿಮ್ಮಲ್ಲಿ ಇಲ್ಲದಿದ್ದರೆ ಆಗ ನೀವು HSRP ನಂಬರ್ ಪ್ಲೇಟ್ (HSRP Number Plate) ಪಡೆಯಲು ಮೊದಲು ಅಪ್ಲಿಕೇಶನ್ ಹಾಕಿದ್ದ OTP ಮೆಸೇಜ್ ಕೂಡ ಪೊಲೀಸರಿಗೆ ತೋರಿಸಬಹುದು.

Imahe Source: The Hindu

HSRP Number Plate ಸಿಗಲು ಎಷ್ಟು ದಿನ ಬೇಕು:

ವಾಹನ ಸವಾರರ ಹಿತದೃಷ್ಟಿಯಿಂದ ಈ ನಿಯಮ ಜಾರಿಯಲ್ಲಿ ಇದ್ದ ಕಾರಣ ಶೀಘ್ರವಾಗಿ ನಂಬರ್ ಪ್ಲೇಟ್ HSRP ಅಳವಡಿಸುವುದು ನಿಮಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಲಿದೆ. 30 ದಿನಕ್ಕೆಲ್ಲ HSRP ನಂಬರ್ ಪ್ಲೇಟ್ ಬರಲಿದ್ದು ಆನ್ಲೈನ್ ಮೂಲಕ ಸುಲಭವಾಗಿ ರಿಜಿಸ್ಟ್ರೇಶನ್ ಮಾಡಿ ಪೇಮೆಂಟ್ ಮಾಡಿ ಡೀಲರ್ ಅಥವಾ ಪಿಕ್ಮೆಂಟ್ ಸೆಂಟರ್ ಆಯ್ಕೆ ಮಾಡಿದರೆ ಎಲ್ಲ ಪ್ರಕ್ರಿಯೆ ಮುಗಿದಂತಾಗಲಿದೆ. ಇದಾಗಿ 30 ದಿನದ ಒಳಗೆ ನಿಮ್ಮ HSRP ನಂಬರ್ ಪ್ಲೇಟ್ ನಿಮಗೆ ಸಿಗಲಿದೆ.

advertisement

Leave A Reply

Your email address will not be published.