Karnataka Times
Trending Stories, Viral News, Gossips & Everything in Kannada

Mobile: ಏಪ್ರಿಲ್ 15 ರಿಂದ ಭಾರತದಲ್ಲಿ ಮೊಬೈಲ್ ಬಳಸುವ ಎಲ್ಲರಿಗೂ ಹೊಸ ರೂಲ್ಸ್! ಈ ಸೇವೆ ರದ್ದತಿಗೆ ಕೇಂದ್ರ ಆದೇಶ

advertisement

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ (Cyber Crime) ಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ವಂಚಕರು ಆಧುನಿಕ ಟೆಕ್ನಾಲಜಿಗಳನ್ನು ಬಳಸಿಕೊಂಡು ಆನ್ಲೈನ್ ಮೂಲಕ ಜನರನ್ನು ಮೋಸಗೊಳಿಸುವಂತಹ ದಂಧೆಗೆ ಇಳಿದು ಹಲವು ಮಾರ್ಗಗಳಿಂದ ಹಣವನ್ನು ಕಸಿದುಕೊಳ್ಳುತ್ತಿದ್ದಾರೆ. ಇಂತಹ ವಂಚಕರನ್ನು ನಿಗ್ರಹಿಸುವ ಸಲುವಾಗಿ ಸರ್ಕಾರ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದ್ದು, ಇದನ್ನು ಏಪ್ರಿಲ್ 15ರಿಂದ ಜಾರಿಗೊಳಿಸುವಂತಹ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ ಈ ಸೇವೆ ಸಂಪೂರ್ಣ ಬಂದ್:

 

Image Source: ET Retail

 

ಸೈಬರ್ ಅಪರಾಧಗಳನ್ನು ಮಾಡುವ ವಂಚಕರು (Scammers) ಕರೆ ಮಾಡಿ ಜನಸಾಮಾನ್ಯರ ಬಳಿ ಒಂದಲ್ಲ ಒಂದು ಕಾರಣ ನೀಡಿ ಓಟಿಪಿ (OTP) ಕೇಳಿ ಖಾತೆಯಲ್ಲಿ ಇರುವಂತಹ ಎಲ್ಲಾ ಬ್ಯಾಲೆನ್ಸ್ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಬಿಡುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಇದರ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವ ಸೈಬರ್ ಸೆಕ್ಯೂರಿಟಿ (Cyber Security) ತಂಡದವರು ಏಪ್ರಿಲ್ 15ರಿಂದ ಜನಸಾಮಾನ್ಯರ ಮೊಬೈಲ್ನಲ್ಲಿ (Mobile) ಕೆಲ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈ ತೆಗೆದುಕೊಂಡಿದೆ. ಅದರಂತೆ ಮುಂದಿನ ದಿನಗಳಲ್ಲಿ ಯು ಎಸ್ ಡಿ ಆಧರಿತ ಕರೆ ಫಾರ್ವರ್ಡಿಂಗ್ (Call Forwarding) ಬಂದ್ ಆಗಲಿರುವ ಮಾಹಿತಿಯನ್ನು ಟೆಲಿಕಾಂ ಕಂಪನಿ ತಿಳಿಸಿದೆ.

advertisement

ಕಾಲ್ ಫಾರ್ವರ್ಡಿಂಗ್ ನಿಂದ ಆನ್ಲೈನ್ ವಂಚನೆ:

 

Image Source: TelecomTalk

 

ಆನ್ಲೈನ್ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಸೈಬರ್ ಸೆಕ್ಯೂರಿಟಿ (Cyber Security) ತಂಡದೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಮೊಬೈಲ್ ಫೋನ್ (Mobile Phone) ಗಳಲ್ಲಿ ಕರೆ ಫಾರ್ವರ್ಡಿಂಗ್ (Call Forwarding) ಸೌಲಭ್ಯವನ್ನು ಸಂಪೂರ್ಣ ನಿಲ್ಲಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ವಂಚಕರು ಟೆಲಿಫೋನ್ ಕಂಪನಿಯ ಉದ್ಯೋಗಿಗಳೆಂದು ಜನರಿಗೆ ಕರೆ ಮಾಡಿ, ನಿಮ್ಮ ನೆಟ್ವರ್ಕ್ ನಲ್ಲಿ ಸಮಸ್ಯೆ ಇದೆ ಅದನ್ನು ಬಗೆಹರಿಸಿಕೊಳ್ಳಲು ನಾವು ತಿಳಿಸುವಂತೆ ಡಯಲ್ ಮಾಡಿ ಎಂದು ದಾರಿ ತಪ್ಪಿಸುವ ಕೆಲಸ ಮಾಡಿ ನಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ ಹಾಗೂ ನಾವೇನಾದರೂ ಅವರು ತಿಳಿಸುವಂತ ನಿಗದಿತ ಕೋಡನ್ನು ಡಯಲ್ ಮಾಡಿದರೆ ಆನ್ಲೈನ್ ವಂಚನೆಗೆ ಗುರಿಯಾಗುತ್ತೀರಾ.

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕ್ಷಣದಲ್ಲೇ ಸೊನ್ನೆಯಾಗಲಿದೆ:

ಟೆಲಿಕಾಂ ಉದ್ಯೋಗಿಗಳೆಂದು ಜನರಿಗೆ ಮೋಸ ಮಾಡುವ ನಿಟ್ಟಿನಲ್ಲಿ ಕರೆಮಾಡುವಂತಹ ವಂಚಕರ ಕರೆಯನ್ನು ಸ್ವೀಕಾರ ಮಾಡಿ ಅವರು ತಿಳಿಸುವಂತಹ ಯುಎಸ್‌ಡಿ ಕೋಡನ್ನು (USD Code) ನೀವೇನಾದರೂ ನಮೂದಿಸಿದರೆ ತಕ್ಷಣವೇ ಸ್ಕ್ಯಾನರ್ಗಳು ನಿಮ್ಮ ಕರೆಯನ್ನು ಫಾರ್ವರ್ಡ್ ಮಾಡಿ ಓಟಿಪಿ ಹೇಳುವಂತೆ ಕೇಳಿಕೊಳ್ಳುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯದೆ ನೀವೇನಾದರೂ ಅವರಿಗೆ ಓಟಿಪಿ ಸಂದೇಶವನ್ನು ತಿಳಿಸಿದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಲಕ್ಷದಿಂದ 0 ಆಗಲಿದೆ. ಇನ್ನು ಕೆಲವೊಮ್ಮೆ ಇಂತಹ ವಂಚಕರು ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಗೂ ಕೂಡ ಪ್ರವೇಶ ಪಡೆದುಕೊಂಡು ನಿಮ್ಮ ಹೆಸರನ್ನು ಉಪಯೋಗಿಸಿಕೊಂಡು ಇತರರನ್ನು ವಂಚಿಸುತ್ತಾರೆ.

advertisement

Leave A Reply

Your email address will not be published.