Karnataka Times
Trending Stories, Viral News, Gossips & Everything in Kannada

Summer Holidays: ಬೇಸಿಗೆ ರಜೆ ಸಂದರ್ಭಕ್ಕೆ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

advertisement

ಮಕ್ಕಳು ಪ್ರತಿದಿನ ಶಾಲಾ ಕೊಠಡಿ, ಪುಸ್ತಕ, ಪರೀಕ್ಷೆ, ಓದು ಇತ್ಯಾದಿಯನ್ನೇ ಅವಲಂಬಿಸಿ ಕೊಂಡ ಮಕ್ಕಳಿಗೆ ಬೇಸಿಗೆ ರಜೆ ಯಾವಾಗ ? ಓದಿನಿಂದ ಮುಕ್ತಿ ಯಾವಾಗ ಸಿಗುತ್ತೆ ಎಂದು ವಿದ್ಯಾರ್ಥಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಬೇಸಿಗೆ ರಜೆ ಆರಂಭ ವಾಗಲಿದ್ದು ಮಕ್ಕಳಿಗೆ ಇನ್ನೇನು ಪರೀಕ್ಷೆ ಕೂಡ ಮುಗಿಯಲಿದೆ. ರಾಜ್ಯದಲ್ಲಿ ಮುಂದಿನ ತಿಂಗಳಿನಿಂದ ಶಾಲೆಗಳಿಗೆ ಬೇಸಿಗೆ ರಜೆ ಸಿಗಲಿದೆ .

ಸರಕಾರಿ ಶಾಲೆಗೆ ಉತ್ತಮ‌ ಪ್ರತಿಕ್ರಿಯೆ:

 

 

ಇಂದು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ನಿಟ್ಟಿನಲ್ಲಿ ‌ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೆ ಬಂದಿದೆ. ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡುವಲ್ಲಿ ವಿದ್ಯಾರ್ಥಿಗಳತ್ತ ಗಮನ ಸೆಳೆಯಲು ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ರೀತಿಯ ಬದಲಾವಣೆ ಗಳನ್ನು ಕೂಡ ಮಾಡಿಕೊಂಡಿದೆ. ಉಚಿತ ಪಠ್ಯ ಪುಸ್ತಕ (Free Text Book), ಉಚಿತ ಬ್ಯಾಗ್ (Free Bag), ಉಚಿತ ಶೂ (Free Shoe), ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು‌ ರೀತಿಯ ಸೌಲಭ್ಯಗಳು ಕೂಡ ದೊರಕುತ್ತವೆ.

advertisement

ರಜೆಯಲ್ಲೂ ಬಿಸಿಯೂಟ ವಿತರಣೆ?

ಈಗಾಗಲೇ ಹೆಚ್ಚಿನ ಕಡೆ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗಿದೆ. ಹಾಗಾಗಿ ಬರ ತಾಪಮಾನ ಗಮನದಲ್ಲಿ ಇಟ್ಟುಕೊಂಡು ಬೇಸಿಗೆ ರಜೆಯಲ್ಲೂ (Summer Holidays) ಸರಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಮುಂದುವರಿಸಲು ಚಿಂತನೆ ಕೂಡ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು‌ ಈ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲಾಗುವುದು ಎಂದಿದ್ದಾರೆ.

ರಜೆ ಯಾವಾಗ?

 

 

ಈ ಬಾರಿ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಎಪ್ರಿಲ್‌ 11 ರಿಂದ ಮೇ 28 ರ ವರೆಗೆ ಬೇಸಿಗೆ ರಜೆ (Summer Holidays) ಯನ್ನು ಘೋಷಣೆ ಮಾಡಲಾಗಿದೆ. ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಬಿಸಿ ಯುಟದ ಆಯೋಜನೆ ಈಗಾಗಲೇ ಆರಂಭ ವಾಗಿದ್ದು ಎಲ್ಲ ಮಕ್ಕಳಿಗೂ ಪೌಷ್ಟಿಕ ಆಹಾರ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ‌ತರಲಾಗಿದೆ. ಮಕ್ಕಳಿಗೆ ಅವರ ಪೌಷ್ಟಿಕಾಂಶದ ಗುಣಮಟ್ಟ ವನ್ನು ಸುಧಾರಿಸಲು PM POSHA ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತರಲಾಗಿದೆ.ಈ ನಿಟ್ಟಿನಲ್ಲಿ ರಜೆಯಲ್ಲೂ ಕೂಡ ಮಕ್ಕಳಿಗೆ ಬಿಸಿಯುಟದ ಭಾಗ್ಯ ಸಿಗಬಹುದು.

advertisement

Leave A Reply

Your email address will not be published.