Karnataka Times
Trending Stories, Viral News, Gossips & Everything in Kannada

Fixed Deposit: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ HDFC ಬ್ಯಾಂಕ್!

advertisement

ಇಂದು ಹೂಡಿಕೆ ಪ್ರತಿಯೊಬ್ಬರ ಅತೀ ಮುಖ್ಯವಾದ ಆಯ್ಕೆ. ಯಾಕಂದ್ರೆ ಮುಂದಿನ ಕಷ್ಟಕಾಲದ ದಿನದಲ್ಲಿ ಸಹಾಯಕ ವಾಗುವುದೇ ಈ ಹೂಡಿಕೆಯ ಹಣ. ಹೆಚ್ಚಿನ‌ಜನರು ಅವರ ವಿಶ್ವಾಸಾರ್ಹ ‌ಬ್ಯಾಂಕ್ ಗಳಲ್ಲಿ ಎಫ್ ಡಿ ಇಡುತ್ತಾರೆ. ಇಂದು Post Office, LIC ಯಂತಹ ಹಲವು ಯೋಜನೆ ಇದ್ದರೂ ಎಫ್‌ಡಿ ಯಂತಹ ಯೋಜನೆಯು ಜನರ ನೆಚ್ಚಿನ ಆಯ್ಕೆ ಕೂಡ ಆಗಿದೆ. ಹಾಗಾಗಿ ಬ್ಯಾಂಕ್ ಗಳು ಕೂಡ ಗ್ರಾಹಕರ ಉತ್ತಮ ಆಯ್ಕೆ ಯಾಗಿದೆ.

ಸ್ಥಿರ ಠೇವಣಿ ಹೆಚ್ಚಳ:

 

 

ಇದೀಗ HDFC Bank ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಬ್ಯಾಂಕ್‌ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳ ಮೇಲಿನ ಬಡ್ಡಿ ದರವನ್ನು ಕೂಡ ಪರಿಷ್ಕರಿಸಿದೆ. ಭಾರತದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ HDFC ಬ್ಯಾಂಕ್ ಕೂಡ ಒಂದಾಗಿದ್ದು ಇಲ್ಲಿ ‌ಕೂಡ ಗ್ರಾಹಕರಿಗೆ ವಿಶೇಷ ರಿಯಾಯಿತಿ, ಪೀಚರ್ಸ್ ಗಳನ್ನು ಬ್ಯಾಂಕ್ ನೀಡುತ್ತಲೆ ಇರುತ್ತದೆ. HDFC ಬ್ಯಾಂಕ್ Fixed Deposit ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚು ಮಾಡಿದ್ದು ಇಲ್ಲಿ ಎಫ್ ಡಿ ಇಡಲು ನಿಮಗೆ ಸೂಕ್ತ ಆಯ್ಕೆ ಯಾಗಿದೆ. ಇಲ್ಲಿ ನೀವು 7.75 ಪ್ರತಿಶತದವರೆಗೆ ಬಡ್ಡಿಯನ್ನು ಪಡೆಯಬಹುದಾಗಿದೆ.

advertisement

ಎಷ್ಟು ಹೆಚ್ಚಿಸಿದೆ?

  • ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಎಫ್‌ಡಿ ದರಗಳನ್ನು ಶೇಕಡಾ 0.25 ಅಥವಾ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.
  • ಇಲ್ಲಿ 18 ತಿಂಗಳಿಂದ 21 ತಿಂಗಳವರೆಗಿನ ಸ್ಥಿರ ಠೇವಣಿಗಳ ಮೇಲೆ ಸಾಮಾನ್ಯ ಹೂಡಿಕೆದಾರರಿಗೆ ಗರಿಷ್ಠ 7.25 ಶೇಕಡಾ ಬಡ್ಡಿಯನ್ನು ನೀಡಲಿದ್ದು ಹಿರಿಯ ನಾಗರಿಕರಿಗೆ ಇಲ್ಲಿ ಶೇ.7.75ರಷ್ಟು ಬಡ್ಡಿ ಸಿಗುತ್ತದೆ.
  • ಈ ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಎಫ್‌ಡಿಗಳಿಗೆ ಶೇಕಡಾ 3.5 ರಿಂದ ಶೇಕಡಾ 7.75 ರವರೆಗೆ ಬಡ್ಡಿಯನ್ನು ಪಡೆಯಲು ಅವಕಾಶ ‌ಇದ್ದು ಈ ಬ್ಯಾಂಕ್ 18 ತಿಂಗಳಿಂದ 21 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚು ಮಾಡಿದೆ.

ಲೆಕ್ಕಾಚಾರ ಹೇಗೆ?

ಬ್ಯಾಂಕ್ ಕೆಲವೊಂದು ಅವಧಿಯಲ್ಲಿ Fixed Deposit ಬದಲಾವಣೆ ಮಾಡುತ್ತದೆ.ಸ್ಥಿರ ಠೇವಣಿ ಗಳು ಅವಧಿ ಮತ್ತು ವಯಸ್ಸಿನ ಆಧಾರದ ಮೇಲೆ ಬಡ್ಡಿದರಗಳನ್ನು ನೀಡುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, ಬಡ್ಡಿ ದರವು ಹೆಚ್ಚು ಇರುತ್ತದೆ.

advertisement

Leave A Reply

Your email address will not be published.