Karnataka Times
Trending Stories, Viral News, Gossips & Everything in Kannada

Mini Fortuner: 11 ಲಕ್ಷ ರೂ.ಗೆ ಮಿನಿ ಫಾರ್ಚುನರ್! ಖರೀದಿಸಲು ಮುಗಿಬಿದ್ದ ಜನ

advertisement

ಇಂದು ಪ್ರತಿಯೊಬ್ಬ ರಿಗೂ ಕಾರು ಖರೀದಿ ಮಾಡುವ ಕ್ರೇಜ್ ಹೆಚ್ಚಿದೆ. ಇಂದು ಮದ್ಯಮ ವರ್ಗದ ಜನರು‌ಕೂಡ ಕಾರು ಖರೀದಿ ಮಾಡಲು‌ ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಮಾರುಕಟ್ಟೆ ಗೂ ವಿವಿಧ ಪೀಚರ್ಸ್ ಮಾಡೆಲ್ ‌ನ ವಾಹನಗಳು ‌ಎಂಟ್ರಿ ನೀಡಿದ್ದು ಕಾರು ಪ್ರೀಯರನ್ನು ಹೆಚ್ಚು ಸೆಳೆಯುತ್ತಿದೆ. ಇದೀಗ ಪ್ರತಿಷ್ಠಿತ ಕಾರು ಕಂಪನಿಯಾದ ಟೊಯೊಟಾ (Toyota) ಕಿರ್ಲೋಸ್ಕರ್ ಮೋಟಾರ್ ಅರ್ಬನ್ ಕ್ರೂಸರ್ ಅನ್ನು ಮಾರುಕಟ್ಟೆ ಗೆ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ.

ಹೇಗಿದೆ ಈ ಕಾರು?

ಈ ಕಾರಿನ ಫೀಚರ್ಸ್ ಕೂಡ ವಿಭಿನ್ನ ವಾಗಿದ್ದು ಕಾರು ಪ್ರೀಯರನ್ನು ಹೆಚ್ಚು ಸೆಳೆಯಲಿದೆ. ಇದರ ಗುಣಮಟ್ಟವು ವಿಭಿನ್ನವಾಗಿದ್ದು ಅತ್ಯಾಧುನಿಕ ವಾದ ವಿನ್ಯಾಸವನ್ನು ಕೂಡ ಹೊಂದಿದ್ದು‌ ಇಂದು ಮಾರುಕಟ್ಟೆಯಲ್ಲಿ Toyota Urban Cruiser Hyryder, ಎಸ್‌ಯುವಿ ಇರಲಿದ್ದು ಇ, ಎಸ್, ಸಿ, ವಿ ‌ ರೂಪಾಂತರಗಳು ಕೂಡ ಇರಲಿದೆ.

ವೈಶಿಷ್ಟ್ಯ ವೇನು?

 

advertisement

 

  • ಈ ಕಾರಿನಲ್ಲಿ 6-ಏರ್‌ಬ್ಯಾಗ್‌, ABS ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ,ವೆಹಿಕಲ್ ಸ್ಟೆಬಿಲಿಟಿ ಕೂಡ ಇರಲಿದೆ.
  • ಈ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್ ನೊಂದಿಗೆ ಬರಲಿದೆ.
  • ಇನ್ನೂ ಹಿಂದಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಇರಲಿದ್ದು ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್ ಇತ್ಯಾದಿ ಸುರಕ್ಷತಾ ವೈಶಿಷ್ಟ್ಯಗಳನ್ನು ಕೂಡ‌ಹೊಂದಿದೆ.
  • ಈ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಟೊಯೋಟಾ ಹೈಬ್ರಿಡ್ ಸಿಸ್ಟಮ್ ಮತ್ತು ಎಲೆಕ್ಟ್ರಿಕ್ ಡ್ರೈವ್ ಟ್ರಾನ್ಸ್‌ಮಿಷನ್ ಕೂಡ ಒಳಗೊಂಡಿದ್ದು 68kW ಎಂಜಿನ್ ಔಟ್‌ಪುಟ್ ಮತ್ತು 59 kW ಮೋಟಾರ್ ಔಟ್‌ಪುಟ್ ಅನ್ನು ಕೂಡ ನೀಡಲಿದೆ.
  • ಅದೇ ರೀತಿ ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್‌ ಇತ್ಯಾದಿ ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿದೆ.
  • ಇನ್ನೂ ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಇರಲಿದ್ದು 19.39 ರಿಂದ 27.97 ಕೆಎಂಪಿಎಲ್ ಮೈಲೇಜ್ ನೀಡಲಿದೆ.

ಬೆಲೆ ಹೇಗಿದೆ?

 

 

ಮಾರುಕಟ್ಟೆಯಲ್ಲಿ ಇದೀಗ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ (Toyota Urban Cruiser Hyryder) ಎಸ್‌ಯುವಿ, ರೂ.11.14 ಲಕ್ಷದಿಂದ ಸುಮಾರು .20.19 ಲಕ್ಷ ರೂ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದ್ದು ಹಲವು ರೂಪಾಂತರಗಳು ಕೂಡ ಇರಲಿದೆ. ಒಟ್ಟಿನಲ್ಲಿ ಈ ಕಾರು ಆತ್ಯಕರ್ಷಕ ವಿನ್ಯಾಸ ‌ಪಡೆದಿದ್ದು ಗ್ರಾಹಕರನ್ನು ಮಾತ್ರ ಹೆಚ್ಚು ಸೆಳೆಯಲಿದೆ.

advertisement

Leave A Reply

Your email address will not be published.