Karnataka Times
Trending Stories, Viral News, Gossips & Everything in Kannada

Tesla: ಭಾರತೀಯರಿಗೆ ಸಿಹಿಸುದ್ದಿ ಕೊಟ್ಟ ಎಲನ್ ಮಸ್ಕ್ ಹಾಗೂ ಮುಕೇಶ್ ಅಂಬಾನಿ! ಏನದು ಗೊತ್ತಾ?

advertisement

ಸ್ನೇಹಿತರೆ, ಭಾರತದಲ್ಲಿ ಎಲೆಕ್ಟ್ರಿಕ್ ಆಟೋಮೊಬೈಲ್ ಇಂಡಸ್ಟ್ರಿ ಬಹಳ ವೇಗವಾಗಿ ಬೆಳೆಯುತ್ತಿದ್ದು, ಇದೀಗ ಈ ಆಟೋಮೊಬೈಲ್ ಬಿಸಿನೆಸ್ಗೆ(Automobile Business), ಪ್ರಪಂಚದ ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಎಲನ್ ಮಾಸ್ಕ್ ಮತ್ತು ಮುಕೇಶ್ ಅಂಬಾನಿ ಇಬ್ಬರು ಒಟ್ಟಿಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲೆಡೆ ಭಾರಿ ವೈರಲಾಗುತ್ತಿದೆ. ಈಗಾಗಲೇ ಅಬ್ರೋಡ್ನಲ್ಲಿ ಟೆಸ್ಲಾ ಕಂಪನಿ(Tesla company)ಯಿಂದ ಆಟೋಮೊಬೈಲ್ ಮಾರುಕಟ್ಟೆಯನ್ನು ಪ್ರವೇಶ ಮಾಡಿರುವಂತಹ ಎಲನ್ ಮಾಸ್ಕ್(Elon Musk), ಮುಕೇಶ್ ಅಂಬಾನಿ ಅವರೊಂದಿಗೆ ಸೇರಿ ನಮ್ಮ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ವಾಹನಗಳನ್ನು ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ಹೂಡಿದ್ದಾರೆ.

ಎಲನ್ ಮಾಸ್ಕ್ರವರ ಟೆಸ್ಲಾ (Tesla) ಕಂಪನಿಯೊಂದಿಗೆ ಕೈಜೋಡಿಸಲಿದ್ದಾರಾ? ರಿಲಯನ್ಸ್ ಮಾಲಿಕ ಮುಖೇಶ್ ಅಂಬಾನಿ!

ಪ್ರಪಂಚದಾದ್ಯಂತ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಟೆಸ್ಲಾ ಕಾರುಗಳು(Tesla cars) ಇದೀಗ ಭಾರತವನ್ನು ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಎಲನ್ ಮಾಸ್ಕ್ ಅವರು ಬರೋಬ್ಬರಿ ಎರಡು ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿ ಭಾರತದಲ್ಲಿ ಟೆಸ್ಲಾ ಪ್ಲಾಂಟ್ ರೂಪಿಸುವಂತ ಯೋಜನೆಯಲ್ಲಿದ್ದಾರೆ, ಇದಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿಯನ್ನು ರೂಪಿಸಲು ಸ್ಥಳವನ್ನು ಎದುರು ನೋಡುತ್ತಿದ್ದು ಇದೇ ತಿಂಗಳು ತಮ್ಮ ತಂಡವನ್ನು ಭಾರತಕ್ಕೆ ಕಳಿಸುವ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ ಮುಕೇಶ್ ಅಂಬಾನಿ(Mukesh Ambani)ಯವರ ರಿಲಯನ್ಸ್ ಕಂಪನಿ ಮತ್ತು ಎಲನ್ ಮಾಸ್ಕ್ರವರ ಟೆಸ್ಲಾ ಕಂಪನಿ ಜೊತೆ ಸೇರಿ ಪಾರ್ಟ್ನರ್ ಶಿಪ್ ನಲ್ಲಿ ಕೆಲಸ ಮಾಡಲಿರುವ ಮಾಹಿತಿಯು ಹರಿದಾಡುತ್ತಿದ್ದು, ಇದಕ್ಕೆ ಮುಕೇಶ್ ಅಂಬಾನಿ ಅವರಿಂದ ಯಾವುದೇ ಆಸಕ್ತಿ ವ್ಯಕ್ತವಾಗಿಲ್ಲ.

advertisement

Image Source: Upstox

ಎರಡು ಕಂಪನಿ ಒಂದಾದರೆ ಕಡಿಮೆ ಬೆಲೆಯಲ್ಲಿ ವಾಹನ ಲಭ್ಯ!

ಎಲನ್ ಮಾಸ್ರ ಟೆಸ್ಲಾ ಕಂಪನಿ ಭಾರತದಲ್ಲಿ ತಮ್ಮ ಬ್ರಾಂಚ್ ಒಂದನ್ನು ತೆರೆಯುವುದು ಬಹುತೇಕ ಕಂಫರ್ಮ್ ಆಗಿದೆ, ಆದರೆ ಟೆಸ್ಲಾ ಮತ್ತು ರಿಲಯನ್ಸ್ ಕಂಪನಿ ಎರಡು ಒಟ್ಟಾಗಿ ಆಟೋಮೊಬೈಲ್ ಸೆಕ್ಟರ್(Automobile Sector) ನಲ್ಲಿ ಕೆಲಸ ಮಾಡಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ. ಎಲನ್ ಮಾಸ್ಕ್ ಈಗಾಗಲೇ ಮುಕೇಶ್ ಅಂಬಾನಿ ಅವರ ಜೊತೆ ಈ ಕುರಿತು ಚರ್ಚೆ ನಡೆಸಿದ್ದು ಎರಡು ದೊಡ್ಡ ದೊಡ್ಡ ಕಂಪನಿಗಳು ಒಂದಾಗಿ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡಿದರೆ ಎಲೆಕ್ಟ್ರಿಕ್ ವಾಹನಗಳ ಯುಗಕ್ಕೆ ಹೊಸ ಆವಿಷ್ಕಾರ ಸೃಷ್ಟಿಯಾಗುತ್ತದೆ.

ಹೌದು ಸ್ನೇಹಿತರೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರು ಮಾಡುವುದರ ಜೊತೆಗೆ ಅದನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಬಹುದೆಂಬ ನಿರೀಕ್ಷೆ ಇದೆ. ಅಬ್ರಾಡ್ನಲ್ಲಿ ತಮ್ಮ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರುಗಳಿಂದ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಟೆಸ್ಲಾ ಕಂಪನಿ ಇದೀಗ ಭಾರತಕ್ಕೆ ಲಗ್ಗೆ ಇಟ್ಟು, ಅಗ್ರಸ್ಥಾನವನ್ನು ಅಲಂಕರಿಸಿರುವ ಟಾಟಾ ಹಾಗೂ ಮಾರುತಿ ಸುಜುಕಿ(Tata and Maruti Suzuki)ಯಂತಹ ಕಂಪನಿಯೊಂದಿಗೆ ನೇರವಾದ ಸ್ಪರ್ಧೆಗಿಳಿಯಲು ಸಂಪೂರ್ಣ ಸಜ್ಜಾಗಿದೆ.

advertisement

Leave A Reply

Your email address will not be published.