Karnataka Times
Trending Stories, Viral News, Gossips & Everything in Kannada

Samsung Galaxy M14 5G: 10,000 ಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಸ್ಯಾಮ್ ಸಂಗ್ ಕಂಪನಿಯ 5G ಫೋನ್, 6,000mAh ಬ್ಯಾಟರಿ ಸಾಮರ್ಥ್ಯ!

advertisement

ಸ್ಯಾಮ್ಸಂಗ್ ಎಷ್ಟು ಉತ್ತಮ ಬ್ರಾಂಡ್ ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕೆಂದರೆ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಫೋನ್ ಬಿಡುಗಡೆ ಮಾಡಿ ತನ್ನನ್ನು ತಾನು ಪ್ರೂವ್ ಮಾಡಿಕೊಂಡಿದೆ. ಇದೀಗ 10,000 ಗಿಂತ ಕಡಿಮೆ ಬೆಲೆಗೆ 6,000mAh ಬ್ಯಾಟರಿ ಹೊಂದಿರುವ ಅದ್ಭುತ ಫೋನನ್ನು ಸ್ಯಾಮ್ ಸಂಗ್ ಬಿಡುಗಡೆ ಮಾಡಿದೆ. ಈ ಫೋನಿನ ಬಗ್ಗೆ ಇಲ್ಲಿದೆ ವಿಶೇಷವಾದ ಮಾಹಿತಿ.

Samsung Galaxy M14 5Gsmartphone!

Samsung Galaxy M14 5Gಅನ್ನು ನೀವು 10,000ಗಳಿಗಿಂತ ಕಡಿಮೆ ಬೆಲೆಗೆ ಅಮೆಜಾನ್ ನಲ್ಲಿ ಖರೀದಿ ಮಾಡಬಹುದು ಫೆಬ್ರುವರಿ 14ರಂದು ನಡೆಯಲಿರುವ ಫ್ಯಾಬ್ ಫೋನ್ ಫೆಸ್ಟ್ ನಲ್ಲಿ ಮೊದಲ ಬಾರಿಗೆ ಈ ಫೋನ್ ಮಾರಾಟಕ್ಕೆ ಲಭ್ಯವಿದ್ದು ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಈ ಫೋನ್ 4GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಮೆಜಾನ್ ನಲ್ಲಿ 10,990ರೂಪಾಯಿಗಳಿಗೆ ಈ ಫೋನ್ ಲಭ್ಯವಿದ್ದು, 1,000 ರೂಪಾಯಿಗಳ ಬ್ಯಾಂಕ್ ರಿಯಾಯಿತಿಯೊಂದಿಗೆ 9,990ರೂ. ಗಳಿಗೆ ಖರೀದಿ ಮಾಡಬಹುದು.

ಇನ್ನು ನೀವು ಸುಲಭವಾಗಿ ಇಎಂಐ ಪಾವತಿ ಮಾಡುವುದರ ಮೂಲಕ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು ಅದರಲ್ಲೂ ಪ್ರತಿ ತಿಂಗಳು ಕೇವಲ 533 ರೂಪಾಯಿಗಳ ಆರಂಭಿಕ EMI ಸೌಲಭ್ಯ ಇದೆ. ಅಷ್ಟೇ ಅಲ್ಲದೆ ನೀವು ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಹಾಗಿದ್ದರೆ ಇನ್ನಷ್ಟು ಆಫರ್ ಸಿಗಲಿದೆ ಅಂದ್ರೆ ಇನ್ನೂ ಕಡಿಮೆ ಬೆಲೆಗೆ ಫೋನ್ ಖರೀದಿ ಮಾಡಬಹುದು ಆದರೆ ನಿಮ್ಮ ಫೋನ್ ಯಾವ ಕಂಡೀಶನ್ ನಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ನಿಮಗೆ ರಿಯಾಯಿತಿ ಬೆಲೆ ಕೊಡಲಾಗುವುದು.

advertisement

Samsung Galaxy M14 5G ವೈಶಿಷ್ಟ್ಯತೆಗಳು

Samsung Galaxy M14 5Gಸ್ಮಾರ್ಟ್ ಫೋನ್ 2408*1080 ಪಿಕ್ಸೆಲ್ ರೆಸುಲ್ಯೂಷನ್ ಹೊಂದಿದ್ದು 6.6 ಇಂಚಿನ ಪೂರ್ಣ ಎಚ್ ಡಿ ಡಿಸ್ಪ್ಲೇ ಯೊಂದಿಗೆ ಬರುತ್ತದೆ. 90 Hz ರಿಫ್ರೇಶ್ ದರದೊಂದಿಗೆ ಬೆಂಬಲಿಸುವ ಈ ಫೋನಿನಲ್ಲಿ ಫೋನಿನ ರಕ್ಷಣೆಗಾಗಿ ಮಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಅಳವಡಿಸಲಾಗಿದೆ. ಇನ್ನು ಈ ಫೋನಿನಲ್ಲಿ 4 ಜಿಬಿ ಮಾತ್ರವಲ್ಲದೆ 6 ಜಿಬಿ ರಾಮ್ ಹಾಗೂ 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿರುವ ರೂಪಾಂತರವನ್ನು ಕೂಡ ಖರೀದಿ ಮಾಡಬಹುದು.

ಸ್ಯಾಮ್ಸಂಗ್ ಈ ಫೋನಿನ ಇನ್ನಷ್ಟು ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ 50 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಕೊಡಲಾಗಿದ್ದು, ಎರಡು ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ ಎರಡು ಮೆಗಾ ಪಿಕ್ಸೆಲ್ ಮೈಕ್ರೋ ಲೆನ್ಸ್ ಕೂಡ ಅಳವಡಿಸಲಾಗಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದ್ದು ಕ್ಲಾರಿಟಿ ಪಿಚ್ಚರ್ ಅನುಭವವನ್ನು ನಿಮಗೆ ಕೊಡುತ್ತದೆ. ಇನ್ನೊಂದು ವೈಶಿಷ್ಟ್ಯತೆ ಅಂದ್ರೆ ಈ ಫೋನಿನಲ್ಲಿ ಎಲ್ಇಡಿ ಫ್ಲಾಶ್ ನೊಂದಿಗೆ ಮೂರು ಹಿಂಬದಿಯ ಕ್ಯಾಮೆರಾ ಅಳವಡಿಸಲಾಗಿದೆ.

Samsung Galaxy M14 5G ಬ್ಯಾಟರಿ!

25 ವಾಟ್ ವೇಗದ ಚಾರ್ಜಿಂಗ್ ಬೆಂಬಲಿಸುವ 6,000 mAh ಬ್ಯಾಟರಿ ಅಳವಡಿಸಲಾಗಿದೆ. ಆಂಡ್ರಾಯ್ಡ್ 13 ಆಧಾರಿತ oneUI 5 ಮೂಲಕ ಈ ಫೋನ್ ಕಾರ್ಯ ನಿರ್ವಹಿಸುತ್ತದೆ. ಈ ಫೋನಿನಲ್ಲಿ ವೈಫೈ ಬ್ಲೂಟೂತ್ 5.2, GPS USB type c, 3.5 mm headphone jack ಮೊದಲಾದ ವೈಶಿಷ್ಟತೆಗಳನ್ನು ಕಾಣಬಹುದು. ತಾಂತ್ರಿಕವಾಗಿಯೂ ಸ್ಯಾಮ್ಸಂಗ್ ಈ ಹೊಸ ಫೋನ್ ಹೆಚ್ಚು ಸ್ಟ್ರಾಂಗ್ ಆಗಿದ್ದು ಲುಕ್ ಕೂಡ ಅಷ್ಟೇ ಉತ್ತಮವಾಗಿದೆ. IC silver, berry blue, smokey teal ಈ ಮೂರು ಬಣ್ಣಗಳ ಆಯ್ಕೆಯನ್ನು ಪಡೆಯಬಹುದು. ಹಾಗಾದ್ರೆ ಇನ್ಯಾಕೆ ತಡ ನಿಮಗೆ ಇಷ್ಟವಾದ ಸ್ಯಾಮ್ಸಂಗ್ ನ ಅತ್ಯುತ್ತಮ ಕಾರ್ಯಕ್ರಮಕ್ಕೆ ಹೊಂದಿರುವ ಫೋನ್ ಅನ್ನು ಕೇವಲ ಹತ್ತು ಸಾವಿರ ರೂಪಾಯಿಗಳ ಒಳಗೆ ಖರೀದಿಸಬಹುದಾಗಿದ್ದು, ಅಮೆಜಾನ್ನಲ್ಲಿ ಇಂದೇ ಪ್ರಿ-ಬುಕಿಂಗ್ ಮಾಡಿಕೊಳ್ಳಿ.

advertisement

Leave A Reply

Your email address will not be published.