Karnataka Times
Trending Stories, Viral News, Gossips & Everything in Kannada

Top Sell Car: ಮೂರು ವರ್ಷಗಳಲ್ಲಿ 1 ಲಕ್ಷ ಮೀರಿದ ಸೇಲ್! ಅತಿಹೆಚ್ಚು ಜನ ಖರೀದಿಸಿದ್ದಾರೆ ಈ ಅದ್ಭುತ ಕಾರನ್ನು.

advertisement

NISSAN MAGNITE: ನಿಸ್ಸಾನ್ ಮೋಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 30,000 ಯೂನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ದಾಖಲೆ ಸೃಷ್ಟಿ ಮಾಡಿದೆ. ಸತತ 3ವರ್ಷಗಳಲ್ಲಿ ಬರೋಬರಿ ಒಂದು ಲಕ್ಷಕ್ಕೂ ಹೆಚ್ಚಿನ ಸೇಲ್ ಆಗಿದ್ದು, ಪ್ರತಿ ವರ್ಷವೂ 30,000 ಯೂನಿಟ್ಗಳಲ್ಲಿ ಕಾರುಗಳನ್ನು ಮಾರಾಟ ಮಾಡುವಲ್ಲಿ ನಿಸ್ಸಾನ್ ಕಂಪನಿಯ(Nissan company) ಯಶಸ್ವಿಯಾಗಿದೆ. ಈ ಯಶಸ್ಸಿಗೆ ಕಂಪನಿಯ ಮಾಲೀಕರು ‘ತಮ್ಮ ಆತ್ಮೀಯ ಗ್ರಾಹಕರು, ಸಪ್ಲೈಯರ್ಸ್ಗಳು, ಡೀಲರ್ಸ್ಗಳು ಹಾಗೂ ಚೆನ್ನೈನಲ್ಲಿರುವ ಅಲೈನ್ಸ್ ಪ್ಲಾಂಟ್ನ ಜೊತೆಗೆ ತಮ್ಮ ನಿಸ್ಸಾನ್ ಟೀಮ್ ಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.

ಭಾರತೀಯ ಕಾರ್ ಪ್ರಿಯರ ಮನಸ್ಸನ್ನು ಕದ್ದ ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮೋಟಾರ್ ಇಂಡಿಯಾ ಕಂಪನಿಯು ತಯಾರು ಮಾಡಿ ಡಿಸೆಂಬರ್ 2020 ರ ವೇಳೆ ಮಾರುಕಟ್ಟೆಗೆ ಪರಿಚಯಿಸಿದಂತಹ ನಿಸ್ಸಾನ್ ಮ್ಯಾಗ್ನೈಟ್ ಕಾರು, ಭಾರತೀಯ ಕಾರ್ ಪ್ರಿಯರ(Car Lovers) ಮನಸ್ಸನ್ನು ಗೆದ್ದಿದ್ದು, ನಮ್ಮ ಭಾರತದಲ್ಲೇ ಬರೋಬ್ಬರಿ ಒಂದು ಲಕ್ಷ ಕಾರುಗಳು ಮಾರಾಟವಾಗಿದೆ.

15 ದೇಶಗಳಿಗೆ ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಪೊರ್ಟ್!

ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ನಿಸ್ಸಾನ್ ಮ್ಯಾಗ್ನೆಟ್, ಈವರೆಗೂ ಬರೋಬ್ಬರಿ 30,000 ಯೂನಿಟ್ಗಳಲ್ಲಿ ಮಾರಾಟ ಮಾಡಿದ್ದಾರೆ. ಜೊತೆಗೆ ಇಂಟರ್ನ್ಯಾಷನಲ್ ಹಂತದಲ್ಲಿಯೂ ಎಕ್ಸ್ ಪೋರ್ಟ್ ಆಗಿವೆ. ಹೌದು ಸ್ನೇಹಿತರೆ 15ಕ್ಕೂ ಹೆಚ್ಚಿನ ಹೊರ ದೇಶಗಳಿಗೆ ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಮಾರಾಟ ಮಾಡಲಾಗಿದ್ದು, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಾಂಗ್ಲಾದೇಶ, ಬ್ರೂನಿ, ಒಮಾನ್, ಕ್ವೂಟರ್, ಬಹರೈನ್ ಕಾವೈಟ್ ಹಾಗೂ ಇತ್ಯಾದಿ ದೇಶದ ಜನರು ನಿಸ್ಸಾನ್ ಮ್ಯಾಗ್ನೈಟ್(Nissan Magnite) ಕಾರನ್ನು ಬಹಳ ಇಷ್ಟಪಟ್ಟು ಖರೀದಿಸಲು ಮುಂದಾಗಿದ್ದಾರೆ.

advertisement

ಸತತ ಮೂರನೇ ವರ್ಷವೂ 30,000 ಯೂನಿಟ್ಗಳಲ್ಲಿ ಕಾರ್ ಮಾರಾಟ

1. ನಿಸ್ಸಾನ್ ಕಂಪನಿಯು ಗ್ರಾಹಕರ ಇಷ್ಟಾರ್ಥಗಳನ್ನು ಪೂರೈಸಲು ಹಲವು ರೂಪಾಂತರಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಟರ್ಬೊ, MT, AMT ಮತ್ತು CVT ನಂತಹ ರೂಪಾಂತರಗಳಲ್ಲಿ ಕಾರ್ ಲಭ್ಯವಿದೆ.

2. ಮ್ಯಾನುವಲ್ ಮತ್ತು ಆಟೋಮೆಟಿಕ್ ಟ್ರಾನ್ಸ್ ಮಿಷನ್ಗಳೊಂದಿಗೆ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಹೊಂದಿದೆ.

3. ಜೊತೆಗೆ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್, ವಯರ್ಲೆಸ್ ಫೋನ್ ಚಾರ್ಜಿಂಗ್ ಮತ್ತು 360° ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.

4. ಕಳೆದ ಜೂನ್ನಲ್ಲಿ, ಚೆನ್ನೈನಲ್ಲಿರುವ ಅಲಯನ್ಸ್ ಪ್ಲಾಂಟ್ನಲ್ಲಿ(Alliance Plant) ಬರೋಬ್ಬರಿ ಒಂದು ಲಕ್ಷ ನಿಸ್ಸಾನ್ ಕಾರುಗಳನ್ನು ತಯಾರು ಮಾಡಲಾಗಿತ್ತು. ಈ ವರ್ಷದಾರಂಭದೊಳಗೆ ಆ ಎಲ್ಲಾ ಕಾರುಗಳು ಸಂಪೂರ್ಣ ಮಾರಾಟವಾಗುವ ಮೂಲಕ ಕಂಪನಿ ತನ್ನ ಮೈಲುಗಳನ್ನು ಯಶಸ್ವಿಯಾಗಿ ತಲುಪುವುದರ ಜೊತೆಗೆ ಗೇಮ್ ಚೇಂಜರ್ ಆಫ್ ದಿ ಇಯರ್(Game Changer Of The Year) ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

5. ಕಳೆದ ಮೂರು ಹಣಕಾಸು ವರ್ಷಗಳಲ್ಲಿ, ಒಂದು ಲಕ್ಷಕ್ಕೂ ಮೀರಿದ ಸೇಲ್ ಆಗಿದ್ದು, ವರ್ಷಕ್ಕೆ 30,000 ಯೂನಿಟ್ ಗಳಲ್ಲಿ ಕಾರನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ನಿಸ್ಸಾನ್ ಕಂಪನಿ 3 ವರ್ಷಗಳು ದಾಖಲೆಯನ್ನು ಸೃಷ್ಟಿ ಮಾಡಿದೆ.

advertisement

Leave A Reply

Your email address will not be published.