Karnataka Times
Trending Stories, Viral News, Gossips & Everything in Kannada

BH Number Plate: ಸರ್ಕಾರಿ ನೌಕರಿ ಇಲ್ಲದೆ ಇದ್ದರೂ ಕೂಡ ಸಿಗುತ್ತೆ BH ನಂಬರ್ ಪ್ಲೇಟ್! ಈ ಅರ್ಹತೆ ಇರಬೇಕು ಹೊಸ ರೂಲ್ಸ್

advertisement

BH ನಂಬರ್ ಪ್ಲೇಟ್ (BH Number Plate) ಗಳು ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡುವಂತಹ ವಾಹನಗಳಲ್ಲಿ ನೀವು ನೋಡಬಹುದಾಗಿದೆ. ಈ ವಿಚಾರದ ಬಗ್ಗೆ ಗೊತ್ತಿಲ್ಲದೆ ಇರುವವರಿಗೆ ಹೇಳುವುದೇನೆಂದರೆ  ಸರ್ಕಾರಿ ನೌಕರರಿಗೆ ನೀಡುವಂತಹ ನಂಬರ್ ಪ್ಲೇಟ್ ಆಗಿರುತ್ತದೆ ಆದರೆ ಸರ್ಕಾರಿ ನೌಕರಿಯಲ್ಲಿ ಇಲ್ಲದೆ ಇದ್ದರೂ ಕೂಡ ಈ ನಂಬರ್ ಪ್ಲೇಟ್ ಅನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳುವುದು ಅನ್ನೋದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

BH ನಂಬರ್ ಪ್ಲೇಟ್ (BH Number Plate) ಪಡೆದುಕೊಳ್ಳುವ ವಿಧಾನ:

2021 ರಲ್ಲಿ ಮೊದಲ ಬಾರಿಗೆ BH ನಂಬರ್ ಪ್ಲೇಟ್ ಅನ್ನು MoRTH ಸಂಸ್ಥೆಯಿಂದ ಪ್ರಾರಂಭಿಸಲಾಯಿತು. ಇದನ್ನು ಪ್ರಮುಖವಾಗಿ ಪದೇಪದೇ ಕೆಲಸಕ್ಕಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತಹ ವ್ಯಕ್ತಿಗಳಿಗೆ ಮಾಡಿಸಲಾಯಿತು. ಯಾಕೆಂದ್ರೆ BH ನಂಬರ್ ಅನ್ನು ಹಾಕಿಸಿಕೊಂಡರೆ ಪದೇಪದೇ ಬೇರೆ ರಾಜ್ಯಕ್ಕೆ ಹೋದರೆ ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿಯೇ BH ನಂಬರ್ ಪ್ಲೇಟ್ ಅನ್ನು ಜಾರಿಗೆ ತರಲಾಯಿತು. BH ನಂಬರ್ ಪ್ಲೇಟ್ ಕೂಡ ಕೆಲವೊಂದು ವಿಧದ ಜನರಿಗೆ ಮಾತ್ರ ಸಿಗುತ್ತದೆ ಹೀಗಾಗಿ ಆ ಅರ್ಹತೆಯ ನಿಯಮಗಳನ್ನು ನೀವು ಫಾಲೋ ಮಾಡಬೇಕಾಗಿರುತ್ತದೆ. ಇದಕ್ಕಾಗಿ ನೀವು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರು ಆಗಿರಬೇಕಾಗಿರುತ್ತದೆ. ಒಂದು ವೇಳೆ ನೀವು ಡಿಫೆನ್ಸ್ ಕ್ಷೇತ್ರದಲ್ಲಿ ಇಲ್ಲವೇ ಬ್ಯಾಂಕ್ ಉದ್ಯೋಗಿ ಅಥವಾ ಆಡಳಿತ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದರೆ ನಿಮಗೆ ಈ ನಂಬರ್ ಪ್ಲೇಟ್ ಸಿಗಬಹುದಾಗಿದೆ.

advertisement

ಪ್ರೈವೇಟ್ ಕೆಲಸದವರು ಕೂಡ ಈ ನಂಬರ್ ಪೇಟೆ ಪಡೆದುಕೊಳ್ಳಬಹುದಾಗಿರುತ್ತದೆ ಆದರೆ ಅದಕ್ಕೆ ನೀವು ಕೆಲಸ ಮಾಡುತ್ತಿರುವಂತಹ ಕಂಪನಿ ನಾಲ್ಕು ರಾಜ್ಯದಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಬ್ರಾಂಚ್ ಅನ್ನು ಹೊಂದಿರಬೇಕಾಗುತ್ತದೆ. ಇದರ ಜೊತೆಗೆ ನೀವು ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಆಗಾಗ ಹೋಗಬೇಕಾಗಿ ಬಂದಿದ್ರೆ ಮಾತ್ರ ನೀವು ಅರ್ಹರಾಗಿರುತ್ತೀರಿ.

BH ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ

  • MoRTH ಸಂಸ್ಥೆಯ ವಾಹನ ವಿಭಾಗದಲ್ಲಿ ಫಾರ್ಮ್ 20ನ್ನು ನೀವು ಭರಿಸಬೇಕಾಗಿರುತ್ತದೆ. ಒಂದು ವೇಳೆ ನಾಲ್ಕು ಕಿಂತ ಹೆಚ್ಚಿನ ರಾಜ್ಯದಲ್ಲಿ ಇಲ್ಲವೇ ಕೇಂದ್ರಾಡಳಿತ ಪ್ರದೇಶದಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಫಾರ್ಮ್ 60 ಭರಿಸಬೇಕು.
  • ನಿಮ್ಮ ಎಂಪ್ಲಾಯೀ ಐಡಿಯನ್ನು ಈ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ ಹಾಗೂ ಇದನ್ನು ಅವರು ಚೆಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ನೀವು ಆಯ್ಕೆ ಮಾಡುವಾಗ BH ಸೀರೀಸ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ ಹಾಗೂ ವರ್ಕಿಂಗ್ ಸರ್ಟಿಫಿಕೇಟ್ ಅಥವಾ ಅಫಿಶಿಯಲ್ ಐಡಿಯನ್ನು ನೀಡಬೇಕು. ಈ ಕೆಲಸವನ್ನು ಮುಗಿಸಿದ ನಂತರ ನಿಮಗೆ RTO, BH ಸೀರೀಸ್ ನಂಬರ್ ಅನ್ನು ಜಾರಿಗೊಳಿಸುತ್ತದೆ. ಇದಾದ ನಂತರ ಶುಲ್ಕವನ್ನು ಕಟ್ಟಿದ ಮೇಲೆ ನೀವು ಈ ನಂಬರ್ ಪ್ಲೇಟ್ ನಲ್ಲಿ
  • ಭಾರತದ ಯಾವುದೇ ಕಡೆಗಳಲ್ಲಿ ಕೂಡ ಹೊಸದಾಗಿ ನಂಬರ್ ಅನ್ನು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೆ ಓಡಾಡಬಹುದಾಗಿದೆ.

advertisement

Leave A Reply

Your email address will not be published.