Karnataka Times
Trending Stories, Viral News, Gossips & Everything in Kannada

IPL 2024: ಈ ವರ್ಷ ಕೊನೆಯ ಐಪಿಎಲ್ ಅಡಲಿದ್ದೇವೆ ಎಂದು ಪ್ರಕಟಿಸಿದ ಆಟಗಾರರಿವರು.

advertisement

ಇಂಡಿಯನ್ ಪ್ರೀಮಿಯರ್‌ ಲೀಗ್‌ ಕೇವಲ ಒಂದು ಟಿ20 ಲೀಗ್‌ ಮಾತ್ರವಲ್ಲ. ಇಡೀ ಕ್ರಿಕೆಟ್‌ ಜಗತ್ತು ಸಂಭ್ರಮಿಸುವ ಹಬ್ಬವಾಗಿದೆ. ಎರಡು ತಿಂಗಳ ಅವಧಿಯಲ್ಲಿ ಆಯೋಜನೆಯಾಗುವ ಟಿ20 ಲೀಗ್‌ ವೀಕ್ಷಣೆ ಸಲುವಾಗಿ ಕ್ರಿಕೆಟ್‌ ಜಗತ್ತು ಪ್ರತಿವರ್ಷ ಜಾತಕ ಪಕ್ಷಿಯಂತೆ ಎದುರು ನೋಡುತ್ತಿರುತ್ತದೆ. ಪ್ರತಿ ಆವೃತ್ತಿಯಲ್ಲೂ ಮೂಡಿ ಬರುವ ರೋಚಕ ಪಂದ್ಯಗಳು ಕ್ರಿಕೆಟ್‌ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ಐಪಿಎಲ್ ಜಗತ್ತಿನ ಅಚ್ಚು ಮೆಚ್ಚಿನ ಟಿ20 ಲೀಗ್‌ ಆಗಿದೆ. ಇನ್ನು ಈ ಸಲ ದಿನೇಶ್ ಕಾರ್ತಿಕ್ (Dinesh Karthik) ಹಾಗೂ ಎಂ ಎಸ್ ಧೋನಿ (MS Dhoni) ಅವರದು ಕೊನೆಯ ಪಂದ್ಯ ಹೇಳಲಾಗುತ್ತಿದೆ.

ಸುಳಿವು ನೀಡಿದ MS Dhoni:

 

 

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯತ ಹೇಳಿ ಮೂರು ವರ್ಷಗಳಿಗೂ ಹೆಚ್ಚು ಸಮಯ ಕಳೆದೆ. ಆದರೂ 42ರ ವಯಸ್ಸಿನಲ್ಲೂ ಇಂಡಿಯನ್ ಪ್ರೀಮಿಯರ್‌ ಲೀಗ್‌ ಅಖಾಡದಲ್ಲಿ ತಮ್ಮ ಆಟ ಮುಂದುವರಿಸಿದ್ದಾರೆ. ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ IPL 2024 ಟೂರ್ನಿಯಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್ (CSK) ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿದ್ದು, ಈ ಸಂದರ್ಭದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯುತ್ತಿರುವುದಾಗಿ ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಮೂಲಕ ತಮ್ಮದು ಇದು ಕೊನೆಯ ಆಟ ಎಂದು ಸುಳಿವು ನೀಡಿದ್ದಾರೆ.

advertisement

ಎಂಎಸ್‌ ಧೋನಿ (MS Dhoni) ಸಾರಥ್ಯದಲ್ಲಿ ಟೀಮ್ ಇಂಡಿಯಾ ಎರಡು ಬಾರಿ ವಿಶ್ವಕಪ್‌ ಗೆದ್ದ ಸಾಧನೆ ಮಾಡಿದೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ICC T20 ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ಧೋನಿ, ಬಳಿಕ 2011ರಲ್ಲಿ ಭಾರತಕ್ಕೆ ಒಡಿಐ ವಿಶ್ವಕಪ್‌ ಟೂರ್ನಿಯಲ್ಲೂ ಚಾಂಪಿಯನ್ಸ್‌ ಪಟ್ಟ ತಂದುಕೊಟ್ಟರು. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಭಾರತ ತಂಡಕ್ಕೆ ನಂ.1 ಪಟ್ಟ ಕೂಡ ತಂದುಕೊಟ್ಟಿದ್ದಾರೆ.

ಕೊನೆಯ ಪಂದ್ಯ ಎಂದ Dinesh Karthik:

 

 

RCB ತಂಡದ ಮೂಲಗಳ ಮಾಹಿತಿ ಪ್ರಕಾರ, ದಿನೇಶ್ ಕಾರ್ತಿಕ್ (Dinesh Karthik) ಈ ಬಾರಿಯ ಐಪಿಎಲ್​ನೊಂದಿಗೆ ವಿದಾಯ ಹೇಳುವುದು ಖಚಿತ. ಅಂದರೆ RCB ಈ ಸೀಸನ್​ನಲ್ಲಿ ಆಡುವ ಕೊನೆಯ ಪಂದ್ಯವೇ ಡಿಕೆ ಅವರ ಅಂತಿಮ ಐಪಿಎಲ್ ಪಂದ್ಯವಾಗಿರಲಿದೆ ಎಂದು ತಿಳಿಸಿದ್ದಾರೆ.ಇದರೊಂದಿಗೆ ಈ ಬಾರಿಯ ಐಪಿಎಲ್​ನೊಂದಿಗೆ ದಿನೇಶ್ ಕಾರ್ತಿಕ್ ವಿದಾಯ ಹೇಳುವುದು ಕನ್ಫರ್ಮ್​ ಆಗಿದ್ದು, ಈ ಮೂಲಕ 17 ವರ್ಷಗಳ ಐಪಿಎಲ್ ಕೆರಿಯರ್​ ಅನ್ನು ಅಂತ್ಯಗೊಳಿಸಲು ದಿನೇಶ್ ಕಾರ್ತಿಕ್ ನಿರ್ಧರಿಸಿದ್ದಾರೆ.2008 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಅಂದರೆ ಈಗಿನ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ದಿನೇಶ್ ಕಾರ್ತಿಕ್, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಅಂದರೆ ಈಗಿನ ಪಂಜಾಬ್ ಕಿಂಗ್ಸ್​ ಪರ ಆಡಿದ್ದರು.

2012 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪಾಲಾದ ಡಿಕೆ 2014 ರಲ್ಲಿ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮರಳಿದ್ದರು. 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 2022 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಡಿಕೆ ಈ ಬಾರಿಯ ಐಪಿಎಲ್​ ಮೂಲಕ ನಿವೃತ್ತಿ ಘೋಷಿಸಲಿದ್ದಾರೆ.

advertisement

Leave A Reply

Your email address will not be published.