Karnataka Times
Trending Stories, Viral News, Gossips & Everything in Kannada

Harbhajan Singh: ಪಾಂಡ್ಯ, ಗಿಲ್, ಸಿರಾಜ್ ಗೆ ಗೇಟ್ ಪಾಸ್ ! ಹರ್ಭಜನ್ ಆಯ್ಕೆ ಮಾಡಿದ T20 ವಿಶ್ವಕಪ್ ತಂಡ ಹೀಗಿದೆ.

advertisement

ಐಪಿಎಲ್ (IPL) ಈಗಾಗಲೇ ವೇಗವಾಗಿ ಸಾಗುತ್ತಿದೆ ಹಾಗೂ ಇನ್ನೇನು ಕೆಲವೇ ವಾರಗಳಲ್ಲಿ ಐಪಿಎಲ್ ಕೂಡ ಮುಗಿದು ಹೋಗಲಿದೆ. ಐಪಿಎಲ್ ಮುಗಿದ ನಂತರ ಏನು ಮಾಡೋದು ಅಂತ ಯೋಚನೆ ಮಾಡುತ್ತಿರುವಂತಹ ಕ್ರಿಕೆಟ್ ಅಭಿಮಾನಿಗಳಿಗೆ ಜೂನ್ ಒಂದರಿಂದ ಪ್ರಾರಂಭವಾಗಲಿರುವಂತಹ ಟಿ 20 ವಿಶ್ವಕಪ್ (T20 World Cup) ಸ್ವಾಗತ ನಿಂತಿದೆ ಎಂದು ಹೇಳಬಹುದಾಗಿದೆ.

ಇನ್ನು ಈ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರೆಲ್ಲಾ ಆಯ್ಕೆಯಾಗಲಿದ್ದಾರೆ ಅನ್ನುವಂತಹ ಚರ್ಚೆಗಳು ಕೂಡ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ನಡೆಯೋದಕ್ಕೆ ಪ್ರಾರಂಭವಾಗಿದೆ. ಅದರಲ್ಲೂ ಕೆಲವು ಹಿರಿಯ ಆಟಗಾರರಂತೂ ತಮ್ಮ ಅಭಿಪ್ರಾಯದಲ್ಲಿ ಈ ಬಾರಿ ಯಾರನ್ನೆಲ್ಲ ತಂಡದಲ್ಲಿ ಸೇರಿಸಿಕೊಳ್ಳಬಹುದು ಎನ್ನುವಂತಹ ಲೆಕ್ಕಾಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅದೇ ರೀತಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವಂತಹ ಹರ್ಭಜನ್ ಸಿಂಗ್ (Harbhajan Singh) ರವರು ತಮ್ಮ ಪ್ರಕಾರ ಯಾರೆಲ್ಲ ಆಡುವ ಸಾಧ್ಯತೆ ಇದೆ ಎಂಬುದನ್ನು ಹಂಚಿಕೊಂಡಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಹರ್ಭಜನ್ ಸಿಂಗ್ ರವರ ಪ್ರಕಾರ t20 ವಿಶ್ವಕಪ್ ನ ಟೀಮ್ ಇಂಡಿಯಾ ತಂಡ ಹೇಗಿರಲಿದೆ ಗೊತ್ತಾ?

advertisement

ಹರ್ಭಜನ್ ಸಿಂಗ್ (Harbhajan Singh) ರವರ ಪ್ರಕಾರ ಟಾಪ್ ಆರ್ಡರ್ನಲ್ಲಿ ರೋಹಿತ್ ಶರ್ಮ (Rohit Sharma) ರವರ ಜೊತೆಗೆ ಯಶಸ್ವಿ ಜೈಸ್ವಾಲ್ (Yashasvi Jaiswal) ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಓಪನ್ ಮಾಡಲಿದ್ದಾರೆ. ಅವರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಳ್ಳಲಿದ್ದಾರೆ. ಗಿಲ್ ಹೆಚ್ಚಿನ ರನ್ ಹೊಂದಿದ್ರು ಕೂಡ ಅವರನ್ನು ಆಯ್ಕೆ ಮಾಡಿಲ್ಲ. ನಂತರ ಟಿ20 ಸ್ಪೆಷಲಿಸ್ಟ್ ಆಗಿರುವಂತಹ ಸೂರ್ಯಕುಮಾರ್ ಯಾದವ್ (Suryakumar Yadav) ರವರ ಜೊತೆಗೆ ಈಗ ಮತ್ತೆ ಕಮ್ ಬ್ಯಾಕ್ ಮಾಡಿರುವಂತಹ ರಿಷಬ್ ಪಂತ್ ಅವರು ಕೂಡ ತಂಡದಲ್ಲಿದ್ದಾರೆ.

 

Image Source: ABP News

 

ರಿಂಕು ಸಿಂಗ್ (Rinku Singh), ಶಿವಂ ದುಬೆ (Shivam Dubey) ಫಿನಿಷರ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ಈ ತಂಡದಲ್ಲಿ ಗೇಟ್ ಪಾಸ್ ನೀಡಲಾಗಿದೆ. ವಿಕೆಟ್ ಕೀಪರ್ ವಿಭಾಗದಲ್ಲಿ ಸಂಜು ಸ್ಯಾಂಸನ್ ರವರನ್ನ ಹರ್ ಭಜನ್ ಸಿಂಗ್ ಆಯ್ಕೆ ಮಾಡಿದ್ದಾರೆ. ರವೀಂದ್ರ ಜಡೇಜಾ ಆಲ್ ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದು ಸ್ಪಿನ್ ವಿಭಾಗದಲ್ಲಿ ಕುಲ್ಚ ಜೋಡಿ ಕಾಣಿಸಿಕೊಳ್ಳಲಿದೆ.

ಫಾಸ್ಟ್ ಬೌಲಿಂಗ್ ನಲ್ಲಿ ಬೂಮ್ರ (Bumrah), ಆವೇಷ್ ಖಾನ್ (Avesh Khan), ಅರ್ಷದೀಪ್ ಸಿಂಗ್ (Arshdeep Singh) ಹಾಗೂ ಸದ್ಯದ ಮಟ್ಟಿಗೆ ಅತ್ಯಂತ ಫಾಸ್ಟ್ ಬೌಲರ್ ಆಗಿರುವಂತಹ ಲಕ್ನೋ ತಂಡದ ಮಯಾಂಕ್ ಯಾದವ್ ಅವರನ್ನು ಕೂಡ ಹರ್ ಭಜನ್ ಸಿಂಗ್ ತಮ್ಮ ಆಡುವ 15ರ ಬಳಗದಲ್ಲಿ ಆಯ್ಕೆ ಮಾಡಿದ್ದಾರೆ.

ಈಗಾಗಲೇ ಐಸಿಸಿ ಜಾರಿಗೆ ತಂದಿರುವ ನಿಯಮಗಳ ಪ್ರಕಾರ ಮೇ ಒಂದರ ಒಳಗೆ ಪ್ರತಿಯೊಂದು ತಂಡಗಳು ಕೂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆಡುವಂತಹ ತಂಡವನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಹೇಳಿದ್ದು ಇನ್ನು ಕೆಲವೇ ದಿನಗಳಲ್ಲಿ ನಾವು ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಟಿ20 ವಿಶ್ವಕಪ್ (T20 World Cup) ತಂಡದ ಪರವಾಗಿ ಯಾರೆಲ್ಲಾ ಆಡುತ್ತಾರೆ ಎಂಬುದನ್ನು ನೋಡಬಹುದಾಗಿದೆ.

advertisement

Leave A Reply

Your email address will not be published.