Karnataka Times
Trending Stories, Viral News, Gossips & Everything in Kannada

Ravi Shastri: ಸುನಿಲ್ ಗವಾಸ್ಕರ್ ಬಳಿಕ ಈ ಆಟಗಾರನೇ ಭಾರತದ ಅತ್ಯುತ್ತಮ ಓಪನರ್ ಅಂದ ರವಿ ಶಾಸ್ತ್ರಿ..

advertisement

ಇಲ್ಲಿಯ ತನಕ ಗವಾಸ್ಕರ್ ನಂತರದಲ್ಲಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಅವರನ್ನು ಅತ್ಯುತ್ತಮ ಓಪನರ್ ಎಂದು ಕರೆಯಲಾಗುತ್ತದೆ. ಟೆಸ್ಟ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಏಕೈಕ ಆರಂಭಿಕ ಆಟಗಾರ ಎಂದರೆ ಅದು ವೀರೇಂದ್ರ ಸೆಹ್ವಾಗ್. ಶತಕ, ದ್ವಿಶತಕ ಮತ್ತು ಸಿಕ್ಸರ್‌ಗಳೊಂದಿಗೆ ತ್ರಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಸೆಹ್ವಾಗ್. ಅವರ ನಂತರದಲ್ಲಿ ಅಂದರೆ ಇಂದಿನ ಪೀಳಿಗೆಯವರಲ್ಲಿ ರೋಹಿತ್ ಶರ್ಮಾ ಬೆಸ್ಟ್.ಟೆಸ್ಟ್ ಕ್ರಿಕೆಟ್‌’ನಲ್ಲಿ ಟೀಂ ಇಂಡಿಯಾದ ಉತ್ತಮ ಆರಂಭಿಕ ಆಟಗಾರ ಯಾರು ಎಂದಾಗ ಹೆಚ್ಚಾಗಿ ಕೇಳಿಬರುವ ಹೆಸರು ಸುನಿಲ್ ಗವಾಸ್ಕರ್ (Sunil Gavaskar), ವೀರೇಂದ್ರ ಸೆಹ್ವಾಗ್ (Virender Sehwag), ರೋಹಿತ್ ಶರ್ಮಾ (Rohit Sharma). ಗವಾಸ್ಕರ್ ಅವರು ಟೀಂ ಇಂಡಿಯಾದ ಟೆಸ್ಟ್ ಆರಂಭಿಕರಾಗಿ 34 ಶತಕಗಳೊಂದಿಗೆ 10,122 ರನ್ ಗಳಿಸಿದ್ದಾರೆ. ಆದ್ದರಿಂದಲೇ ಅವರನ್ನು ಟೀಂ ಇಂಡಿಯಾದ ಸಾರ್ವಕಾಲಿಕ ಅತ್ಯುತ್ತಮ ಟೆಸ್ಟ್ ಓಪನರ್ ಎಂದು ಪರಿಗಣಿಸಲಾಗಿದೆ. ಆದ್ರೆ ಈಗ ಮಾಜಿ ಕೋಚ್ ರವಿಶಾಸ್ತ್ರಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ರೋಹಿತ್ ಗಿಂತ ಈ ಆಟಗಾರ ಆರಂಭಿಕ ಆಟಕ್ಕೆ ಬೆಸ್ಟ್:

ಈ ಪೀಳಿಗೆಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ (Rohit Sharma) ಅತ್ಯುತ್ತಮ ಟೆಸ್ಟ್ ಓಪನರ್. ಸೆಹ್ವಾಗ್ ಅವರಂತೆ ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಸೆಹ್ವಾಗ್ ಮತ್ತು ಗವಾಸ್ಕರ್ ಅವರಿಗಿಂತ ರೋಹಿತ್ ಉತ್ತಮ ದಾಖಲೆ ಹೊಂದಿಲ್ಲದಿದ್ದರೂ, ಅವರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವುದು ನಿಜ. ಆದ್ರೆ ಇದೀಗ ಮಾಜಿ ಕೋಚ್ ರೋಹಿತ್ ಶರ್ಮಾ ಗಿಂತ ಮುರಳಿ ವಿಜಯ್ ಬೆಸ್ಟ್ ಎಂದು ಕ್ರಿಕೇಟ್ ಆಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಮಾಜಿ ಕೋಚ್ ಹೇಳಿದ್ದೇನು?

advertisement

ನನ್ನನ್ನು ಪ್ರಭಾವಿಸಿದ ಯುವ ಬ್ಯಾಟರ್ ಮುರಳಿ ವಿಜಯ್ (Murali Vijay). ಆತನನ್ನು ಚಿಕ್ಕಂದಿನಿಂದಲೂ ಬಲ್ಲೆ. ಕಾಲೇಜಿನಲ್ಲಿ ನಾನು ಅವನನ್ನು ಮೊದಲ ಬಾರಿಗೆ ನೋಡಿದ್ದು. ಅವರ ಆಟವನ್ನು ಇಷ್ಟಪಟ್ಟು ಡಿವಿಷನ್ ತಂಡಕ್ಕೂ ನಾನು ಶಿಫಾರಸು ಮಾಡಿದ್ದೆ. ಆಗಿನಿಂದ ಕ್ರಿಕೆಟಿಗನಾಗಿ ಅವರ ಪಯಣ ಆರಂಭವಾಯಿತು. ಸುನಿಲ್ ಗವಾಸ್ಕರ್ (Sunil Gavaskar) ನಂತರ ಮುರಳಿ ವಿಜಯ್ (Murali Vijay) ಟೀಂ ಇಂಡಿಯಾದ ಅತ್ಯುತ್ತಮ ಟೆಸ್ಟ್ ಓಪನರ್ ಎಂದು ರವಿಶಾಸ್ತ್ರಿ (Ravi Shastri) ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

 

 

ಮುರಳಿ ವಿಜಯ್ ಗಳಿಸಿದ ರನ್ ಎಷ್ಟು?

ವಿಜಯ್ ಅವರು 2008 ಮತ್ತು 2018 ರ ನಡುವೆ ಭಾರತದ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 100 ಬಾರಿ ಇನ್ನಿಂಗ್ಸ್​​ಗಳಲ್ಲಿ ಆರಂಭಿಕರಾಗಿ ಬ್ಯಾಟ್ ಬೀಸಿದ್ದು, 3880 ರನ್​ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 12 ಶತಕ ಮತ್ತು 15 ಅರ್ಧಶತಕಗಳು ಸೇರಿವೆ. ವಿಜಯ್ ಒಟ್ಟು ನಾಲ್ಕು ಬಾರಿ 150+ ಸ್ಕೋರ್ ಬಾರಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗಲೂ ಸಹ ಅವರ ಇನ್ನಿಂಗ್ಸ್​​ಗಳು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಭಾರತದ ಆರಂಭಿಕರ ರನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಅವರು, ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದಾರೆ.

advertisement

Leave A Reply

Your email address will not be published.