Karnataka Times
Trending Stories, Viral News, Gossips & Everything in Kannada

Mobile Number: 1.4 ಲಕ್ಷ ಮೊಬೈಲ್ ನಂಬರ್ ಬ್ಯಾನ್ ಮಾಡಿದ ಸರ್ಕಾರ, ಕಾರಣ ಇಲ್ಲಿದೆ

advertisement

ಮೊಬೈಲ್ ಇಂದು ಅಗತ್ಯ ವಸ್ತುಗಳ ಸಾಲಿನಲ್ಲಿ ಸೇರಿದೆ. ಕೆಲವೊಬ್ಬರ ಜೀವನ ಆರಂಭ ಆಗುವುದೇ ಮೊಬೈಲ್ ಮೂಲಕ. ಬೆಳಗೆದ್ದ ಕೂಡಲೇ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣವನ್ನು ತಡುಕಾಡಿದ್ದ ಬಳಿಕವೇ ನಿತ್ಯ ದಿನಚರಿ ಆರಂಭ ಆಗುತ್ತದೆ. ಅದೇ ರೀತಿ ಮೊಬೈಲ್ ಬಳಕೆದಾರರು ಅಧಿಕವಾಗುತ್ತಿದ್ದಂತೆ ಇದನ್ನೇ ಲಾಭ ಮಾಡಿಕೊಳ್ಳುವ ಮೋಸಗಾರರು ಕೂಡ ಅಧಿಕ ಆಗುತ್ತಿದ್ದಾರೆ. ಈಗಂತೂ ಡಿಜಿಟಲ್ ಯುಗ ಆದ ಕಾರಣ ಒಟಿಪಿ ಪಡೆದು ಲಕ್ಷಾಂತರ ಹಣ ವಂಚನೆ ಮಾಡುವ ಪ್ರಕರಣವಂತೂ ಇತ್ತೀಚೆಗೆ ಸಾಮಾನ್ಯವಾಗಿದೆ.

ಮೊಬೈಲ್ ಫೋನ್ ಮೂಲಕ ಸೈಬರ್ ವಂಚನೆ (Cyber Fraud) ಪ್ರಕರಣ ಗಣನೀಯವಾಗಿ ಹಚ್ಚಾಗುತ್ತಿದ್ದ ಕಾರಣ ಅದಕ್ಕೆ ಕಡಿವಾಣ ಹಾಕಲು ಸಹ ಸರಕಾರ ಮುಂದಾಗಿದೆ. ಮೊಬೈಲ್ ಫೋನ್ ಬಳಸಿ ಜನರಿಗೆ ಮೋಸ ಮಾಡುವ ಜಾಲ ಪತ್ತೆ ಹಚ್ಚಲು ಈಗಾಗಲೇ ದೇಶ ವ್ಯಾಪಿಯಾಗಿ ಸೈಬರ್ ಕ್ರೈಮ್ (Cyber Crime) ಪತ್ತೆ ಜಾಲ ಬೀಸಿದ್ದರೂ ಅದಕ್ಕೆ ಕೂಡ ಅಂಜದ ಮಟ್ಟಿಗೆ ಮೋಸಗಾರರು ಬೆಳೆಯುತ್ತಿದ್ದಾರೆ. ಹಾಗಾಗಿ ಮೊಬೈಲ್ ನಂಬರ್ ಬಳಸಿ ಜನರನ್ನು ವಂಚಿಸಿದ್ದು ಎಐ ಮುಖೇನ ತಿಳಿದು ಬಂದಿದ್ದು ಅಂತಹ ಮೋಸಗಾರರ ಮೊಬೈಲ್ ಸಂಖ್ಯೆ (Mobile Number) ಯನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಲು ಮುಂದಾಗಲಾಗಿದೆ.

ಪ್ರಮುಖ ಸಭೆ:

ಸೈಬರ್ ಪ್ರಕರಣಗಳ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಅವರು ಹಣಕಾಸು ಸೇವಾ ವಲಯದಲ್ಲಿ ಹಣಕಾಸಿನ ಭದ್ರತೆ ಕುರಿತು ಸಭೆಯನ್ನು ಉದ್ದೇಶಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದು ಮಾತನಾಡಿದ್ದಾರೆ. ಸೈಬರ್ ಕ್ರೈಂ ನಲ್ಲಿ ತೊಡಗಿರುವ 1.40 ಲಕ್ಷ ಮೊಬೈಲ್ ಸಂಖ್ಯೆ (Mobile Number) ನಿರ್ಬಂಧ ಮಾಡಲಾಗಿದೆ. ಈ ಒಂದು ಸಭೆಯಲ್ಲಿ ನಾಗರಿಕರ ನಾಗರಿಕರ ಹಣಕಾಸು ಸೈಬರ್ ವಂಚನ ವರದಿ ಮತ್ತು ನಿರ್ವಹಣಾ ವ್ಯವಸ್ಥೆ ಪ್ಲ್ಯಾಟ್ ಫಾರ್ಮ್ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆ ಸಂಯೋಜಿಸುವುದು ಸೇರಿದಂತೆ ಇತ್ಯಾದಿ ವಿಚಾರದ ಬಗ್ಗೆ ಕೂಲಂಕುಷವಾಗಿ ಚರ್ಚೆಮಾಡಲಾಗಿದೆ.

advertisement

ಪರಿಶೀಲನೆ:

ಸೈಬರ್ ಕ್ರೈಂ ಅಪರಾಧಕ್ಕೆ ಸಂಬಂಧಿಸಿದಂತೆ ಟೆಲಿಕಾಂ ಇಲಾಖೆ ಪರಿಶೀಲನೆ ಮಾಡಿದೆ. ಈಗಾಗಲೇ 35 ಲಕ್ಷ ಮೊಬೈಲ್ ಸಂಖ್ಯೆಗೆ ಎಸ್ ಎಂ ಎಸ್ ಮೂಲಕ ನಿರ್ಬಂಧ ಸಂದೇಶ ನೀಡಲಾಗಿದೆ.1.95 ಲಕ್ಷಕ್ಕೂ ಅಧಿಕ ಟೆಂಪ್ಲೇಟ್ ಮೂಲಕ ಕಡಿತ ಮಾಡಲಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಕೊನೆಯಲ್ಲಿ ಈ ಸೈಬರ್ ಕ್ರೈಂ ಬಗ್ಗೆ ಸೈಬರ್ ಭದ್ರತೆ ಬಗ್ಗೆ ಪರಿಶೀಲನೆ ಮಾಡಲಾಗಿದೆ‌. ಡಿಜಿಟಲ್ ಪಾವತಿ ವಂಚನೆ ಮತ್ತು ಸಂಬಂಧ ಪಟ್ಟ ಎಲ್ಲ ಪಾಲುದಾರಿಕೆ ಸಿದ್ಧತೆ ಬಗ್ಗೆ ಸಲಹೆ ಸೂಚನೆ ನೀಡಲಾಗಿದೆ.

Ai ಸಹಕಾರ:

Ai ಮೂಲಕ ಸೈಬರ್ ಕ್ರೈಂ (Cyber Crime) ಜಾಲ ಪತ್ತೆ ಮಾಡಲಾಗಿದೆ. ಹಾಗಾಗಿ ASTR ಅನ್ನು ಟೆಲಿಕಾಂ ಇಲಾಖೆ ಅಭಿವೃದ್ಧಿ ಪಡಿಸಿದೆ. ಇದರಿಂದಾಗಿ Ai ನಕಲಿ ದಾಖಲೆಗಳ ಮೇಲೆ ಮೊಬೈಲ್ ಸಂಖ್ಯೆ ಪಡೆದರೆ ಅದನ್ನು ಪತ್ತೆ ಹಚ್ಚಲು ಸಹಕಾರಿ ಆಗಿದೆ. ಹಾಗಾಗಿ ಪತ್ತೆ ಹಚ್ಚುವ ಮೂಲಕ ಮೊಬೈಲ್ ಸಂಖ್ಯೆ ನಿರ್ಬಂಧ ಮಾಡಲಾಗುವುದು. ಈ ಮೂಲಕ ದೇಶ ವ್ಯಾಪಿ ಹಂತ ಹಂತವಾಗಿ ಸೈಬರ್ ಕ್ರೈಮ್ ಮೂಲಕ ಮೋಸದ ಜಾಲ ಪತ್ತೆ ಮಾಡಲಾಗುವುದು.

advertisement

Leave A Reply

Your email address will not be published.