Karnataka Times
Trending Stories, Viral News, Gossips & Everything in Kannada

Bangalore PG: ಬೆಂಗಳೂರಿನಲ್ಲಿ ಪಿಜಿ ಮಾಡಬೇಕು ಅಂದುಕೊಂಡವರು ಈ ನಿಯಮ ಓದಲೇ ಬೇಕು

advertisement

ಇತ್ತೀಚಿನ ದಿನದಲ್ಲಿ ಕೆಲಸಕ್ಕೆಂದು ದೂರದ ಊರಿನಲ್ಲಿ ವಾಸ ಮಾಡುವ ಅನೇಕ ಯುವಕ ಯುವತಿಯರು ಪಿಜಿ (PG) ಸ್ಟೇ ಮಾಡುವುದು ಕಾಣಬಹುದು. ತಾವೇ ಸ್ವಂತ ಹಣ ಹಾಕಿ ರೂಂ‌ ಮಾಡಿದರೆ ಈಗ ಆ ಖರ್ಚನ್ನು ಭರಿಸುವುದು ಕಷ್ಟ ಅಷ್ಟು ಮಾತ್ರವಲ್ಲದೇ ಅಡುಗೆ, ಕ್ಲೀನಿಂಗ್ ಎಲ್ಲ ಕೆಲಸವನ್ನು ಕೂಡ ಮಾಡಬೇಕಾಗುತ್ತದೆ ಅದಕ್ಕಾಗಿ ಅನೇಕ ಯುವಕ ಯುವತಿಯರು ಪಿಜಿ ಮೊರೆ ಹೊಗುತ್ತಿದ್ದಾರೆ. ಹಾಗಾಗಿ ಪಿಜಿ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ ಎನ್ನಬಹುದು.

ಹಳ್ಳಿ ಮತ್ತುಗ್ರಾಮೀಣ ಭಾಗದಿಂದ ಕೆಲಸ, ಓದು ಇತ್ಯಾದಿ ಕಾರಣಕ್ಕಾಗಿ ಬರುತ್ತಿದ್ದವರಿಗೆ ನಗರ ಪ್ರದೇಶಗಳ ಪಿಜಿ ಸಿಸ್ಟಂ ಬಹಳ ಅನುಕೂಲಕರವಾಗಿದೆ. ಕಡಿಮೆ ಹಣಕ್ಕೆ ಲಭ್ಯವಾಗುವ ಪಿಜಿಗಳಲ್ಲೆ ಊಟ ತಿಂಡಿ ಸೌಕರ್ಯ ಸಹ ನೀಡಲಾಗುತ್ತಿದ್ದು ಅನೇಕ ಗ್ರಾಹಕರಿಗೆ ಇ ಕ್ರಮ ಬಹಳ ಅನುಕೂಲ ಆಗಿದೆ ಎನ್ನಬಹುದು. ಆದರೆ ಇದೇ ಪಿಜಿ ನಲ್ಲಿ ಒಂದೆರೆಡು ದಿನ ಉಳಿಯುವ ಬಗ್ಗೆ ಪಿಜಿ ನಿಯಮಗಳನ್ನು ಬದಲಾಯಿಸಲು ಬೆಂಗಳೂರಿನಲ್ಲಿ ತೀರ್ಮಾನಿಸಲಾಗಿದೆ.

ಅವಕಾಶ ಇಲ್ಲ

advertisement

ಒಂದೆರೆಡು ದಿನದ ಮಟ್ಟಿಗೆ ಬೆಂಗಳೂರು ಬರೋರಿಗೂ ಪಿಜಿ (Bangalore PG) ವ್ಯವಸ್ಥೆ ಇಷ್ಟು ದಿನಗಳ ವರೆಗೆ ಬೆಂಗಳೂರಿನಲ್ಲಿ ಇತ್ತು ಆದರೆ ಇನ್ನು ಮುಂದೆ ಈ ವ್ಯವಸ್ಥೆ ಬದಲಾಗಲಿದೆ. ಎರಡು ಮೂರು ದಿನಕ್ಕೆ ತಂಗುವವರಿಗೆ ಪಿಜಿಯಲ್ಲಿ ಅವಕಾಶ ಇರಲಾರದು. ಹಾಗಾಗಿ ಸಂದರ್ಶನ ಅಥವಾ ಇತರ ಗೆಳೆಯ ಗೆಳತಿಯರನ್ನು ಭೇಟಿಯಾಗಲು ಇಲ್ಲವೇ ಪ್ರವಾಸಕ್ಕೆಂದು ಬರುವವರಿಗೆ ಈ ನಿಯಮ ಕಷ್ಟವಾಗಲಿದೆ. ಅಷ್ಟಕ್ಕೂ ಈ ನಿಯಮ ಜಾರಿಗೆ ತರಲು ಕೂಡ ನಿರ್ದಿಷ್ಟ ಉದ್ದೇಶ ಇರುವುದು ಕಾಣಬಹುದು.

ಕಾರಣ ಏನು?

ಪಿಜಿ (Bangalore PG) ಕಡಿಮೆ ದಿನಕ್ಕೆ ಅವಕಾಶ ನೀಡದಕ್ಕೆ ಮುಖ್ಯ ಕಾರಣ ಬೆಂಗಳೂರಿನ ರಾಮೇಶ್ವರಂ ಕೆಫೆ (Rameswaram Cafe) ಅವಘಡವಾಗಿದೆ. ಈ ಘಟನೆ ನಡೆದ ಬಳಿಕ ಹೊರಗಿನವರು ಬಂದು ಉಳಿಯುವ ಬಾಡಿಗೆದಾರರ ಮೇಲೆ ಅಧಿಕ ನಿಘ ವಹಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಪಿಜಿಯಲ್ಲಿ ಸ್ಟೆ ಮಾಡಬೇಕು ಎಂದಾದರೆ ಪೋಷಕರ ಅನುಮತಿ ಪಡೆಯಬೇಕು. ಅಡ್ರಸ್ (Address) ಹಾಗೂ ಆಧಾರ್ ಕಾರ್ಡ್ (Aadhaar Card) ಪ್ರತಿ ಸಹ ನೀಡಬೇಕು ಎಂಬ ನಿಯಮವನ್ನು ಬೆಂಗಳೂರು ನಗರದಾದ್ಯಂತ ಜಾರಿಗೆ ತರಲಾಗುತ್ತಿದೆ.

ಪೋಷಕರ ದೂರವಾಣಿ ಸಂಖ್ಯೆ, ಬಾಡಿಗೆ ವಾಸ ಮಾಡುವವರ ವಾಸ್ತವ್ಯ ದ ಇತರ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಸ್ವತಃ ಪೊಲೀಸ್ ಇಲಾಖೆಯೆ ಎಚ್ಚೆತ್ತುಕೊಳ್ಳುವಂತೆ ಪಿಜಿ ಮಾಲಿಕರಿಗೆ ಸುತ್ತೊಲೆ ಹೊರಡಿಸಿದ್ದು ಪಿಜಿ ಮಾಲಿಕರಿಗೆ ಈ ನಿಯಮ ಪಾಲಿಸಬೇಕಾಗುತ್ತದೆ. ಈ ಮೂಲಕ ಹೆಚ್ಚುತ್ತಿರುವ ಪ್ರಕರಣ ಕಡಿಮೆ ಮಾಡಲು ಈ ನಿಯಮ ಪಾಲಿಸಲು ಎಲ್ಲ ಪಿಜಿ ಮಾಲಿಕರು ಸ್ಚಯಂ ನಿರ್ಧಾರ ಸಹ ಕೈ ಗೊಂಡಿದ್ದಾರೆ.

advertisement

Leave A Reply

Your email address will not be published.