Karnataka Times
Trending Stories, Viral News, Gossips & Everything in Kannada

SIM Card: ಚುನಾವಣೆ ಬಳಿಕ ಯಾವುದೇ ಸಿಮ್ ಕಾರ್ಡ್ ಬಳಸುತ್ತಿದ್ದವರಿಗೆ ಕಹಿಸುದ್ದಿ! ಎಲ್ಲಾ ಮೊಬೈಲ್ ಕಂಪನಿಗಳ ನಿರ್ಧಾರ

advertisement

ಇಂದು ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಯಂತು ಏರಿಕೆಯಾಗಿದೆ.ಈಗಾಗಲೇ ಮೂಲಭೂತ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬೇಸೆತ್ತು ಹೋಗಿದ್ದಾರೆ.ಇಂದು ಅಗತ್ಯಕ್ಕೆ ಬೇಕಾದ ಪೆಟ್ರೋಲ್, ಡಿಸೇಲ್, ಗ್ಯಾಸ್, ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಸಾಮಾನ್ಯ ಜನರು ಬದುಕು ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಇನ್ನೇನು ಲೋಕಸಭೆ ಚುನಾವಣೆ ಕೂಡ ನಡೆಯಲಿದ್ದು ಅಗತ್ಯ ವಸ್ತುಗಳ ಬೆಲೆ ಇಳಿಕೆ ಯಾಗಬಹುದು ಎಂದು ಕಾದಿದ್ದವರಿಗೆ ಇದೀಗ ಈ ವಿಚಾರ ಬಹಳಷ್ಟು ಜನತೆಗೆ ಬೇಸರ ತರಿಸಿದೆ ಎಂದು ಹೇಳಬಹುದು.

ಮೊಬೈಲ್ ಅಗತ್ಯ ಸಾಧನ:

ಇಂದು ಪ್ರತಿಯೊಬ್ಬರಿಗೂ ಮೊಬೈಲ್ ಆಗತ್ಯ ಸಾಧನ ವಾಗಿದ್ದು ವ್ಯವಹಾರ,ಸಂವಹನ ಇತ್ಯಾದಿ ಸುಲಭವಾಗಿ ಬಿಟ್ಟಿದೆ.‌ ಇಂದು ಅನಕ್ಷರಸ್ಥರು ಕೂಡ ಮೊಬೈಲ್ ಗೆ ಅವಲಂಬಿತ ರಾಗಿದ್ದಾರೆ‌. ಮೊಬೈಲ್ ನಿಂದ ಎಷ್ಟು ಹಾನಿ ಇದೆಯೇ ಅಷ್ಟೆ ಉಪಯೋಗ ಕೂಡ ಇರಲಿದ್ದು ಇದೀಗ ಮೊಬೈಲ್ ಪ್ರಿಯರಿಗೆ ಈ ವಿಚಾರ ಬೇಸರ ತರಿಸಿದೆ ಎನ್ನಬಹುದು.

ದರ ಹೆಚ್ಚಳ:

 

advertisement

Image Source: Behance

 

ಹೌದು ಲೋಕಸಭಾ ಚುನಾವಣೆಯ ನಂತರದಲ್ಲಿ‌ ಟೆಲಿಕಾಂ ಉದ್ಯಮದಲ್ಲಿ 15-17% ನಷ್ಟು ಸುಂಕ ಹೆಚ್ಚಳವಾಗಲಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದ್ದು ಇನ್ಮುಂದೆ ರೀಚಾರ್ಜ್ (Mobile Recharge) ಮಾಡಲು ಹೆಚ್ಚಿನ ಹಣವನ್ನು ನೀವು ವಿನಿಯೋಗಿಸಬೇಕಾಗುತ್ತದೆ. ಉದಾಹರಣೆಗೆ ನೀವಿಗ 300 ರೂ ರೀಚಾರ್ಜ್ ಮಾಡಿದರೆ, ಶುಲ್ಕ ಹೆಚ್ಚಳದ ನಂತರ ನೀವು 351 ರೂಪಾಯಿ ಪಾವತಿ ಮಾಡುವ ಮೂಲಕ ರೀಚಾರ್ಜ್ ಮಾಡಬೇಕಾಗುತ್ತದೆ.

ಡಾಟಾ ಪ್ಯಾಕ್ ದರ ಹೆಚ್ಚಳ:

ಭಾರತೀಯ ಟೆಲಿಕಾಂ ಕಂಪನಿಗಳು 20ರ ಷ್ಟು ಮೊಬೈಲ್ ಕರೆ ಹಾಗೂ ಡಾಟಾ ಪ್ಯಾಕ್ ನ ದರ (Data Pack Rate) ವನ್ನು ಹೆಚ್ಚಿಸಲು ನಿರ್ಧಾರ ಮಾಡಿದೆ ಎನ್ನುವ ಸುದ್ದಿ ಲಭಿಸಿದ್ದು 20 % ನಷ್ಟು ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.ಜೂ.4ರಂದು ಲೋಕಸಭೆ ಚುನಾವಣೆ ಫ‌ಲಿತಾಂಶ ಬರಲಿದ್ದು ಈ ಬಳಿಕ ಶೀಘ್ರದಲ್ಲೇ ದೂರಸಂಪರ್ಕ ಕಂಪೆನಿಗಳು ಮೊಬೈಲ್ ದರವನ್ನು ಹೆಚ್ಚಳ ಮಾಡಲಿದೆ.

ಡಿಸೆಂಬರ್ 2021ರಲ್ಲಿ ಕೊನೆಯ ಬಾರಿಗೆ ಸುಮಾರು 20% ನಷ್ಟು ಶುಲ್ಕವನ್ನು ಹೆಚ್ಚಿಸಲಾಗಿತ್ತು. ಟ್ಯಾರಿಫ್ ಪ್ಲ್ರಾನ್‌ಗಳ ದರದಲ್ಲಿ ಶೇ.15 ರಿಂದ 17ರಷ್ಟು ಹೆಚ್ಚಳ ಮಾಡಲಿದೆ ಎನ್ನಲಾಗಿದೆ.

advertisement

Leave A Reply

Your email address will not be published.