Karnataka Times
Trending Stories, Viral News, Gossips & Everything in Kannada

Ration Card: ಪಡಿತರ ಚೀಟಿ ಅಪ್ಡೇಟ್ ಬಗ್ಗೆ ಹೊಸ ನಿಯಮ ಜಾರಿಗೆ ತಂದ ರಾಜ್ಯ ಸರ್ಕಾರ!

advertisement

ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ (Ration Card) ಅದರಲ್ಲೂ ಬಿಪಿಎಲ್ ಕಾರ್ಡ್ (BPL Card) ವಿತರಣೆ ಮಾಡಲಾಗುತ್ತದೆ. ದೇಶದಲ್ಲಿ ಯಾವೊಬ್ಬ ವ್ಯಕ್ತಿ ಕೂಡ ಹಸಿವಿನಿಂದ ಸಾಯಬಾರದು ಎನ್ನುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು ಉಚಿತ ಪಡಿತರವನ್ನು ಅಂತಹ ಕುಟುಂಬಗಳಿಗೆ ನೀಡಲಾಗುತ್ತದೆ. ಇಷ್ಟು ದಿನಗಳ ಕಾಲ ಪಡಿತರ ಪಡೆದುಕೊಳ್ಳುವುದಕ್ಕೆ ಅತಿ ಕಡಿಮೆ ಮೊತ್ತವನ್ನು ಪಾವತಿ ಮಾಡಬೇಕಿತ್ತು. ಆದರೆ ಕರೋನ ಸಮಯದಿಂದ ಕೇಂದ್ರ ಸರ್ಕಾರ ಉಚಿತವಾಗಿಯೇ ಅಕ್ಕಿ ವಿತರಣೆ ಮಾಡಿಕೊಂಡು ಬಂದಿದೆ ಅದನ್ನು ಈಗ 2025 ಮುಂದುವರಿಸುವುದಾಗಿಯು ತಿಳಿಸಿದೆ.

Ration Card ಇಲ್ದೆ ಈ ಕೆಲಸ ಆಗಲ್ಲ:

ಪಡಿತರ ಚೀಟಿ (Ration Card) ಎನ್ನುವುದು ಈಗ ಕೇವಲ ಪಡಿತರ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಮಾತ್ರವಲ್ಲದೆ ಇತರ ದಾಖಲೆ ಆಗಿಯು ಬಳಸಲಾಗುತ್ತದೆ. ಡ್ರೈವಿಂಗ್ ಲೈಸೆನ್ಸ್ (Driving License), ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card), ಮೊದಲಾದವುಗಳಿಗೆ ವಿಳಾಸ ದಾಖಲೆಯಾಗಿ ಸರ್ಕಾರ ನೀಡಿರುವ ರೇಷನ್ ಕಾರ್ಡ್ ಬಳಕೆ ಮಾಡಬಹುದು. ಆಯುಷ್ಮಾನ್ ಕಾರ್ಡ್ (Ayushman Card) ಪಡೆದುಕೊಳ್ಳುವುದಕ್ಕೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಡಿ ಬಿ ಟಿ (DBT)  ಹಣ ಪಡೆದುಕೊಳ್ಳುವುದಕ್ಕೂ ಕೂಡ ರೇಷನ್ ಕಾರ್ಡ್ ಪ್ರಮುಖ ಆಧಾರವಾಗಿದೆ.

Update ಬಗ್ಗೆ ಮಾಹಿತಿ:

 

advertisement

Image Source: The Indian Express

 

ಸರ್ಕಾರದ ಕೆಲವು ಯೋಜನೆಗಳ ಪ್ರಯೋಜನ ಸಿಗಬೇಕು ಅಂದ್ರೆ ಪಡಿತರ ಚೀಟಿ ಅಪ್ಡೇಟ್ ಆಗಿರುವುದು ಕೂಡ ಅಷ್ಟೇ ಮುಖ್ಯ ಹಾಗಾಗಿ ನೀವು ಆನ್ಲೈನ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಅಪ್ಡೇಟ್ ಕೂಡ ಮಾಡಿಕೊಳ್ಳಬಹುದು. ನೀವು ರೇಷನ್ ಕಾರ್ಡ್ ಅಪ್ಡೇಟ್ (Ration Card Update) ಮಾಡಿಕೊಂಡರೆ 30 ರಿಂದ 45 ದಿನಗಳ ಒಳಗೆ ಅಪ್ಡೇಟೆಡ್ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ಇದೆ.

Ration Card-Aadhaar Card Link:

 

Image Source: Business League

 

ನೀವು ಇನ್ನು ಮುಂದೆ ರೇಷನ್ ಉಚಿತ (Free Ration) ವಾಗಿ ಪಡೆದುಕೊಳ್ಳಬೇಕು ಅಂದ್ರೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಲಿಂಕ್ ಆಗಿರಲೇಬೇಕು. ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುವುದು ಕೂಡ ಅಷ್ಟೇ ಮುಖ್ಯ. ಆಧಾರ್ ಕಾರ್ಡ್ (Aadhaar Card) ವಿವರಗಳನ್ನು ಒಳಗೊಂಡಿರುವ ಅಪ್ಡೇಟ್ ಫಾರ್ಮ್ ಒಂದನ್ನು ನೀವು ನಿಮ್ಮ ಸ್ಥಳೀಯ ಆಹಾರ ಇಲಾಖೆಗೆ ಹೋಗಿ ತೆಗೆದುಕೊಂಡು ಅದರಲ್ಲಿ ಆಧಾರ್ ಕಾರ್ಡ್ ವಿವರವನ್ನು ಪರಿಶೀಲಿಸಿ, ಫಿಂಗರ್ ಪ್ರಿಂಟ್ ನೀಡಬೇಕಾಗುತ್ತದೆ.. ಈ ರೀತಿ ಮಾಡುವುದರಿಂದ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತದೆ. ಇನ್ನು ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಅಥವಾ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.