Karnataka Times
Trending Stories, Viral News, Gossips & Everything in Kannada

PM Awas Yojana: ಸ್ವಂತ ಮನೆ ನಿರ್ಮಾಣ ಮಾಡಬೇಕೆಂದವರಿಗೆ ಕೇಂದ್ರದಿಂದ ಬಂಪರ್ ಗಿಫ್ಟ್, ಹೊಸ ಯೋಜನೆ ಜಾರಿಗೆ!

advertisement

ವಾಸಿಸಲು ಯೋಗ್ಯವಾದ ಮನೆಯೊಂದನ್ನು ನಿರ್ಮಾಣ ಮಾಡುವುದು ಬಹುತೇಕರ ಕನಸ್ಸು ಎಂದು ಹೇಳಬಹುದು. ಹಾಗಿದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ಮನೆ ಕಟ್ಟುವ ಆಸೆಯಿಂದ ಅನೇಕರು ಹಿಂದೆ ಸರಿದು ಬಾಡಿಗೆ ಮನೆ ವಾಸ ಮಾಡುತ್ತಿದ್ದಾರೆ. ಅನೇಕ ವರ್ಷಗಳ ಕಾಲ ಮನೆ ಕಟ್ಟಬೇಕೆಂದು ಕೂಡಿಡುವ ಹಣ ಬೇರೆ ಇತರ ಕಾರಣಕ್ಕಾಗಿ ಖರ್ಚು ಮಾಡಿ ಮಹದಾಸೆ ಈಡೇರದೆ ಇದ್ದಿದ್ದು ಇದೆ‌. ಆದರೆ ಸರಕಾರದ ಯೋಜನೆಯ ಸಹಕಾರದ ಮೂಲಕ ನೀವು ಒಂದೊಳ್ಳೆ ಮನೆ ನಿರ್ಮಾಣ ಮಾಡಿಕೊಳ್ಳಬಹುದು‌. ಕೇಂದ್ರ ಮತ್ತು ರಾಜ್ಯ ಸರಕಾರದ ವಸತಿ ಯೋಜನೆ (Vasati Yojana) ಅಡಿಯಲ್ಲಿ ಫಲಾನುಭವಿಗಳಾಗದೇ ಇದ್ದರೆ ಇಂದಿನ ಈ ಮಾಹಿತಿ ನಿಮಗೆ ಸಾಕಷ್ಟು ಅನುಕೂಲ ಆಗಲಿದೆ.

ಗುಡಿಸಲು ಮುಕ್ತ ಭಾರತದ ಕನಸ್ಸು:

ಭಾರತ ದೇಶದ ಮುಖ್ಯ ಕನಸ್ಸಿನ ಸಾಲಿನಲ್ಲಿ ಬಡತನ ನಿರ್ಮೂಲನೆ ಕನಸ್ಸು ಹೊತ್ತಿರುವುದನ್ನು ಕಾಣಬಹುದು. ಬಡತನ ನಿರ್ಮೂಲನೆ ಆಗಬೇಕಾದರೆ ಬಡತನ ಎಂಬ ಪದ ಸಾರುವ ಸಾಮಾಜಿಕ ವ್ಯವಸ್ಥೆ ಸರಿಯಾಗಬೇಕು ಈ ನೆಲೆಯಲ್ಲಿ ಗುಡಿಸಲು ಮುಕ್ತ ಭಾರತದ ಕನಸ್ಸನ್ನು ಕೇಂದ್ರ ಸರಕಾರ ಹೊಂದಿದ್ದು ಅದಕ್ಕಾಗಿ ಎಲ್ಲ ರಾಜ್ಯಗಳು ಪರಸ್ಪರ ಸಹಕಾರದ ಮೂಲಕ ಬಡವರಿಗೆ ಮನೆ ನಿರ್ಮಾಣಕ್ಕೆ ಸಹಕರಿಸುತ್ತಿದೆ. ಹಾಗಿದ್ದರೂ ಈ ಯೋಜನೆ ಬಗ್ಗೆ ಕ್ಲಪ್ತ ಮಾಹಿತಿ ಇಲ್ಲದೇ ಅನೇಕರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ವಿತ್ತ ಸಚಿವರಿಂದ ಘೋಷಣೆ:

ಭಾರತದಲ್ಲಿ ಸರಕಾರದಿಂದಲೇ ವಸತಿ ನಿರ್ಮಾಣದ ಯೋಜನೆ ಇದ್ದರೂ ಆ ಸೌಲಭ್ಯ ಪಡೆದವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು ಹಾಗಾಗಿ ಸಾಮಾನ್ಯರಿಗೆ ಅದರಲ್ಲೂ ಬಡವರ್ಗದ ವಸತಿ ಇಲ್ಲದ ಜನರಿಗೆ ವಸತಿ ಭಾಗ್ಯ ಕಲ್ಪಿಸುವ ದೃಢ ನಿರ್ಧಾರಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು ಇದಕ್ಕೆ ರಾಜ್ಯಗಳು ಸಹ ಬೆಂಬಲ ನೀಡುತ್ತಿದೆ. ಇತ್ತೀಚೆಗೆ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಯೋಜನೆ ಒಂದರ ಬಗ್ಗೆ ಮಾಹಿತಿ ನೀಡಿದ್ದಾರೆ‌. ಸ್ವಂತ ಮನೆ ಇಲ್ಲದೇ ಇದ್ದವರು ಬಾಡಿಗೆ ಮನೆ ವಾಸ್ತವ್ಯ ಹೊಂದಿರುವವರು ಹಾಗೂ ಕೊಳಗೇರಿ ವಾಸಿಗಳಿಗೆ ವಸತಿ ನಿರ್ಮಾಣಕ್ಕಾಗಿ ಹೊಸದಾದ ಯೋಜನೆ ಒಂದರ ಬಗ್ಗೆ ಮಾಹಿತಿ ನೀಡಿದ್ದಾರೆ.

advertisement

ಯಾವುದು ಈ ಯೋಜನೆ:

 

 

ಪ್ರಧಾನ ಮಂತ್ರಿ ಅವಾಸ್ ಯೋಜನೆ (PM Awas Yojana) ಮೂಲಕ ಮನೆ ನಿರ್ಮಾಣ ಮಾಡಲು ನೂತನ ಪರಿಕಲ್ಪನೆ ಸೇರಿಸಲಾಗಿದೆ. ಮುಂದಿನ 5 ವರ್ಷಕ್ಕೆ ಮನೆ ನಿರ್ಮಾಣದ ಕನಸ್ಸಿಗೆ ಕೇಂದ್ರ ಹೆಚ್ಚು ಬೆಂಬಲ ನೀಡಲಿದೆ. ಗ್ರಾಮೀಣ ಭಾಗ ಸೇರಿದಂತೆ ನಗರ ಭಾಗದ ಕೊಳಗೇರಿಯಲ್ಲಿಯೂ ಇನ್ನು 2 ಕೋಟಿ ಮನೆ ನಿರ್ಮಾಣ ಮಾಡಲಾಗುವುದು ಎಂದು ವಿತ್ತ ಸಚಿವರು ಮಧ್ಯಂತರ ಬಜೆಟ್ ಮಂಡನೆ ವೇಳೆಯಲ್ಲಿ ತಿಳಿಸಿದ್ದರು.

ವಿತ್ತ ಸಚಿವರ ಬಜೆಟ್ ನಲ್ಲಿ ಇದ್ದ ಅಂಶವೇನು?

ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುವಾಗ ಪ್ರಧಾನ ಮಂತ್ರಿ ಅಧೀನದ ಕೇಂದ್ರ ಸರಕಾರದ ಅವಧಿಯಲ್ಲಿ ಈಗಾಗಲೇ ಅಡುಗೆ ಅನಿಲ, ಬ್ಯಾಂಕ್ ಖಾತೆ, ನೀರು ಇತ್ಯಾಧಿ ಮೂಲ ಭೂತ ಸೌಕರ್ಯ ನೀಡಲು ಶ್ರಮಿಸಲಾಗಿದೆ. ಬಾಡಿಗೆ ಮನೆ ಅಥವಾ ಕೊಳಗೇರಿಯಲ್ಲಿ ವಾಸವಿರುವ ಮಧ್ಯಮವರ್ಗದವರು ತಮ್ಮ ಸ್ವಂತ ಮನೆ ನಿರ್ಮಿಸಲು ನೆರವಾಗುವ ಉದ್ದೇಶದಿಂದಾಗಿ ಯೋಜನೆಯೊಂದಕ್ಕೆ ಹೊಸ ರೂಪು ನೀಡುತ್ತಿದ್ದೇವೆ. ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಚಾಲ್ತಿಯಲ್ಲೇ ಇತ್ತು. ಕುಟುಂಬದ ಸಂಖ್ಯೆ ಬಲ ಹೆಚ್ಚುವ ಕಾರಣ ಅಧಿಕ ಮನೆ ನಿರ್ಮಾಣ ಆಗಬೇಕಿದೆ. ಹಾಗಾಗಿ ಮುಂದಿನ 5ವರ್ಷದಲ್ಲಿ ಇನ್ನೂ 2 ಕೋಟಿ ಮನೆ ನಿರ್ಮಾಣ ಮಾಡುವುದಾಗಿ ವಿತ್ತ ಸಚಿವೆ ತಿಳಿಸಿದ್ದಾರೆ.

advertisement

Leave A Reply

Your email address will not be published.