Karnataka Times
Trending Stories, Viral News, Gossips & Everything in Kannada

Tata Tiago EV: ಟಾಟಾದ ಈ ಕಾರಿನ ಮೇಲೆ 65 ಸಾವಿರ ಡಿಸ್ಕೌಂಟ್, ಮುಗಿಬಿದ್ದ ಜನ!

advertisement

ಟಾಟಾ ಮೋಟರ್ಸ್ (Tata Motors) ಇತ್ತೀಚೆಗೆ ಬಹಳ ಪ್ರಖ್ಯಾತವಾದ ಮಾಡೆಲ್ ಗಳನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲೂ ಇವಿ ವಾಹನಗಳು ಆರಂಭವಾದ ಮೇಲೆ ಟಾಟಾ ಮೋಟರ್ಸ್ ತನ್ನ ಬಹಳಷ್ಟು ಮಾದರಿಗಳಲ್ಲಿ ಇವಿ ಆಯ್ಕೆಯನ್ನು ನೀಡಿ ಎಲ್ಲವೂ ಕೂಡ ಬಹಳ ಜನ ಮನ್ನಣೆ ಗಳಿಸುತ್ತಿದೆ.

ಈಗ ಟಾಟಾ ಮೋಟರ್ಸ್ ತನ್ನ ಚಿಕ್ಕದಾದ ಆದರೆ ಪವರ್ ಫುಲ್ ಆಗಿರುವ ಕಾರಿನ ಮೇಲೆ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈಗಾಗಲೇ ಟಾಟಾ ಮೋಟರ್ಸ್ (Tata Motors) ರೇಂಜ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ಕಾರು ಆಗಿರುವ ಈ ಕಾರಿನ ಮೇಲೆ ಇನ್ನಷ್ಟು ಹೆಚ್ಚಿನ ಡಿಸ್ಕೌಂಟ್ ಸಿಕ್ಕಿ ಈಗ ಈ ಕಾರು ಮತ್ತಷ್ಟು ಎಫೋರ್ಡೇಬಲ್ ಆಗಿದೆ.

ಮಾರ್ಚ್ ತಿಂಗಳ ಆಫರ್ ನ ಪ್ರಕಾರ ಟಾಟಾ ಮೋಟರ್ಸ್ ಟಿಯಾಗೋ ಇವಿ (Tata Tiago EV) ಕಾರಿನ ಮೇಲೆ ಒಳ್ಳೆಯ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಕಂಪನಿಯ 2023 ಹಾಗೂ 20204 ಎರಡೂ ಮಾಡೆಲ್ ಗಳ ಮೇಲೆ ಡಿಸ್ಕೌಂಟ್ ಗಳಿದ್ದು ಈ ಡಿಸ್ಕೌಂಟ್ ಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಹಾಗಾದರೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಹಾಗೂ ಎಕ್ಸ್ ಶೋರೂಮ್ ಬೆಲೆ ಎಷ್ಟಾಗಲಿದೆ ಎಂಬುದನ್ನು ನೋಡೋಣ.

 

 

advertisement

ಟಾಟಾ ಟಿಯಾಗೋ (Tata Tiago EV) ದ ಎಕ್ಸ್ ಶೋರೂಮ್ ಬೆಲೆ ಈಗ 7.99 ಲಕ್ಷ ಇದೆ. ಈಗ ಈ ರೇಂಜ್ ನಲ್ಲಿ ಈ ಕಾರು ಉತ್ತಮವಾದ ಸೇಲ್ಸ್ ಅನ್ನು ಕಾಣುತ್ತದೆ. 2023ರ ಟಿಯಾಗೋ ಮಾಡೆಲ್ ನ ಮೇಲೆ ಎಕ್ಸ್ಚೇಂಜ್ ಬೋನಸ್ 15,000 ರೂಪಾಯಿಗಳು ಸಿಗಲಿದೆ 50,000 ಸಿಗಲಿದೆ. ಒಟ್ಟಿಗೆ 65,000ಗಳ ಡಿಸ್ಕೌಂಟ್ ಸಿಗಲಿದೆ. 20204 ರ ಮಾದರಿಯ ಮೇಲೆ ಎಕ್ಸ್ ಚೇಂಜ್ ಬೋನಸ್ 10,000 ಬೋನಸ್ 20,000 ಸಿಗಲಿದ್ದು ಒಟ್ಟಿಗೆ 35,000ಗಳೇ ಡಿಸ್ಕೌಂಟ್ ಸಿಗಲಿದೆ.

ಟಿಯಾಗೋ ದಲ್ಲಿ ಎಕ್ಸ್ ಇ, ಎಕ್ಸ್ ಟಿ, ಎಕ್ಸ್ ಝೆಡ್, ಎಕ್ಸ್ ಝೆಡ್ ಪ್ಲಸ್ ಮುಂತಾದ ಮಾದರಿಗಳು ಇವೆ. ಬೇಸ್ ವೇರಿಯಂಟ್ ಎಕ್ಸ್ ಇ ಆಗಿದ್ದು ಅತ್ಯಂತ ಕಡಿಮೆ ದರದಲ್ಲಿ ನಿಮ್ಮ ಕೈಗೆ ಸಿಗಲಿದೆ. ಈ ವೇರಿಯಂಟ್ ನಲ್ಲಿ ಬಾಡಿ ಕಲರ್ ಡೋರ್ ಹ್ಯಾಂಡಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಡಿ ಆರ್ ಎಲ್ ಗಳು, ಫಾಗ್ ಲ್ಯಾಂಪ್, ಒ ಆರ್ ವಿ ಎಂ, ಪುಶ್ ಬಟನ್ ಸ್ಟಾರ್ಟ್, ಎಲೆಕ್ಟ್ರಿಕ್ ಟೈಲ್ ಗೇಟ್, ಕ್ರೂಜರ್ ಕಂಟ್ರೋಲ್, ಹಿಂಬದಿಯ ವೈಪರ್ ಪವರ್ ವಿಂಡೋ, ರೈನ್ ಸೆನ್ಸಿಂಗ್ ವೈಪರ್ಸ್, ಆಟೋ ಹೆಡ್ ಲೈಟ್, ರಿಮೋಟ್ ಲಾಕ್ ಅಂಡ್ ಅನ್ ಲಾಕ್ ಮುಂತಾದ ಫೀಚರ್ಸ್ ಗಳು ಇವೆ.

 

 

ಟಾಟಾ ಟಿಯಾಗೋ (Tata Tiago EV) ಈ ಮಾಡೆಲ್ ನಲ್ಲಿ ಡ್ರೈವಿಂಗ್ ಆಗಿ ಎರಡು ಮೋಡ್ ಗಳನ್ನು ನೀಡಲಾಗುತ್ತಿದೆ. ಇದು ಸೊನ್ನೆಯಿಂದ 60 ಕಿಲೋಮೀಟರ್ ಪ್ರತಿ ಗಂಟೆಗೆ 5.7 ಸೆಕೆಂಡ್ ನಲ್ಲಿ ತಲುಪಲಿದೆ. ಬ್ಯಾಟರಿ ಗೆ ಗ್ಯಾರಂಟಿ ನೀಡಲಾಗುತ್ತಿದ್ದು ಇದು 8 ವರ್ಷಗಳು ಅಥವಾ ಒಂದು ಲಕ್ಷ ಅರವತ್ತು ಸಾವಿರ ಕಿಲೋಮೀಟರ್ ಆಗಿದೆ. ಇದರಲ್ಲಿ ಬ್ಯಾಟರಿ ಇದ್ದು ಒಂದು ಬಾರಿ ಫುಲ್ ಚಾರ್ಜ್ ಮಾಡಿದಾಗ 250 ಕಿಲೋ ಮೀಟರ್ ರೇಂಜ್ ನೀಡಲಿದೆ. 24 ಕಿಲೋ ವ್ಯಾಟ್ ಬ್ಯಾಟರಿಯ ಇನ್ನೊಂದು ಆಯ್ಕೆ ಇದ್ದು ಇದರಲ್ಲಿ 315 ಕಿ.ಮೀ ರೇಂಜ್ ಸಿಗಲಿದೆ.

advertisement

Leave A Reply

Your email address will not be published.