Karnataka Times
Trending Stories, Viral News, Gossips & Everything in Kannada

Cooker Blast: ಈ 4 ಕಾರಣಗಳಿಂದಾಗಿ ಹೆಚ್ಚಾಗಿ ಕುಕ್ಕರ್ ಬ್ಲಾಸ್ಟ್ ಉಂಟಾಗುತ್ತದೆ! ಮಹಿಳೆಯರೇ ಗಮನಿಸಿ

advertisement

ಸ್ನೇಹಿತರೆ, ಪ್ರತಿ ಮನೆಗೂ ಬೇಕಾಗುವಂತಹ ಅಡುಗೆ ವಸ್ತು ಎಂದರೆ ಅದು ಕುಕ್ಕರ್, ಕುಕ್ಕರ್ ಇಲ್ಲದೆ ಹೋದರೆ ಯಾವ ಕೆಲಸಗಳು ಬೇಗ ಮುಗಿಯುವುದೇ ಇಲ್ಲ. ಹೀಗೆ ಎಲ್ಲರೂ ಕುಕ್ಕರ್ (Cooker) ಮೇಲೆ ಸಂಪೂರ್ಣ ಅವಲಂಬನೆ ಆಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸದೆ ಹೋದರೆ ಪ್ರಾಣವೇ ಹೋಗುವಂತಹ ಕೆಲ ಅವಗಡಗಳು ಸಂಭವಿಸಿ ಬಿಡುತ್ತದೆ. ಹೀಗೆ ಕುಕ್ಕರ್ ಬ್ಲಾಸ್ಟ್ (Cooker Blast) ಆಗಿ ಸಾಕಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವುದು ಹಾಗೂ ತೀವ್ರವಾದ ಗಾಯಕ್ಕೀಡಾಗಿರುವಂತಹ ಪ್ರಕರಣಗಳನ್ನು ನಾವು ಕೇಳ್ಪಟ್ಟಿರುತ್ತೇವೆ. ಯಾವ ಕಾರಣದಿಂದಾಗಿ ಕುಕ್ಕರ್ ಸ್ಪೋಟಕಗೊಳ್ಳುತ್ತದೆ. ಅದನ್ನು ತಡೆಯಲು ಮಾಡಬೇಕಾದ ಪ್ರಾಥಮಿಕ ಕ್ರಮಗಳೇನೇನು (Primary Measures) ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಕುಕ್ಕರ್ ಬೆಲ್ಟನ್ನು ಬದಲಿಸಿ:

 

Image Source: YouTube

 

ಹಲವು ವರ್ಷಗಳಿಂದ ಹಾಳಾಗಿರುವ/ ಕಟ್ಟಾಗಿರುವ ಬೆಲ್ಟನ್ನು ಉಪಯೋಗಿಸುವುದರಿಂದ ಕುಕ್ಕರ್ ಸ್ಫೋಟಕ (Cooker Blast) ಗೊಳ್ಳುತ್ತದೆ. ಹೀಗಾಗಿ ನಿಮ್ಮ ಕುಕ್ಕರ್ ಬೆಲ್ಟನಲ್ಲಿ (Cooker Belt) ಕೊಂಚ ವ್ಯತ್ಯಾಸ ಕಂಡು ಬಂದರೆ ಅದನ್ನು ಕೂಡಲೆ ಬದಲಿಸುವುದು ಉತ್ತಮ.

ಕುಕ್ಕರ್ ವಿಶಲ್ ಅನ್ನು ಕ್ಲೀನ್ ಮಾಡಿ:

 

Image Source: HerZindagi

 

advertisement

ಪ್ರತಿದಿನ ಕುಕ್ಕರ್ಗಳನ್ನು ಉಪಯೋಗಿಸುತ್ತಲೇ ಇರುತ್ತೇವೆ ಆ ಸಮಯದಲ್ಲಿ ಅದರ ವಿಶಿಲ್ ಒಳಗೆ ಅನ್ನ, ಬೇಳೆ ಹಾಗೂ ಇನ್ನಿತರ ವಸ್ತುಗಳು ಸೇರಿಕೊಂಡು ಹೊರ ಬರುವ ಗಾಳಿಯನ್ನು ತಡೆಯುತ್ತಿರುತ್ತದೆ. ಹೀಗಾಗಿ ಕಾಲಕಾಲಕ್ಕೆ ಕುಕ್ಕರ್ ವಿಶಿಲ್ಗಳ (Cooker Whistle) ನೆಟ್ಟನ್ನು ನಿಧಾನವಾಗಿ ತೆರೆದು ಕ್ಲೀನ್ ಆಗಿ ಸ್ವಚ್ಛಗೊಳಿಸಿ ಉಪಯೋಗಿಸುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಸರಿಯಾದ ಕ್ರಮದಲ್ಲಿ ನೀರಿಡದೆ ಹೋದರು, ಕುಕ್ಕರ್ ಬ್ಲಾಸ್ಟ್ ಆಗುತ್ತದೆ!

ಅಡುಗೆ ಮಾಡುವಾಗ ಅದಕ್ಕೆ ಬೇಕಾಗುವಷ್ಟು ನೀರನ್ನು ಹಾಕದೆ ಕುಕ್ಕರ್ ಮುಚ್ಚಳವನ್ನು ಹಾಕಿ ಗ್ಯಾಸ್ ಮೇಲೆ ಇಡುವುದರಿಂದ ಅದು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ನೀವು ಕುಕ್ಕರ್ ಒಳಗೆ ಹಾಕುವಂತಹ ಅನ್ನ ಅಥವಾ ಬೇಳೆ ಬೇಯಲು ಬೇಕಾಗುವ ಪ್ರಮಾಣದಲ್ಲಿ ಸರಿಯಾಗಿ ನೀರನ್ನು ಹಾಕಿದ ನಂತರ ಬೇಯಲು ಇಡಿ.

ಕುಕ್ಕರ್ ಗ್ಯಾರಂಟಿಯನ್ನು ಪರಿಶೀಲಿಸಿದ ನಂತರ ಖರೀದಿಸಿ:

ಸಾಮಾನ್ಯವಾಗಿ ಎಲ್ಲ ಮಹಿಳೆಯರು ಕುಕ್ಕರ್ ಖರೀದಿ ಮಾಡುವಾಗ ಅದರ ವಾರಂಟಿಯ ಕುರಿತಾದ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ ಹೊರತು ಗ್ಯಾರಂಟಿ ಕುರಿತಾದ ಮಾಹಿತಿಯನ್ನು ತಿಳಿಯುವುದಿಲ್ಲ. ಹೀಗಾಗಿ ಕುಕ್ಕರ್ ಮೇಲೆ ಐ ಎಸ್ ಐ ಸಿಂಬಲ್ (ISI Symbol) ಹಾಗೂ ಅವರು ನೀಡಿರುವಂತಹ ಗ್ಯಾರಂಟಿಯನ್ನು ಓದಿದ ನಂತರ ಖರೀದಿ ಮಾಡಿ.

ಹೀಗೆ ಅಪ್ಪಿ ತಪ್ಪಿ ಈ ಮೇಲ್ಕಂಡ ಎಲ್ಲಾ ಕ್ರಮಗಳನ್ನು ಅನುಸರಿಸಿಯು ನಿಮ್ಮ ಕುಕ್ಕರ ಸ್ಫೋಟ (Cooker Blast) ಗೊಂಡರೆ ಕೂಡಲೇ 1800114000 (or) 1915 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕಂಪ್ಲೇಂಟ್ ರಿಜಿಸ್ಟರ್ ಮಾಡಬಹುದು.

advertisement

Leave A Reply

Your email address will not be published.