Karnataka Times
Trending Stories, Viral News, Gossips & Everything in Kannada

Home Loan Insurance: ಮನೆ ಸಾಲದ ವಿಮೆ ಬಗ್ಗೆ ತಪ್ಪದೇ ಈ‌ ಮಾಹಿತಿ ಓದಿರಿ

advertisement

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುತ್ತಾರೆ ಹಿರಿಯರು ಅದಕ್ಕೆ ಮುಖ್ಯ ಕಾರಣ ಇವೆರಡು ಕೂಡ ಬಹಳ ಕಷ್ಟದ ಕೆಲಸ ಎಂಬುದನ್ನು ತಿಳಿಸಲಾಗುತ್ತದೆ. ಅದೇ ರೀತಿ ಮನೆ ಕಟ್ಟಬೇಕು ಎಂದು ಅನೇಕರಿಗೆ ಆಸೆ ಇದ್ದರೂ ಕೂಡ ಅದಕ್ಕೊಂದು ಸರಿಯಾದ ಸಮಯ ಎಂದು ಸಿಕ್ಕಿರಲಾರದು ಹಣಕಾಸಿನ ಸಮಸ್ಯೆ ಕೂಡ ಕಾಡಿರುತ್ತದೆ ಹಾಗಾಗಿ ಮನೆ ಕಟ್ಟಬೇಕು ಅಂದುಕೊಂಡವರು ಹೆಚ್ಚಾಗಿ ಲೋನ್ (Loan) ಮೊರೆ ಹೊಗಿತ್ತಾರೆ. ಬಡ್ಡಿ ಪ್ರಮಾಣ ಅಧಿಕ ಇದ್ದಾಗ ಕಟ್ಟುವುದು ಸಹ ಒಂದು ಸಮಸ್ಯೆಯೆ ಆಗಿದೆ ಹಾಗಾಗಿ ಮನೆ ಕಟ್ಟಿದ್ದ ಮೇಲೆ ಲೋನ್ (Loan) ಕಟ್ಟಲು ಅನೇಕ ವರ್ಷವೇ ಬೇಕಾಗುತ್ತದೆ.

ಈ ಅನೇಕ ವರ್ಷದ ಅವಧಿಯಲ್ಲಿ ನಿಮ್ಮ ಆರೋಗ್ಯ ಸಮಸ್ಯೆ ಅಥವಾ ಮನೆಗೆ ಯಾವುದಾದರೂ ಸಮಸ್ಯೆ ಬಂದರೆ ಬಳಿಕ ಏನು ಮಾಡಲಾಗದೆ ನಿಸ್ಸಾಹಯಕರಾಗುತ್ತೇವೆ ಹಾಗಾಗಿ ಈ ಮಾಹಿತಿ ಹೊಸದಾಗಿ ಮನೆ ಕಟ್ಟುವವರಿಗೆ ಬಹಳ ಅನುಕೂಲ ಆಗಲಿದೆ. ಮನುಷ್ಯರ ಆಯುಷ್ಯಕ್ಕೆ ವಿಮೆ ಕಾರ್ಡ್ (Insurance Card) ಇರುವಂತೆ ಮನೆಗೂ ಕೂಡ ಇನ್ಶೂರೆನ್ಸ್ (Insurance) ಇರಲಿದೆ. ಈ ಇನ್ಶೂರೆನ್ಸ್ ಯಾಕೆ ಬೇಕು ಮನೆಯ ಯಜಮಾನನಿಗೆ ಇದು ಹೇಗೆ ಉಪಯುಕ್ತ ಆಗಲಿದೆ ಎಂದು ತಿಳಿಯಿರಿ.

ಯಾಕೆ ಈ ಇನ್ಶೂರೆನ್ಸ್ ಅಗತ್ಯ:

 

 

advertisement

ಹೋಂ ಲೋನ್ ಇನ್ಶೂರೆನ್ಸ್ (Home Loan Insurance) ಎನ್ನುವ ಪ್ರಕಾರಗಳು ಅನೇಕ ಜನರಿಗೆ ಈ ಮನೆಯ ವಿಮೆ ಯಾಕಾಗಿ ಇರುತ್ತದೆ ಇದರ ಪ್ರಯೋಜನ ಏನೆಂಬುದೇ ತಿಳಿಯಲಾರದು. ಈ ಇನ್ಶೂರೆನ್ಸ್ ನ ಮುಖ್ಯ ಕಾರಣ ಮನೆಯ ಲೋನ್  (Home Loan) ಕಟ್ಟಬೇಕಾದ ಅಕಸ್ಮಾತ್ ಆಗಿ ಮರಣ ಹೊಂದಿದ್ದರೆ ಆ ಲೋನ್ ತೀರಿಸಲು ಈ ಇನ್ಶುರೆನ್ಸ್ ಸಾಕಷ್ಟು ಉಪಯುಕ್ತ ಆಗಲಿದೆ. ಅಂಗವೈಕಲ್ಯ, ಮರಣ, ಬೆಂಕಿ ಅವಘಡ ಆದಾಗಲೂ ಈ ಇನ್ಶೂರೆನ್ಸ್ ಸಹಕಾರಿ ಆಗಲಿದೆ. ಇದರಿಂದ ಮನೆಯೂ ಸುರಕ್ಷಿತವಾಗಿರುವ ಜೊತೆಗೆ ಮನೆ ಕಟ್ಟುವವರು ನೆಮ್ಮದಿಯಿಂದ ಇರಬಹುದು.

ಯಾವಾಗ ಮಾಡಿಸಬೇಕು?

ಈ ಒಂದು ಹೋಂ ಲೋನ್ ಇನ್ಶೂರೆನ್ಸ್ (Home Loan Insurance) ಅನ್ನು ನೀವು ಗೃಹಸಾಲ ಮಡುವಾಗಲೇ ಮಾಡಿ ಇಟ್ಟುಕೊಳ್ಳಬಹುದು. ಇದರಲ್ಲಿ ಸಾಲದ ಅವಧಿ, ಸಾಲ ಪಡೆದವನ ವಯಸ್ಸು ಆರೋಗ್ಯ ಇತರ ಅಂಶಗಳ ಒಟ್ಟು ಪ್ಯಾಕೇಜ್ ಸಿಗಲಿದೆ. ಹಾಗಾಗಿ ವಿಮೆ ವೆಚ್ಚ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಲಿದೆ. ಹಾಗಾಗಿ ಸಾಲ ಕಟ್ಟುವ ಅವಧಿ ಅಥವಾ ಸಾಲ (Loan) ಪಡೆದ ನಂತರ ಕೂಡ ನೀವು ಇನ್ಶೂರೆನ್ಸ್ ಅನ್ನು‌ಮಾಡಬಹುದು.

ವ್ಯತ್ಯಾಸ ಇದೆ:

ಅನೇಕರು ಗೃಹ ವಿಮೆ ಮತ್ತು ಗೃಹಸಾಲವಿಮೆ (Home Loan Insurance) ಎರಡು ಒಂದೇ ಎಂದು ಅಂದುಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವೆರಡು ಕೂಡ ಬೇರೆ ಬೇರೆ ಎನ್ನಬಹುದು. ಗೃಹ ವಿಮೆಯೂ ನಿಮ್ಮ ಮನೆಗೆ ರಕ್ಷಣಾತ್ಮಕ ಉದ್ದೇಶಕ್ಕಾಗಿ ಗೃಹ ಸಾಲ ವಿಮೆಯನ್ನು ಆಕಸ್ಮಿಕ ಘಟನೆಯಿಂದ ಸಾಲ ನೀಡಲಾಗದ ಪರಿಸ್ಥಿತಿ ಬಂದರೆ ನೆರವಾಗುವಂತದ್ದಾಗಿದೆ. ಇದರಲ್ಲಿ HLPP ಕೂಡ ಇರಲಿದ್ದು ಹೆಚ್ಚುವರಿ ಪ್ಲ್ಯಾನ್ ಖರೀದಿ ಮಾಡಿದರೆ ಅಧಿಕ ಕವರೆಜ್ ಸಹ ಸಿಗಲಿದೆ. ಅದೇ ರೀತಿ ಈ‌ವಿಮೆಗೆ ಆಯಾ ಬ್ಯಾಂಕಿನ ನಿಯಮಾನುಸಾರ ನಿಯಮ ಹಾಗೂ ಷರತ್ತುಗಳು ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗಲಿದೆ.

advertisement

Leave A Reply

Your email address will not be published.