Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಇದ್ದವರಿಗೆ ಮತ್ತೊಂದು ಬಂಪರ್ ಸಿಹಿಸುದ್ದಿ!

advertisement

ಬಡ ವರ್ಗದ ಜನತೆಗೆ ಹಸಿವು ನಿಗಿಸಿಕೊಳ್ಳಲು ಆಹಾರ ಇಲಾಖೆಯು ಆಹಾರ ಧಾನ್ಯ ಗಳನ್ನು ವಿತರಣೆ ಮಾಡುತ್ತಿದೆ. ಬಡ ವರ್ಗಕ್ಕಿಂತ ಕೆಳಗಿರುವ ಜನತೆಗೆ ಉಚಿತವಾಗಿ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದು‌ ಅಂತ್ಯೊದಯ, ಬಿಪಿಎಲ್ ಕಾರ್ಡ್(BPL Card), ಮತ್ತು ಎಪಿಎಲ್ ಕಾರ್ಡು (APL Card) ಗಳಾಗಿ ವಿಂಗಡಿಸಿ ಅರ್ಹತೆಯ ಮೇರೆಗೆ ಆಹಾರ ಧಾನ್ಯ ನೀಡಲಾಗುತ್ತಿದೆ.

ಅರ್ಹತೆಗಳ ಆಯ್ಕೆಗೆ ಮೇರೆಗೆ ಹಂಚಿಕೆ:

ಬಿಪಿಎಲ್ ರೇಷನ್ ಕಾರ್ಡ್ (Ration Card) ಅಥವಾ ಪಡಿತರ ಚೀಟಿಯನ್ನು ಪಡೆಯಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಕೆಲವು ನಿಯಮವನ್ನು ಜಾರಿಗೆ‌ ತಂದಿದ್ದು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿ ವ್ಯಕ್ತಿಯ, ಮನೆಯ ಆದಾಯ ನಿಗದಿ‌ಪಡಿಸಿ ಈ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಪಡಿತರ ವಿತರಣೆ:

 

 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೀಡುವ ಆಹಾರ ಧಾನ್ಯಗಳ ವಿತರಣೆ ಯಾಗುತ್ತಿದ್ದು ಈಗಾಗಲೇ ಪಡಿತರ ಚೀಟಿದಾರರಿಗೆ ಮಾರ್ಚ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ. ಅದೇ‌ ರೀತಿ‌ ಮಾರ್ಚ್ ತಿಂಗಳ ಹೆಚ್ಚುವ ಧಾನ್ಯದ ಮೊತ್ತವು ಕೆಲವರ ಖಾತೆಗೆ ಜಮೆಯಾಗಿದೆ.

advertisement

ಎಷ್ಟು ಧಾನ್ಯ ವಿತರಣೆ ಯಾಗಿದೆ?

ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‍ಗೆ 35 ಕೆ.ಜಿ ಅಕ್ಕಿ, ಮತ್ತು‌ ಬಿ.ಪಿ.ಎಲ್ ಕಾರ್ಡ್ (BPL Card) ಹೊಂದಿರುವ ಚೀಟಿದಾರರಿಗೆ ಅಕ್ಕಿ ಉಚಿತವಾಗಿ ವಿತರಣೆ ಆಗಿದೆ. ಅನ್ನಭಾಗ್ಯ ಯೋಜನೆ (Anna Bhagya Yojana) ಯಡಿ ಈಗಾಗಲೇ ಪಡಿತರ ದೊಂದಿಗೆ ಹಣವು ಕೂಡ ಬಿಡುಗಡೆ ಯಾಗುತ್ತಿದ್ದು ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಆಗಿದ್ದಲ್ಲಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿ ಕೊಳ್ಳಬಹುದಾಗಿದೆ.

ಈ ಕೆಲಸ ಕಡ್ಡಾಯ:

ಪಡಿತರ ಕಾರ್ಡುಗಳ ಸದಸ್ಯರು ಹಣ ಜಮೆಯಾಗಬೇಕಿದ್ರೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದ್ದರಿಂದ ಯಾರಾದರೂ ರೇಷನ್ ಕಾರ್ಡ್ (Ration Card) ಅನ್ನು ಆಧಾರ್ ಕಾರ್ಡ್‌ನೊಂದಿಗೆ ಇನ್ನೂ ಲಿಂಕ್ ಮಾಡದಿದ್ದರೆ ತಕ್ಷಣ ಈ ಕಾರ್ಯವನ್ನು ಪೂರ್ಣ ಗೊಳಿಸಬೇಕಿದೆ.

ಹೊಸ ಕಾರ್ಡ್ ವಿತರಣೆ

ಕಳೆದ ಕೆಲವು ತಿಂಗಳಿನಿಂದ‌ ಹೊಸ ಕಾರ್ಡ್​ಗಳನ್ನು ಪಡೆಯಲು ಜನರು ಅರ್ಜಿ ಸಲ್ಲಿಕೆಗಾಗಿ ಕಾಯುತ್ತಿದ್ದರು. ಇದೀಗ ಹೊಸದಾಗಿ ಸುಮಾರು 2.95 ಲಕ್ಷ ಕಾರ್ಡ್​ಗಳನ್ನು ನೀಡಲು ತೀರ್ಮಾನಿಸಲಾಗಿದ್ದು, ಇವುಗಳನ್ನು ಸರಿಯಾದ ಪರಿಶೀಲನೆಯೊಂದಿಗೆ, ಕಾರ್ಡ್‌ಗಳ ವಿತರಣೆ ಯಾಗುತ್ತದೆ.‌ ಅದೇ ರೀತಿ ಹೊಸ ಕಾರ್ಡ್ ಗೂ ಅರ್ಜಿ ಹಾಕಬಹುದಾಗಿದೆ.

advertisement

Leave A Reply

Your email address will not be published.