Karnataka Times
Trending Stories, Viral News, Gossips & Everything in Kannada

Ration Card: ಮೇ 1ರಿಂದ ಜಾರಿಯಾಗುತ್ತಿದೆ ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್!

advertisement

ದೇಶದಲ್ಲಿ ಸಾಕಷ್ಟು ಕಡೆಗಳಲ್ಲಿ ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಹಾಗೂ ಗೋಧಿ ನೀಡುವ ಸಂದರ್ಭದಲ್ಲಿ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿತ್ತು. ಆದರೆ ಮುಂದೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಜಾರಿಗೆ ಬಂದಿರುವಂತಹ ಹೊಸ ನಿಯಮಗಳ ಪ್ರಕಾರ ಎರಡನ್ನು ಕೂಡ ಸಮ ಪ್ರಮಾಣದಲ್ಲಿ ನೀಡಲಾಗುವುದು ಎಂಬುದಾಗಿ ತಿಳಿದು ಬಂದಿದೆ.

ಇದರ ಜೊತೆಗೆ ಈ ರೀತಿ ಮೋಸ ಮಾಡುವಂತಹ ಯಾವುದೇ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳ ಲೈಸೆನ್ಸ್ ಅನ್ನು ರದ್ದುಗೊಳಿಸುವಂತಹ ಸಾಧ್ಯತೆ ಕೂಡ ಇದೆ ಎಂಬುದಾಗಿ ತಿಳಿದು ಬಂದಿದೆ. ಮೇ 1ನೇ ತಾರೀಖಿನಿಂದ ಈ ರೀತಿಯ ಕಟ್ಟುನಿಟಿನ ಕ್ರಮಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಜಾರಿಗೆ ತರುವಂತಹ ಕುರಿತಂತೆ ಸರ್ಕಾರ ಯೋಚನೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.

 

Image Source: informalnewz

 

ಇನ್ನು 2024ರ ನಿಯಮಗಳ ಪ್ರಕಾರ ರೇಷನ್ (Ration) ಅನ್ನು ಕೂಡ ಪ್ರಮಾಣದಲ್ಲಿ ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಲಾಕ್ಡೌನ್ ಸಂದರ್ಭದಲ್ಲಿ ನೀವು ಗಮನಿಸಿರಬಹುದು ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಉಚಿತ ರೇಷನ್ (Free Ration) ಭಾಗ್ಯವನ್ನು ಪ್ರಾರಂಭ ಮಾಡಿತ್ತು. ಆದರೆ ಈಗ ಅದರ ಲಾಭವನ್ನು ಅಗತ್ಯ ಇರುವವರಿಗಿಂತ ಹೆಚ್ಚಾಗಿ ಹಣ ಇರುವವರು ಹಾಗೂ ಸರ್ಕಾರಿ ಕೆಲಸದಲ್ಲಿ ಇರುವವರು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

advertisement

ಇದು ಕಾನೂನು ಪ್ರಕಾರ ಒಂದು ರೀತಿಯಲ್ಲಿ ಅಪರಾಧ ಎಂದು ಹೇಳಬಹುದಾಗಿದೆ. ಕೆಲವರಂತೂ ತಮ್ಮ ಕಾರಿನಲ್ಲಿ ರೇಷನ್ ಕಾರ್ಡ್ (Ration Card) ಗೆ ಸಿಗುವಂತಹ ಪಡಿತರವನ್ನು ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಗೆ ಹೋಗುತ್ತಿದ್ದಾರೆ. ಇಂಥವರ ಹೆಸರನ್ನು ಲಿಸ್ಟ್ ಮಾಡಿದ್ದು ಈ ಯೋಜನೆಯಿಂದ ವಂಚಿತರಾಗುವಂತೆ ಮಾಡುವುದಕ್ಕಾಗಿ ಸರ್ಕಾರ ಆಹಾರ ಇಲಾಖೆಯ ಮೂಲಕ ತಯಾರಿ ನಡೆಸಿದೆ.

ಇದೇ ಕಾರಣಕ್ಕಾಗಿ ಮೇ 1ನೇ ತಾರೀಖಿನಿಂದ ಈ ನಿಯಮಗಳನ್ನು ಜಾರಿಗೆ ತರುವ ಮೂಲಕ ರೇಷನ್ ನ ಅಗತ್ಯ ಇರುವವರಿಗೆ ಮಾತ್ರ ಆಹಾರವನ್ನು ತಲುಪಿಸುವಂತಹ ಹಾಗೂ ಈ ರೀತಿ ಅನಧಿಕೃತವಾಗಿ ಪಡಿತರವನ್ನು ಪಡೆದುಕೊಳ್ಳುತ್ತಿರುವವರ ವಿರುದ್ಧ ಹಾಗೂ ಇದನ್ನು ಪೂರೈಕೆ ಮಾಡುವಂತಹ ನ್ಯಾಯ ಬೆಲೆ ಅಂಗಡಿಯವರು ವಿರುದ್ಧ ಆಹಾರ ಇಲಾಖೆ ಕಠಿಣ ಆಕ್ಷನ್ ತೆಗೆದುಕೊಳ್ಳಲು ಸಿದ್ಧವಾಗಿದೆ.

ರೇಷನ್ ಕಾರ್ಡ್ ಲಿಸ್ಟಿನಲ್ಲಿ ನಿಮ್ಮ ಹೆಸರು ನೋಡೋದು ಹೇಗೆ?

 

Image Source: ET Government

 

  • ಇದಕ್ಕಾಗಿ ನೀವು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಬೇಕಾಗಿರುತ್ತದೆ.
  • ಇದಾದ ನಂತರ ಇಲ್ಲಿ ರೇಷನ್ ಕಾರ್ಡ್ (Ration Card) ಅರ್ಹತಾ ವಿಭಾಗದ ಆಪ್ಷನ್ ನಿಮಗೆ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇದಾದ ನಂತರ ನಿಮ್ಮ ಜಿಲ್ಲೆ ನಗರ ಹಾಗು ನಂತರ ನಿಮ್ಮ ಗ್ರಾಮದಲ್ಲಿ ಇರುವಂತಹ ನ್ಯಾಯಬೆಲೆ ಅಂಗಡಿಯ ವಿವರಗಳನ್ನು ಹಾಕಬೇಕಾಗಿರುತ್ತದೆ.
  • ರೇಷನ್ ಕಾರ್ಡ್ ವಿಭಾಗದಲ್ಲಿ ನಿಮ್ಮ ಹೆಸರು ಇದ್ರೆ ಆ ಸೂಚಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಲಿಸ್ಟಿನಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ನೀವು ನೋಡಬಹುದಾಗಿದೆ.

advertisement

Leave A Reply

Your email address will not be published.